ಕತ್ತೆ

ಮೇಷ್ಟ್ರು : "ಒಂದು ಪಾತ್ರೆಯಲ್ಲಿ ಸಾರಾಯಿ ಮತ್ತೊಂದು ಪಾತ್ರೆಯಲ್ಲಿ ನೀರು ಇಟ್ಟರೆ ಕತ್ತೆ ಯಾವುದನ್ನು ಕುಡಿಯುತ್ತದೆ?" ತಿಮ್ಮ : "ನೀರನ್ನು" ಮೇಷ್ಟ್ರು : "ಯಾಕೆ?" ತಿಮ್ಮ : "ಅದು ಕತ್ತೆಯಲ್ಲವಾ ಸಾರ್." *****

ಮೂರು ಇಬ್ಬನಿಗಳು

ಮರದ ರೆಂಬೆಯ ಹಸುರೆಲೆಯ ಹಾಸಿನಲ್ಲಿ ಕುಳಿತಿದ್ದವು, ಮೂರು ಇಬ್ಬನಿಗಳು. ಎಲೆಯ ಕೊನೆಯಿಂದ ಜಾರಿ ಬಿದ್ದು ಪ್ರಾಣ ಕಳಕೊಂಡ ಹನಿಗಳಿಗಾಗಿ ಮರುಗಿ ಕಣ್ಣೀರಿಡುತ್ತಿದ್ದವು. ಒಂದು ತುಂಟ ಹುಡುಗ ರೆಂಬೆ ಜಗ್ಗಿ ಉಯ್ಯಾಲೆ ಆಡುತ್ತಲೇ ಇದ್ದ. ಎಲ್ಲಾ...

ಗಳಿಗೆಬಟ್ಟಲ ತಿರುವುಗಳಲ್ಲಿ – ೯೭

ಹಸಿವಿಂಗಿಸುವುದೊಂದೇ ರೊಟ್ಟಿಗೆ ಹೊರಿಸಿದ ಹೊಣೆ. ಅಸ್ಮಿತೆಯ ಅರಿವಿನ ಬೀಜ ಏಕೆ ಬಿತ್ತು ಅದರೆದೆಗೆ? ತನ್ಮಯತೆಯಲಿ ಹಸಿವಿನಲಿ ಕರಗಲಾಗದ ಶಾಪ ತಾನೇ ಹೊತ್ತಿದೆ ಬೆನ್ನಿಗೆ. *****