ಕಾವ್ಯವೆಂದರೆ

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು || ಬರೆದುದೆ ಬದುಕಲ್ಲ ಬದುಕಿದ್ದು ತಾ ನಿಲುಕಲ್ಲ. ಕಾವ್ಯವೆಂದರೆ ಅದುವೆ ಜನನಮರಣದಾಚೆ ಈಚೆ ಬಾಳು || ಹೇಳುವರು-ಹೇಳಿದ್ದು,...

ಚಂದನ ಗೀತ

ಇಳಾ ನಿನ್ನ ಮಹಾ ಕಾವ್ಯಕೆ ಇದುವೆ ನನ್ನಯ ಪಲ್ಲವಿ ಬಾನುವಿನ ಪ್ರಣಯ ಪರಿಧಿ ಕಾಣಬಲ್ಲವನೇ ಭವಿ?|| ನಿನ್ನ ಅವನ ಆಂತರ್ಯದ ಅರಿವಿನರಿವು ದುಸ್ತರ ಅಂತರಂಗದಂತರಾಳದಾಳ ಎನಿಎನಿತೊ ಬಿತ್ತರ|| ಅವನ-ನಿನ್ನ ಮೌನ `ವಿಶ್ವ' ಜಗದ ಜಗಕೆ...

ವಿಸ್ಮಯ

ಕಾಣದ ಕೈಗಳ ಲೀಲ ಹಾದಿಯಲಿ ಸಾಗಿದೆ ವಿಶ್ವದ ತೇರು, ಮಾಣದ ಶಕುತಿಯ ಮಾಯಾದೋಳಲಿ ನಡೆದಿದೆ ಸೃಷ್ಟಿಯ ಉಸಿರು. ನಿನ್ನಯ-ನನ್ನಯ, ನಿನ್ನೆಯ ಇಂದಿನ ನಾಳೆಗಳಾ ಕತ್ತಲೆ ಬೆಳಕು ಬೀಳುತಲೇಳುತ ಸಾಗೆ ನಿರಂತರ ಶೂನ್ಯ ಥಳುಕು ಬಳುಕು....

ಸ್ಥಾವರ! ಜಂಗಮ?

ಅಂತರಂಗದ ಕದವ ತೆರೆಯಿಸೊ ಅಂತರಾತ್ಮ ವಾಣಿಯನಾಲಿಸು ಅಂತಕಾಂತನ ಕೃಪೆಯ ನೆಳಲಲಿ ಚಿಂತಾತ್ಮನ ಕೊನೆಗಾಣಿಸು || ಚಿತ್ತ ಚಿತ್ತಾರ ಬಿತ್ತರ ಬಣ್ಣ ಬದುಕಿನ ಕೆಡುಕಿಗೆ ನೀನು ನಾನು ಎಲ್ಲರಿಲ್ಲಿ ಮೃತ್ಯುಗೈಯಮಣ್ಣ ಬಿಂದಿಗೆ || ಬಿಸಿಲಗುದುರೆಯ ಸವಾರಿಯಲ್ಲಿ...

ಹಾಡು-ಪಾಡು

ಕುಸುಮವೊಂದು ಉಲ್ಲಾಸದಿಂದ ಅರಳಿನಿಂತು ನಕ್ಕಿತು | ನಭದ ನೀಲಿ ಬಣ್ಣ ಕಂಡು ನಾನೇ ಚೆಲುವೆ ಎಂದಿತು | ಇಳೆಯ ಮೇಲಣ ಕೊಳೆಯ ಕಂಡು ಹಮ್ಮಿನಿಂದ ಅಣಕಿತು | ಸುಳಿದು ಸೂಸೋ ತಂಗಾಳಿಗೆ ಒನಪಿನಿಂದ ಬಳುಕಿತು...

ಮಾನಸ ವೀಣ

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ  ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು ಕಡಲಿಗೂ ಹಿರಿದು ತಿಳಿವಿನ ಅಳವು ಸಮೀರನ ಹಿಂದಿಕ್ಕೂ ವೇಗದ ಲೀಲೆ ಅನಲನ ದಾಟಿಸೋ ಅಪುವಿನ ಓಲೆ ಮಾಯಾ...

ಛಾಯೆ

ಯಾವ ತೀರದಿ ನಿಲ್ಲಲಿದೆಯೋ ಜಗದ ಜೀವನ ನೌಕೆಯು... ಭೀತ ಛಾಯೆಯು ನಿತ್ಯ ಕಾಡಿದೆ ಯುದ್ಧ ಕಾರಣ ಛಾತಿಯು... ಕ್ಷಿಪಣಿ-ಯಕ್ಷಿಣಿ ನಭದ ರಂಗದಿ ರುದ್ರ ತಾಂಡವ ತಾಲೀಮಿದೆ... ನಂಬಿ-ನಂಬದ ಮಾತಿನೊರೆಯಲಿ ಜೀವ ಮಹತಿಯು ಸೊರಗಿದೆ... ವಿನಾಶಿಯಾಗಲು...

ಊರ್ಮಿಳೆ

ಕವಿಯ ಬರಹದಕ್ಷರದಲಿ ನಿನ್ನ ಬಾಳಿನಕ್ಕರ ತೋರಲಾಗದು... ಓ ಸೌಮಿತ್ರಾ ಪ್ರಿಯೆ ಊರ್ಮಿಳಾ... ಎಲ್ಲೆ ಇರಲಿ, ಹೇಗೆ ಇರಲಿ ಒಲಿದವಗೆ ಕೊರಳ ನೀಡಿದ ಚಿತ್ಕಳಾ ಶಬ್ದಮೀರಿದ ನಿಃಶಬ್ಧದಲ್ಲಿ ತವಸಿಯಾಗಿ ಸಾಗಿದೆ, ಸಂಗ ತೊರೆದ ನಿಸ್ಸಂಗದಲ್ಲಿ ಚೈತನ್ಯವಾಗಿ...

ಯಶೋಧರೆ…ಗೆ

ಏಕೆ ನೀನು ಮೌನ ವಹಿಸಿದೆ, ಮಾತನೊಲ್ಲದ ಶಿಲ್ಪವಾದೆ ಹೇಳೆ... ನೀ ಯಶೋಧರೆ? ಯಾವ ಕಾರಣ, ಯಾವ ಹೂರಣ, ತೋರಣದಿ ನಡೆದಿತು ನಿನ್ನ ಹರಣ, ಏನೋ ಅರ್ಥವ ಹುಡುಕೋಗಣ್ಣಿಗೆ, ತಿಳಿಯದಾಯಿತೆ ನಿನ್ನೊಲವ ಚರಣ, ಸತ್ಯ ಶುದ್ಧ...

ಮರಣ ಮೃದಂಗ

ಏಕೆ ಇನ್ನೂ ನಮ್ಮ ನಡುವೆ ವಿರಸ ಕಲಹ ಹರಡಿದೆ, ಕುರುಡ ಹಮ್ಮು ಬಿಮ್ಮುಗಳಲಿ ಮಾನವತೆಯು ನರಳಿದೆ... ಭೂಮಿ ಬಾಯ ತೆರೆಯುವಂತೆ, ಬಾನು ಬೆಂಕಿಯುಗುಳುವಂತೆ, ಸಮರ ತಂತ್ರ ನಡೆದಿದೆ... ಶಾಂತವೀಣೆ ತಂತಿ ಹರಿದ ದೇಶ ದೇಹದಲಪ...