ಸೋಲು

ನೆಲಮುಗಿಲಿನೆತ್ತರಕು ನಿಂತಿದೆ ಭೂತ ಕಂಡ ನೆತ್ತರು ಕೆಂಡದ ಮೇಲೆ ಕುದಿಯುತಿದೆ ತನ್ನ ಬಾಲವನ್ನೇ ತಿನ್ನುತ್ತಾ ಸುರುಳಿಸುತ್ತಿಕೊಂಡಂತೆ ಆಗಿದೆ ಪಂಜರದಿಂದ ಹೊರಬಂದ ಪಕ್ಷಿ ಹಾರಲಾರದೆ ಹೊಯ್ದಾಡಿದಂತೆ ಸೋತಿದೆ ನಂದನವನದಲ್ಲಿ ಕಣ್ಣೀರ ಹೊಳೆ ಹೊದರಲ್ಲಡಗಿ ಹರಿಯುತ್ತದೆ ಗಳಗಳ...

ಖಾಲಿ ಶೀಷೆ

ಹಳೆ ಪೇಪರ್‍ ಖಾಲಿ ಶೀಷೆಯವ ಬೀದಿಯಲ್ಲಾ ಅಲೆದು ಸುಸ್ತಾಗಿ ಸೇಂದಿ ಅಂಗಡಿ ಸೇರಿದ; ಸೇಂದಿ ಶೀಷೆ ಖಾಲಿ ಮಾಡಿ ‘ಕೊನೆಗೂ ಖಾಲಿ ಶೀಷೆ ಒಂದಾದರೂ ದಕ್ಕಿತಲ್ಲಾ’ ಎಂದು ಸಾಂತ್ವನಗೊಂಡ! *****