ಕತ್ತಲೇ ಉಳಿದ ಬಗೆ?

ಕಾರಿರುಳ ಗವಿಯಲ್ಲಿ ಎಲ್ಲಿಂದಲೋ ಒಂದು ಕಿರಣ ಒಳಹೊಕ್ಕಂತೆ, ನನ್ನ ಜೀವನದಲ್ಲಿ ನಿನ್ನ ಎಳೆತನದ ನಗು ತುಂಬಿ ತೂರುತ ಬಂದು ಬೆಳಗಿತ್ತು ಎದೆಯನ್ನು, ಹೃದಯದುಮ್ಮಳದಲ್ಲಿ, ಆನಂದದೆಲರಿನಲಿ, ಕಳೆದ ಕಾಲದ ಕಳೆದ ದುಸ್ವಪ್ನಗಳನೆಲ್ಲ ಮರೆತು ನಾ ಕುಣಿದಿದ್ದೆ....