ಹುಡುಗಿ ದಿನಚರಿ ಬರೆಯುತ್ತಾಳೆ

ಹುಡುಗಿ ದಿನಚರಿ ಬರೆಯುತ್ತಾಳೆ. ಸುಂದರ ಹಗಲುಗಳ ಇಂಚಿಂಚನ್ನೂ ವರ್ಣರಂಜಿತ ಪುಟಗಳಲ್ಲಿ ಸೆರೆಹಿಡಿಯುತ್ತಾಳೆ. ನೂರೆಂಟು ಬಾರಿ ಯೋಚಿಸಿದರೂ ಕರಾಳ ರಾತ್ರಿಯ ಬಗ್ಗೆ ಒಂದೇ ಒಂದು ಸಾಲು ಬರೆಯಲಾಗದೆ ಮಿಡುಕುತ್ತಾಳೆ. ಕಪ್ಪೆಲ್ಲವನ್ನೂ ಕಂಗಳಲ್ಲೆ ತುಂಬಿಕೊಂಡು ಶಬ್ದಗಳಿಗಾಗಿ ತಡಕಾಡುತ್ತಾಳೆ....

ವೃದ್ದಾಪ್ಯ

ಮನೆ ತುಂಬ ಹಳೆ ಹಳೇ ಮುರುಕಲು ಸಾಮಾನುಗಳು ಜಿರಲೆ ತಿನ್ನುತ್ತಿರುವ ಆಲ್ಬಮ್ಮುಗಳು ಮೆದುಗೊಂಡ ಹಮ್ಮುಬಿಮ್ಮುಗಳು ಒಂದೊಂದು ಉಸಿರಿಗೂ ಒಂದಿಷ್ಟು ದಮ್ಮು ಕೆಮ್ಮುಗಳು ಏನು ಮಾಡಿದರೂ ಉತ್ತರವೇ ಸಿಗದ ಸಮ್ಮುಗಳು. *****
cheap jordans|wholesale air max|wholesale jordans|wholesale jewelry|wholesale jerseys