ಅರಿವಿಂಗೆ ಸಿಕ್ಕದುದ ನೆನೆಯಲಮ್ಮಬಹುದೆ ಅಯ್ಯಾ ನೆನಹಿಂಗೆ ಬಾರದುದ ಕಾಂಬುದು ಹುಸಿ ಮುಟ್ಟಿ ಪೂಜಿಸುವ ಮಾತು ಮುನ್ನವೇ ದೂರ ಚಿಕ್ಕಯ್ಯಪ್ರಿಯ ಸಿದ್ಧಲಿಂಗ ಇಲ್ಲ ಇಲ್ಲ ನಿಲ್ಲು ಮಾಣು [ನೆನೆಯಲಮ್ಮಬಹುದೆ-ಧ್ಯಾನಿಸಲು ಯತ್ನಿಸಬಹುದೆ-ಕಾಂಬುದು-ಕಾಣುವುದು...

ಅರಿಯಬಹುದು ಕುರುಹಿಡಬಾರದು ಭಾವಿಸಬಹುದು ಬೆರೆಸಬಾರದು ಕಾಣಬಹುದು ಕೈಗೆ ಸಿಲುಕದು ಅಖಂಡ ನಿರಾಳವ ಕಪಿಲಸಿದ್ಧಮಲ್ಲಿಕಾರ್ಜುನಾ ನಿಮ್ಮ ಶರಣರು ಬಲ್ಲರು [ನಿರಾಳ-ನೆಮ್ಮದಿ, ಖಚಿತ, ಅವ್ಯಕ್ತ, ಆಕಾಶ] ಸಿದ್ಧರಾಮನ ವಚನ. ಕಪಿಲಸಿದ್ಧಮಲ್ಲಿಕಾರ್ಜುನ ಅಖಂಡ-...

ಅರಸಿ ಅರಸಿ ಹಾ ಹಾ ಎನುತಿದ್ದೆನು ಬೆದಕಿ ಬೆದಕಿ ಬೆದಬೆದ ಬೇವುತಿದ್ದೆನು ಗುಹೇಶ್ವರಾ ಕಣ್ಣ ಮೊದಲಲ್ಲಿದ್ದವನ ಕಾಣೆನು ಅಲ್ಲಮನ ವಚನ. ಅಪರೂಪಕ್ಕೆಂಬಂತೆ ಅಕ್ಕನ ವಚನದ ರೀತಿಯಲ್ಲಿ ಭಾವ ತುಂಬಿಕೊಂಡ ವಚನವಾಗಿದೆ ಇದು. ಮೊದಲ ಎರಡು ಸಾಲುಗಳು ಅಕ್ಕನ ವಚನ...

ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತಾಯಿತ್ತು ಬರಲುಗೊಂಡ ಸಸಿಗೆ ಮಳೆ ಸುರಿದಂತಾಯಿತ್ತು ನೋಡಾ ಇಂದೆನಗೆ ಇಹದ ಸುಖ ಪರದ ಗತಿ ನಡೆದು ಬಂದಂತಾತ್ತು ನೋಡಾ ಎನಗೆ ಚೆನ್ನಮಲ್ಲಿಕಾರ್ಜುನಯ್ಯಾ ಗುರುಪಾದವ ಕಂಡು ಧನ್ಯಳಾದೆ ನೋಡಾ [ಅರಲುಗೊಂಡ ಬತ್ತಿದ ಬರ...

ಅಯ್ಯಾ ನೀನೆನ್ನ ಮೊರೆಯನಾಲಿಸಿದಡಾಲಿಸು ಆಲಿಸದಿರ್ದಡೆ ಮಾಣು ಅಯ್ಯಾ ನೀನೆನ್ನ ದುಃಖವ ನೋಡಿದಡೆ ನೋಡು ನೋಡದಿರ್ದಡೆ ಮಾಣು ನಿನಗಿದು ವಿಧಿಯೆ ನೀನೊಲ್ಲದೊಡೆ ಆನೊಲಿಸುವ ಪರಿಯೆಂತಯ್ಯಾ [ಆಲಿಸದಿರ್ದಡೆ ಕೇಳದಿದ್ದರೆ ಮಾಣು-ಬಿಡು,] ಅಕ್ಕಮಹಾದೇವಿಯ ವಚನ....

ಅಯ್ಯಾ ನಿನ್ನ ಮುಟ್ಟಿ ಮುಟ್ಟದೆನ್ನ ಮನ ನೋಡಾ ಬಿಚ್ಚಿ ಬೀಸರವಾಯಿತ್ತೆನ್ನ ಮನ ಹೊಳಲ ಸುಂಗಿಕಗನಂತೆ ಹೊದಕುಳಿಗೊಂಡಿತ್ತೆನ್ನ ಮನ ಎರಡೆಂಬುದ ಮರೆದು ಬರಡಾಗದೆನ್ನ ಮನ ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನಾ [ಬೀಸರ-ವ್ಯರ್ಥ, ಹೊಳಲ ಸುಂಕ...

ಅನೇಕ ತೆರದ ಯೋನಿಮುಖಂಗಳ ಪೊಕ್ಕು ನೀರ್‍ಗುಡಿಯಲೆಂದು ಪೋದಡೆ ಸುಡು ಪೋಗೆಂದು ನೂಂಕಿತ್ತೆ ಜಲ ಅದರಂತಿರಬೇಡಾ ಹಿರಿಯರ ಮನ ಮನವಿಚ್ಛಂದವಾಗದೊಂದೆಯಂದದಲಿಪ್ಪಂತಪ್ಪಾ ನಿಮ್ಮದೊಂದು ಸಮತಾಗುಣವನ್ನನೆಂದು ಪೊದ್ದಿರ್ಪುದು ಹೇಳಾ ಕಪಿಲಸಿದ್ಧಮಲ್ಲಿಕಾರ್ಜುನಾ ...

ಅತಿಮಥನವೆಂಬ ಯೋಗವೆನ್ನ ಗತಿಗೆಡಿಸಿತ್ತಯ್ಯ ದಿತಿಗೆಟ್ಟೆ ನಾನು ಅದರಿಂದ ಅತಿಶಯದ ತಾತ್ಪರ್ಯ ಗುರುಭಕ್ತಿಯನರಿಯದೆ ದಿತಿಗೆಟ್ಟೆನಯ್ಯ ತಾತ್ಪರ್‍ಯವನರಿಯದೆ ತವಕಿಸುವ ಮನವನು ನಿಮ್ಮ ಕಡೆಗೆ ತೆಗೆದುಕೊಂಡು ಅತಿಶಯದ ತಾತ್ಪರ್ಯ ಗುರುಭಕ್ತಿಯ ಈಯಯ್ಯಾ ಕಪಿಲ...

ಅಗಲಿದ ನಲ್ಲನ ಕನಸಿನಲಪ್ಪಿ ಸುಖಿಯಾದಿರವ್ವಾ ಕಂಡ ಕನಸು ದಿಟವಾದಡೆ ಅವ ನಮ್ಮ ನಲ್ಲನವ್ವಾ ಮನಸುಳ್ಳವರು ನೀವು ಪುಣ್ಯಗೈದಿರವ್ವಾ ಮಹಾಲಿಂಗ ಗಜೇಶ್ವರನನಗಲಿದಡೆ ನಿದ್ರೆಯೆಮಗಿಲ್ಲ ಕನಸಿನ್ನೆಲ್ಲಿ ಬಹುದವ್ವಾ [ದಿಟವಾದಡೆ-ನಿಜವಾದರೆ] ಉರಿಲಿಂಗದೇವನ ವಚನ...

ಅಂಬುವಿಲ್ಲದಿರ್‍ದಡೆ ಅಂಬುಜವನಾರು ಬಲ್ಲರು ನೀರಿಲ್ಲದಿರ್‍ದಡೆ ಹಾಲನಾರು ಬಲ್ಲರು ನಾನಿಲ್ಲದಿರ್‍ದಡೆ ನಿನ್ನನಾರು ಬಲ್ಲರು ನಿನಗೆ ನಾ ನನಗೆ ನೀ ನಿನಗೂ ನನಗೂ ಬೇರೊಂದು ನಿಜವುಂಟೆ ನಿಃಕಳಂಕ ಮಲ್ಲಿಕಾರ್‍ಜುನಾ [ಅಂಬು-ನೀರು, ಅಂಬುಜ-ತಾವರೆ, ನೀರಿಲ್ಲ...

1...45678...17