ಗಳಿಗೆಬಟ್ಟಲ ತಿರುವುಗಳಲ್ಲಿ – ೩೩

ಹಸಿವು ತೀರಿಹೋದರೂ ಹಸಿ ಆರುವುದಿಲ್ಲ ರೊಟ್ಟಿ ಹಸಿವಿನೊಡಲಲ್ಲಿ ಕರಗಿಹೋದರೂ ರುಚಿ ತೀರುವುದಿಲ್ಲ. ಹಸಿವು ರೊಟ್ಟಿಗಳ ಆರದ ತೀರದ ನಿರಂತರ ಪಯಣಕೆ ಮೂಲ ಈ ಪರಸ್ಪರ ಸೆಳೆತ.

ನಿಶಬ್ದದ ತಂಗಾಳಿ ತಾಗಿ ಹೋಯಿತು

-೧- ಭೂಮಿ ಮೇಲೆ ಜಂಗಮನ ಹೆಜ್ಜೆ ತುಳಿಸಿಕೊಂಡರೂ ಪಾದಕ್ಕೆ ನೋವಾಯಿತೇ ಎನ್ನುತ್ತಾಳೆ ಅವ್ವ -೨- ದಡದಲ್ಲಿ ನಿಂತು ಮಾತಾಡಿದೆ ಕನಸುಗಳ ಕಳುಹಿಸಿದೆ ಆಕೆ ದೂರದಿಂದಲೇ ಹೂವಾದಳು -೩- ನಿನ್ನ ಶಬ್ದಕ್ಕೆ ಬದುಕು ಕಟ್ಟುವ ಕಸುವು...