ಸತ್ತವರು ಯಾರು?

ಶೀಲಾ ಮತ್ತು ಮಾಲಾ ಅವಳಿ ಮಕ್ಕಳು. ಜ್ವರ ಬಂದ ಶೀಲಾಳು ಸತ್ತು ಹೋದಳು. ಮಾಲಾ ಸಂತೆಗೆ ಹೋದಾಗ ಪರಿಚಿತರೊಬ್ಬರು ಕೇಳಿದ್ರು" "ಮೊನ್ನೆ ಸತ್ತಿರುವುದು ಯಾರು? ನೀನಾ ನಿನ್ನಕ್ಕನಾ?" *****

ಎರಡು ಸಂತಾನ

ಆಕೆಗೆ ಹುಟ್ಟಿದ್ದು ಹತ್ತು ಮಕ್ಕಳು. ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆ ಸೇರಿದ್ದರು. ಗಂಡು ಮಕ್ಕಳು ಮದುವೆಯಾಗಿ ಬೇರೆ ಸಂಸಾರ ಹೂಡಿದ್ದರು. ಅವಳು ಸಾಕಿದ ಎರಡು ಸಂತಾನವೆಂದರೆ ಹಿತ್ತಲ ಮಾವು, -ಅಂಗಳದ ತೆಂಗು ವೃಕ್ಷಗಳು-...

ಗಳಿಗೆಬಟ್ಟಲ ತಿರುವುಗಳಲ್ಲಿ – ೫೬

ಮಾಡದ ತಪ್ಪು ಒಪ್ಪಿ ಕ್ಷಮೆ ಯಾಚಿಸುತ್ತದೆ ಬಡಪಾಯಿ ರೊಟ್ಟಿ. ತಾನೇ ತಪ್ಪು ಮಾಡಿಯೂ ಉದಾರವಾಗಿ ಕ್ಷಮಿಸುತ್ತದೆ ಪೀಠಸ್ಥ ಹಸಿವು. ಸ್ವಾಮಿತ್ವದ ಎದುರು ಲೋಕನಿಯಮಗಳು ತಲೆಕೆಳಗು. *****
cheap jordans|wholesale air max|wholesale jordans|wholesale jewelry|wholesale jerseys