ಕೆಲಸವಿದ್ದವರು ಮಾತಾಡುತ್ತಾರೆ. ದಿನವೂ ಅನೇಕ ಕಾಗದ ಪತ್ರಗಳಿಗೆ ಸಹಿ ಹಾಕುವುದರಿಂದ ಬಹಳ ಬೇಗನೆ ಸುಸ್ತಾಗುತ್ತಾರೆ. ಪ್ರತಿ ಮುಂಜಾನೆ ನುಣುಪಾಗಿ ಗಡ್ಡ ಹರೆಯುವ ಇವರ ಮುಂದಿನ ಜೇಬಿನಲ್ಲಿ ಸೀಸನ್ ಟಿಕೇಟು ಹಿಂದಿನದರಲ್ಲಿ ಬಾಚಣಿಗೆ ಇಲ್ಲದವರು ಮೌನವಾಗಿದ್ದಾರೆ....
ನಾನು ಯಾರು ಯಾರೋ ಆಗಿ ಬಿಟ್ಟಿದ್ದೇನೆ, ನಿಜವಾಗಿ ಯಾರಾಗಿರಬೇಕೆಂದು ನಿರ್ಧಾರಮಾಡಲು ಆಗಿಯೇ ಇಲ್ಲ. ನನ್ನ ಅಂಗಿಯೊಳಗೆ ಕಳೆದು ಹೋಗಿರುವ ಅವರೆಲ್ಲ ಬೇರೆ ಬೇರೆ ಊರುಗಳಿಗೆ ಹೋಗಿಬಿಟ್ಟಿದ್ದಾರೆ. ಹಾಂ ಈಗೆಲ್ಲ ಸರಿಯಾಗಿದೆ ಅನ್ನಿಸಿ ನಾನು ಜಾಣನಂತೆ...