
ಎಲ್ಲಿ ಹೋದರೊ ಜನರು? ‘ಸಾಮರಸ್ಯದ ತವರು’ ಹೇಳುತ್ತ ಬಂದದ್ದು ಹುಸಿಯಾಯಿತೆ? ಸೇಡೆಂಬುದು ಈ ಭೂಮಿ ಹೆಸರಾಯಿತೆ? ಚಂದಿರನು ನಕ್ಕಾಗ ಮಂದಿರವು ಮುನಿದಿತ್ತು ಗುಡಿಸಲಿನ ಗರಿಯಲ್ಲಿ ಹರಿದಾಡಿತೊ- ಸೇಡು ಸರ್‍ಪವು ಸುತ್ತಿ ಸುಳಿದಾಡಿತೊ! ಬೆವರೊಡೆದ ಭೂಮಿಯಲ...
ಕೋಟೆ ಕೊತ್ತಲದಲ್ಲಿ ಕತ್ತಿ ಗೊರಸಿನ ಸದ್ದು ಒಳಗೆ ಅಂತಃಪುರದಲ್ಲಿ ರಾಣಿ ಒಂಟಿ. ಹೆಪ್ಪುಗಟ್ಟಿದ ನೆತ್ತರಲ್ಲಿ ಸೇಡು ಸೆಣಸಿನ ಹೆಜ್ಜೆ ಒಳಗೆ ಮಿಡಿಯುವ ನಾಡಿ ವಿವೇಕ ಒಂಟಿ. ಕೋಟೆ ಕಲ್ಲುಗಳಿಂದ ಕಾದ ನಿಟ್ಟುಸಿರು ಕತೆ ಬರೆಯುತ್ತಿದೆ ಮಣ್ಣು ಕಾಯುತ್ತ ಕ...
ಮರಗಳು ಮಾತಾಡುತ್ತವೆ ಮನುಷ್ಯರಲ್ಲ ಎಲೆಗಳು ಅಲೆದಾಡುತ್ತವೆ ನೆಮ್ಮದಿಯಿಲ್ಲ. ನಾಲಗೆ ನಂಬದ ನೆಲದಲ್ಲಿ ತೆನೆಗಳು ತುಂಬಿದ ತಲೆಯಲ್ಲಿ ಹೂಗಳು ಅರಳದ ಎದೆಯಲ್ಲಿ ಸತ್ತವು ಮಾತು ಮನುಷ್ಯರಲ್ಲಿ. ಮರುಕ ಹುಟ್ಟಿತು ಮರಗಳಿಗೆ ಕೊಂಬೆ ಚಾಚಿದವು ನಂಬಿ ನಕ್ಕವು ...
ತುಂಬಿಹುದು ತಾಯಿ ನನಗೆ ಒಂಬತ್ತು ತಿಂಗಳು ಹೇಗೆ ಹುಟ್ಟಲಿ ನಾನು ಈ ಮಣ್ಣಿನಲ್ಲಿ? ಮೇರೆ ಮೀರಿವೆ ಇಲ್ಲಿ ಜಾತಿ ಮತ ಧರ್‍ಮಗಳು ಹೇಗೆ ಹುಟ್ಟಲಿ ನಾನು ಈ ಹುಣ್ಣಿನಲ್ಲಿ? ತಾಯಿ ತಿನ್ನುವ ನೋವು ನನ್ನ ನೋವಾಗಿದೆ ಜೀವ ಅರಳುತ್ತಿರಲು ಬಿಸಿಲ ಧಗೆ ಬಿದ್ದಿದ...
ನಮ್ಮೂರಿನ ಕರಿಯ ಕಂಠದೊಳಗಿನ ಕೆಂಡದುರಿಯಲ್ಲಿ ಕೊಂಡ ಹಾಯುವ ಗೆಳೆಯ ಬಯಸುತ್ತಾನೆ ಮನೆಯ ಕನಸುತ್ತಾನೆ ಬೆಳೆಯ- ತೆನ ತೂಗೀತು! ಮನೆ ಮಾಗೀತು ಕುಡಿಕೆ ಮಡಕೆಗಳಲ್ಲಿ ಒರತೆ ಹುಟ್ಟೀತು ಎಂದು? ಆಗಸ್ಟ್ ಹದಿನೈದು ಹರಿಯಿತು ಚಿಂದಿ ಬಾಳಿನ ಬಟ್ಟೆ ಜನವರಿ ಇಪ್...
ಅಕ್ಷರವೆಂದರೆ ಅಕ್ಷರವಲ್ಲ ಅರಿವಿನ ಗೂಡು ಚಿಲಿಪಿಲಿ ಎನ್ನುತ ಮೇಲಕೆ ಹಾರುವ ಹಕ್ಕಿನ ಹಾಡು ಎದೆಯಲಿ ಅರಳುವ ಸಮತೆಯ ಸಂಕಟ ಆವರಿಸಿತು ಅರಿವು ಬಾಳಲಿ ಕೆರಳುವ ಮಣ್ಣಿನ ಮಾತು ಕಟ್ಟೊಡೆಯಿತು ನೋವು ಅಕ್ಷರ ಕಲಿಯುತ ಮುರಿಯಲಿ ಮೊದಲು ಶತಮಾನದ ಸಂಕೋಲೆ ಅರಿವ...
ಕಂಡೆಯಾ ಗೆಳೆಯಾ, ನೀನು ಕಂಡೆಯಾ ಕೌರವನ ಕಗ್ಗತ್ತಲ ಕವಡೆ ಕವಿಯುತ್ತ ತಿವಿಯುತ್ತ ಸೀರೆ ಸೆಳೆಯುತ್ತ ಸಭಾಪರ್‍ವವಾದದ್ದು ಕಂಡೆಯಾ ಶರೀರ ತುಂಬ ಸಿಂಹಾಸನ ತುಂಬಿ ಮಧುಮತ್ತ ನಾದ ಬಿಂದು ಎದೆಯನ್ನು ಸದೆ ಬಡಿದು ಆದದ್ದು ಮತ್ತೇನೂ ಅಲ್ಲ ಗೆಳೆಯ- ಅಧಿಕಾರ ಕ...








