Home / ಬಾಲ ಚಿಲುಮೆ

ಬಾಲ ಚಿಲುಮೆ

ಒಂದಾನೊಂದು ಊರಿನಲ್ಲಿ ದೇವಶರ್ಮನೆಂಬ ಬ್ರಾಹ್ಮಣನಿದ್ದನು. ಅವನು ವೇದ ಶಾಸ್ತ್ರಗಳನ್ನು ಬಲ್ಲವನು.  ದಿನವೂ ವೇದಗಳನ್ನು ಓದುವನು. ಶಾಸ್ತ್ರದಲ್ಲಿ ಹೇಳಿರುವಂತೆ ನಡೆಯುವನು. ಆಹಿತಾಗ್ನಿಯು (ಮನೆಯಲ್ಲಿ ಅಗ್ನಿಯನ್ನು ಇಟ್ಟುಕೊಂಡು ದಿನವೂ ಬೆಳಿಗ್ಗೆ ಸಂ...

ನೋಡದೆ ಮಾಡಿದರೆ. “ನೋಡದೆ ಮಾಡಿದರೆ” ಎಂಬ ಎರಡನೆಯ ತಂತ್ರದ ಮೊದಲನೆಯ ಶ್ಲೋಕವಿದು. ಅರಿಯದೆ, ನೋಡದೆ, ತಿಳಿಯದೆ ಪರಿಕಿಸದೆ * | ಮಾಡಲುಬಾರದು ಕಾರ್ಯವ ನಾಪಿತನಂತೆ ॥೧॥ * ಪರಿಕಿಸದೆ – ಪರೀಕ್ಷೆ ಮಾಡದೆ “ನಾಪಿತನು ಅಂತಹ...

ಒಂದಾನೊಂದು ಊರಿನಲ್ಲಿ ಚಿತ್ರಾಂಗನೆಂಬ ನಾಯಿಯಿತ್ತು. ಆ ಊರಿನಲ್ಲಿ ಕ್ಷಾಮವು ಬಂತು. ತಿನ್ನುವುದಕ್ಕೆ ಎಂಜಲೂ ಇಲ್ಲದೆ ನಾಯಿಗಳು ನಾಶವಾಗಿ ಹೋದುವು. ಅದರಿಂದ ಚಿತ್ರಾಂಗನು ಹೊಟ್ಟೆಯಪಾಡು ನೋಡಿಕೊಳ್ಳಲು ದೇಶಾಂತರಕ್ಕೆ ಹೋಯಿತು. ಅಲ್ಲೊಂದು ಊರಿನಲ್ಲಿ ...

ಒಂದಾನೊಂದು ಕಾಡಿನಲ್ಲಿ ಮಹಾಚತುರಕನೆಂಬ ನರಿಯು ಇತ್ತು. ಒ೦ದು ದಿನ ಅದಕ್ಕೆ ತಾನಾಗಿ ಸತ್ತ ಆನೆಯ ಹೆಣವೊಂದು ಸಿಕ್ಕಿತು. ಅದು ಆ ಹೆಣದ ಸುತ್ತಲೂ ತಿರುಗಿ ನೋಡಿತು. ಆನೆಯ ಚರ್ಮವನ್ನು ಕತ್ತರಿಸುವುದಕ್ಕೆ ಅದರ ಕೈಯಲ್ಲಾಗದು. ಆದರೂ ಅದನ್ನು ತಿನ್ನಬೇಕೆ...

ಒಂದು ಊರಿನಲ್ಲಿ ದಂಪತಿಗಳು ಇದ್ದರು. ಗಂಡನು ಮುದುಕನೆಂದು ಅವಳಿಗೆ ಅವನ ಮೇಲೆ ಮಮತೆಯಿರಲಿಲ್ಲ. ಯಾವಾಗಲೂ ಅದೇ ಚಿಂತೆಯಾಗಿ ಅವಳು ಮನೆಯಲ್ಲಿಯೇ ಇರುತ್ತಿರಲಿಲ್ಲ. ಹಾಗೆ ಸುತ್ತುತ್ತಿರುವ ಅವಳನ್ನು ನೋಡಿ ಒಬ್ಬ ತುಂಟನು, ಎಲೆ ಸುಂದರಿ, ನನ್ನ ಹೆಂಡತಿಯ...

ಒಂದಾನೊಂದು ಊರಿನಲ್ಲಿ ಶುದ್ಧ ಪಟನೆಂಬ ಅಗಸನು ಇದ್ದನು. ಅವನಿಗೆ ಒಂದು ಕತ್ತೆಯಿತ್ತು. ಅದು ಹೊಟ್ಟೆಗಿಲ್ಲದೆ ಬಹಳ ಇಳಿದುಹೋಗಿ ನಿಶ್ಶಕ್ತಿಯಾಗಿತ್ತು. ಆ ಅಗಸನು ಒ೦ದು ದಿನ ಎಲ್ಲಿಯೋ ಹೋಗಿ ಬರುತ್ತಿದ್ದಾಗ ಕಾಡಿನಲ್ಲಿ ಸತ್ತು ಬಿದ್ದಿದ್ದ ಹುಲಿಯೊಂದನ...

ನಂದನೆಂಬ ಒಬ್ಬಾನೊಬ್ಬ ರಾಜನು ಇದ್ದನು. ಸಮುದ್ರಗಳವರೆಗಿನ ಭೂಮಿಯೆಲ್ಲವೂ ಆತನದು. ಆತನಿಗೆ ವರರುಚಿಯೆಂಬ ಒಬ್ಬ ಮಂತ್ರಿಯಿದ್ದನು. ಆತನು ಸರ್ವಶಾಸ್ತ್ರಗಳನ್ನೂ ಬಲ್ಲವನು. ಆ ಮಂತ್ರಿಯು ಒಂದು ದಿನ ಹೆಂಡತಿಯೊಡನೆ ಸರಸವಾಡುತ್ತಾ ಇರುವಾಗ ಅವಳಿಗೆ ಕೋಪ ಬ...

ಒಂದಾನೊಂದು ಕಾಡಿನಲ್ಲಿ ಸಿಂಹ ದಂಪತಿಗಳು ಇದ್ದವು. ಸಿಂಹಿಯು ಒಂದು ಸಲ “ಎರಡು ಮರಿಗಳನ್ನು ಈದಿತು. ಸಿಂಹವು ದಿನವೂ ಹೋಗಿ ಬೇಟೆಯಾಡಿ ಆ ತಾಯಿ ಮಕ್ಕಳಿಗೆ ಮಾಂಸವನ್ನು ತಂದುಕೊಡುತ್ತಿತ್ತು. ಒಂದು ದಿನ ಬೇಟೆಯಿಂದ ಬರುವಾಗ ಒಂದು ನರಿಯ ಎಳೆಯ ಮರ...

ಒಂದಾನೊಂದು ಊರಿನಲ್ಲಿ ಒಬ್ಬ ಕುಂಬಾರನಿದ್ದನು. ಅವನ ಹೆಸರು ಯುಧಿಷ್ಠಿರ. ಅವನು ಒಂದಾನೊಂದು ದಿನ ಬಹು ವೇಗವಾಗಿ ಓಡಿಬರುತ್ತಾ ಒಡೆದ ಮಡಕೆಯ ತುಂಡಿನ ಮೇಲೆ ಬಿದ್ದು ತಲೆಯನ್ನು ಒಡೆದುಕೊಂಡನು. ಮೈಯೆಲ್ಲಾ ರಕ್ತವಾಗಿ ಹೇಗೆ ಹೇಗೋ ಮನೆಗೆ ಬಂದು ಸೇರಿದನು...

ಒಂದಾನೊಂದು ಕಾಡಿನಲ್ಲಿ ಕರಾಲಕೇಸರನೆಂಬ ಸಿಂಹವೊಂದಿತ್ತು. ಅದಕ್ಕೆ ಧೂಸರಕನೆಂಬ ಒಂದು ನರಿಯು ಆಳಾಗಿ ಇತ್ತು. ಆ ಸಿಂಹವು ಒಮ್ಮೆ ಒಂದು ದೊಡ್ಡ ಕೊಂಬಿನ ಆನೆಯೊಡನೆ ಹೋರಾಡುವಾಗ ಕೊಂಬಿನ ಏಟು ಬಿದ್ದು ಗಾಯವಾಗಿ ಮೇಲಕ್ಕೇಳಲಾರದೆ ಬಿದು ಹೋಯಿತು. ಅದು ಹಾ...

12345...37

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...