ನೆನಪಿರಲಿ
Latest posts by ವೃಷಭೇಂದ್ರಾಚಾರ್ ಅರ್ಕಸಾಲಿ (see all)
- ಎಲ್ಲಿಗೆ ಓಡುವುದು - April 5, 2018
- ವೇಸ್ಟ್ ಬಾಡೀಸ್ - March 29, 2018
- ದೀಪ ಆರದಿರಲಿ - March 22, 2018
ಹೂಮೂಸುವಾಗ ಅದರೊಳಗಿರುವ ಕಾಯಿಯ ನೆನಪಿರಲಿ ಹಣ್ಣು ತಿನ್ನುವಾಗ ಅದರ ಬೀಜದ ನೆನಪಿರಲಿ ಬಣ್ಣ ಬಣ್ಣದ ಮುಗಿಲ ನೋಡುವಾಗ ಅದರ ಹಿಂದಿನ ನೀಲಾಗಸದ ನೆನಪಿರಲಿ ವಿವಿಧ ವಿತಾನಗಳಿಂಚರವ ಕೇಳುವಾಗ ಅದರಂತರ ಭಾವ ಬಗೆದೋರಲಿ, ಅಲೆಗಳಾನಂದವನನಭವಿಸುವಾಗ ಕೆಳಗೆ ತುಡಿಯುವ ಕಡಲ ತಿಳಿವಿರಲಿ, ಉಬ್ಬು ತಗ್ಗುಗಳನೇರಿಳಿಯುವಾಗ ಅದರುದ್ದ ಸಾಗುವ ದಾರಿಯ ಗುರಿಯಿರಲಿ, ಮಾಂಸವ ಸವಿಯುವಾಗ ಅದಕ್ಕೆ ಬೆಂಗೊಟ್ಟಿರುವ ಎಲುವಿನ ಹಂದರದರಿವಿರಲಿ […]