ನೀನೆಲ್ಲಿಂದು

ನೀನೆಲ್ಲಿಂದು? ಕಣ್ಮರೆಯಾದ ಚಿಕ್ಕೆ ಆಗಾಗ ಹೊಳೆದು ಕರಗುವಂತೆ ಮನದ ಮೆಲುಕಾಟದಲ್ಲಿ ಕನಸಾಗಿ ಕಾಣುವೆ ನಿನ್ನೊಡನಾಟದ ಹಾಲುಸಕ್ಕರೆಯ ಸವಿಯಂತೂ ನನಗಿಲ್ಲ ಆದರೆ ಆಗಾಗ ಫಳಕ್ಕೆಂದು ಮಿಂಚಿ ತೆರವಾದ ಬಾನಿಂದ ಮಳೆಯಂತೆ, ಅಳುವಿನಂತೆ ಇಳೆಗಿಳಿಯುವೆ, ನೆಲವೇನೂ ತೋಯದೆ...