Day: September 11, 2020

#ಕವಿತೆ

ನಾನು ಪ್ರೀತಿಸಿದ ಹುಡುಗಿಯರು

0
ಕಾಸರಗೋಡಿನ ಕಾರಡ್ಕ ಎಂಬಲ್ಲಿ ೧೯೪೦ ರಲ್ಲಿ ಜನನ. ಕಾಸರಗೋಡು, ತಿರುವನಂತಪುರ, ಹೈದರಾಬಾದುಗಳಲ್ಲಿ ವಿದ್ಯಾಭ್ಯಾಸ. ಇಂಗ್ಲೀಷ್ ಸಾಹಿತ್ಯದಲ್ಲಿ ಎಂ. ಎ.; ಭಾಷಾಶಾಸ್ತ್ರದಲ್ಲಿ ಪಿಎಚ್.ಡಿ. ಕೇರಳದ ಹಲವೆಡೆ ಇಂಗ್ಲೀಷ್ ಅಧ್ಯಾಪಕರಾಗಿ ವೃತ್ತಿಜೀವನ ಆರಂಭ; ಆನಂತರ ಹೈದರಾಬಾದಿನ ಉನ್ನತ ಶಿಕ್ಷಣ ಸಂಸ್ಥೆ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಡ್ ಫಾರಿನ್ ಲಾಂಗ್ವೇಜಸ್‌ನಲ್ಲಿ ಪ್ರಾಧ್ಯಾಪಕ.೨೦೦೨ರಲ್ಲಿ ನಿವೃತ್ತಿ.ಅಮೇಲೆ ಅಮೆರಿಕ, ಯೆಮೆನ್ ದೇಶಗಳಲ್ಲಿ ಅಧ್ಯಾಪನ. ಸದ್ಯ ಹೈದರಾಬಾದಿನಲ್ಲಿ ವಾಸ್ತವ್ಯ. ‘ಮುಖಾಮುಖಿ’ ಕವನಸಂಕಲನಕ್ಕೆ ಕೇರಳದ ಕುಮಾರನ್ ಆಶಾನ್ ಅವಾರ್ಡ್ ಮತ್ತು ಕಾಂತಾವರದ ವರ್ಧಮಾನ ಪ್ರಶಸ್ತಿ; ‘ಅವಧ’ ಕವನ ಸಂಕಲನಕ್ಕೆ ಮತ್ತು ‘ಸಮ್ಮುಖ’ ಲೇಖನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ‘ಅಕ್ಷಯ ಕಾವ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ೨೦೧೫ರ ಸಾಲಿನ ಪ್ರಶಸ್ತಿ ಲಭಿಸಿದೆ. ಅಲ್ಲದೆ, ಪುತ್ತೂರು ಕರ್ನಾಟಕ ಸಂಘದ ನಿರಂಜನ ಪ್ರಶಸ್ತಿ, ಮತ್ತು ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ. ಪ್ರಶಸ್ತಿಗಳೂ ದೊರಕಿವೆ.ಕರ್ನಾಟಕ ಸಹಿತ್ಯ ಅಕಾಡೆಮಿಯ ಗೌರವ ಸಾಹಿತ್ಯ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. ತಿರುಮಲೇಶ್ ಇಂಗ್ಲೀಷ್‌ನಲ್ಲೂ ಹಲವಾರು ಲೇಖನಗಳನ್ನು ಮತ್ತು ಪುಸ್ತಕಗಳನ್ನು ಬರೆದಿದ್ದಾರೆ.
*****
ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)

ಅವರೆಲ್ಲಿದ್ದಾರೆ ಈಗ? ಕಾಲ ಕಾಲಕ್ಕೆ ನನ್ನೆದೆಯ ತಿದಿಯೊತ್ತಿ ಜೀವಕ್ಕೆ ಜೀವ ಕೊಡುತಿದ್ದವರು? ಕೆಲವರಿದ್ದರು ಕಾಸರಗೋಡಿನ ಹಳೆಮನೆಗಳಲ್ಲಿ ದೀಪಗಳಂತೆ ಉರಿಯುತ್ತ-ಇನ್ನು ಕೆಲವರು ತಿರುವನಂತಪುರದಲ್ಲಿ, ತೀರ ಕೊನೆಯವಳು ಬಾರ್ಸಿಲೋನಾದ ಯಾವುದೋ ಬೀದಿಯಲ್ಲಿ ಈಗೆಲ್ಲಿಯೆಂದು ಹೇಳುವುದು ಹೇಗೆ-ಒಬೊಬ್ಬರಿಗು ಕೊನೆಯ ಪತ್ರ ಬರೆದು ಎಷ್ಟೋ ಕಾಲವಾಗಿದೆ. ಅವರ ವಿಳಾಸಗಳನ್ನೂ ಹರಿದು ಹಾಕಿದ್ದೇನೆ- ಅಚಾನಕವಾಗಿ ಎಂದಾದರೂ ಎದುರು ಸಿಕ್ಕಿದರೆ ಅವರ ಮುಖ ಕೆಂಪಾಗುತ್ತದೆ, […]

#ಪತ್ರ

ಪತ್ರ – ೫

0
ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)

ಪ್ರೀತಿಯ ಗೆಳೆಯಾ, ಆಶಾಢದ ಜೋರಾದ ಗಾಳಿ, ಮಳೆ ಇಲ್ಲ. ಆದರೆ ರಾಜ್ಯದ ಎಲ್ಲಾ ಡ್ಯಾಮ್ಗಳು ತುಂಬಿ ಹರಿದು ಪಕ್ಕದಲ್ಲಿದ್ದವರನ್ನು ಅಸ್ತವ್ಯಸ್ಥೆ ಮಾಡಿದೆ. ಚಿಕೂನಗುನ್ಯಾದ ಕಪಿ ಮುಷ್ಠಿಯಲ್ಲಿ ಇಡೀ ಊರು ಮುಳಗಿದೆ. ಶಾಲೆಯ ಮಕ್ಕಳ ಹಾಜರಾತಿ ಕೂಡಾ ಕಡಿಮೆ ಆಗಿದೆ. ಸರದಿ ಮೇಲೆ ಟೀಚರ್ ರಜೆ ತೆಗೆದುಕೊಂಡಿದ್ದಾರೆ. ನಮ್ಮೂರ ದಾವಾಖನೆಯಲ್ಲಿ ನರ್ಸಿಂಗ ಹೋಮಿನಲ್ಲಿ ರೋಗಿಗಳನ್ನು ಮಲಗಿಸಲು ಜಾಗಾಸಾಲದೇ, […]

#ಅನುವಾದ

ಪ್ರಾರ್‍ಥನೆ

0

ಮನೆಯ ಬಾಗಿಲು ಯಾರೂ ತಟ್ಟುವುದಿಲ್ಲ. ಯಾರೂ ಹೊಡೆಯಲು ಬರುವುದಿಲ್ಲ. ಶಪಿಸುವುದಿಲ್ಲ, ಬಯಸುವುದಿಲ್ಲ, ನನ್ನ ತೋಳಿಗೆ ಒರಗಿ ಅಳುವುದಿಲ್ಲ. ಹೇಳಬಾರದ ಮಾತು ಹೇಳಿದರೂ ಕೋಪಗೊಳ್ಳುವುದಿಲ್ಲ. ಕಬ್ಬಿಣದ ಬಾಗಿಲು, ಸುಮ್ಮನೆ ನೋಡುತ್ತೇನೆ. ರೇಲ್ವೆ ಗಾರ್ಡಿನ ವಿಧಿ, ಫ್ಲಾಟ್ ಫಾರಮ್ಮು. ಯಾರೂ ಹಂಚಿಕೊಳ್ಳುವುದಿಲ್ಲ. ಮರೆತ ಜಲ್ಲಿ ಕಲ್ಲು, ಜೋಲು ಬಿದ್ದ ದಾರದ ತುಣುಕು. ಗ್ರಹಬಂಧನಕ್ಕೆ ಯಾರೂ ಜವಾಬ್ದಾರರಲ್ಲ; ಹೊರಗೆ ಬೆಳಕು, […]