ನೋಡಲ್ಲಿ ತಲೆಬುರುಡೆ ನೆಲದ ಮೇಲಲ್ಲಿ ! ಆಗಿಹುದು ಗೋಲ್ ಚಂಡು ಗೊಲ್ಲ ಬಾಲರಿಗೆಲ್ಲ. ಬೆಳೆದು ಬಾಳಿಹ ಅಸ್ತಿ ಅದೋ ನಾಯ ಬಾಯಲ್ಲಿ ! ಒಲವು ಗೆಲವಿನ ಬಾಳು ಮೂಕವಾಗಿಹುದಲ್ಲ ! ಓ ವೀರ ಕಾಣಿದೋ ಜೀವನಾಂತ್ಯವಿದೆಲ್ಲ ! ಆಗೋ ಆ ಗೋರಿ ಬರಿಯ ಸುಣ್ಣದ ಮಾರಿ !...

ಬಡಗಣ ದೆಡೆಗೀಂ ತೆಂಕಣ ದೆಡೆಗೆ ಓಡುತಿದೆ ಗಾಳಿ ತಾ ಮಾಡುತಿದೆ ಧಾಳೀ ಕಣ್ಣಿಗೆ ಕಾಣದೇ ಮಾಯದಿ ಮುಸುಕುತ ಆಡುತಿದೆ ಗಾಳಿ ತಾ ಮಾಡುತಿದೇ ಧೂಳೀ ದಣಿದಿಹ ದೇಹಕೆ ತಂಪಿನ ಕಂಪನು ತುಂಬುತಿದೇ ಸುತ್ತೀ ಹರ್ಷವ ತಾನೆತ್ತೀ ಒಂದುಪಕಾರವ ನಮ್ಮಿಂದರಿಯದೆ ಜೀವನವೀ...

ತಂಗಾಳಿ ಬೀರಿದೆ, ಬಿರುಗಾಳಿ ಬೀಸಿದೆ ಜಗವೆಲ್ಲ ನಲಿದಿದೆ, ಅಳುವಿನಲ್ಲಿ ಮುಳುಗಿದೆ ಗಗನ ಹೊಳೆದಿದೇ, ಮೇಘ ಮುತ್ತಿದೆ ಮೊಗವೊಂದು ಬಾಡಿದೆ, ಮತ್ತೊಂದು ಅರಳಿದೆ ಅತ್ತ ಮರಣ-ಇತ್ತ ಜನನ; ಇಳೆಯೊಳೆಲ್ಲೆಡೆ ಕತ್ತಲಂತೆ ಬೆಳಕಂತೆ ಎರಡು ಕೂಡಿವೆ ತುತ್ತೊಂದೆಡ...

ಇನಿತೊಂದು ವಾಸನೆಯ ನಿನಗಾರು ಇತ್ತರು ? ನಿನ್ನ ಕಂಡವರೆಲ್ಲರ ಕೆಳೆಬೆಳೆಸಿ ಸೆಳೆಯಲು ನಿನ್ನಯಾ ಮುಡಿಬಯಸುತಿರಲಿನಿಯರು ಉನ್ನತದಲಿಹ ಮೃಡ ಬಿಡದೆ ಕೊಂಡೊಯ್ವನು ನಿನ್ನಯಾ ಗಮಗಮಿಸುವಾ ಸೊಗಸನೀವ- ಸುತ್ತು ತುಂಬುತಿಹ ಪರಿಮಳವು ಅನಿಲನಾ ಒಡನೆ ಸುಳಿಸುಳಿದು...

ಮುಂದೆ ಇಡುವ ಅಡಿಯು ಜಾರಿ ಓಡಿ ಬರುವ ಗಾಡಿ ಹಾರಿ ತುಂಬಿತೇನೋ ಕೆಂಪು ರಂಗು ದಾರಿ ಹಾ ಬಿದ್ದ ಜೀವ ಉಸಿರ ಕಾರಿ ! ಬಾಳಿಗೆಲಿವ ಧ್ಯೇಯ ಬಲಿ ಆಯ್ತು ನಲಿವ ಹೊಸ ದೀಪ ನಂದಿ ಹೋಯ್ತು ಎಲುಬು ಮಾಂಸ ಸಿಡಿದು ಹೋಳಾಯ್ತು ತುಂಬಿ ಬೆಳೆದ ದೇಹ ತುಂಡಾಯ್ತು ! ಹರ...

ಅದಾವ ಲೀಲಾಜಾಲ ಮಾಯೆ ಮುಸುಕು! ಬಲೆಯೋ, ಭವಣೆಯೋ, ಬಣ್ಣ ಜೀವನ ವರ್ಣವೈಚಿತ್ರ್ಯವೋ ? ಕನಸು ನನಸಿನ ನೋಟ; ಮಿಂಚದಾ ಬದುಕು! ಇಹ-ಪರ ಪಾತಾಳಗಳ ಬಗೆಯು ಅರಿಯಲಸದಳವೋ ? ಭುವಿಯನೇ ಹೆತ್ತು, ನೀರು ಜೀವವ ಇತ್ತು ಅನಿಲ ಅನಲರ ತೆತ್ತು; ನಮ್ಮ ನಿತ್ತ ತಂದೆ ಇರ...

ಹುಲ್ಲೊಳು ಹಾವಾಗಿ, ಹಾವಿಗೆ ಹೆಡೆಯಾಗಿ ಹರಿಯುತಿದೆ ಚಲುವ ಗಂಗೆ! ಹಸುವಿಗೆ ಕರುವಾಗಿ ಮೊಲೆಗೆ ಹಾಲಾಗಿ ಕರೆಯುತಿದೆ ಸರ್ಗ ಗಂಗೆ! ಶಿವನ ಜಟದಿಂದ; ಹಿಮದ ಶೃಂಗದಿಂದ ಇಳಿಯುತಿದೆ ಸೊಗಸು ಇಳೆಗೆ. ನದಿಯ ನೋಟವು; ಓಡುವಾ ಚಲುವಿಂದ ನುಸುಳುತಿದೆ ಬಾಳ ಸವಿಗ...

ಕರುಣ ಹರಿಸಿ, ದಾರಿ ತೋರಿ ತಾರಿಸೆನ್ನನು ವರವ ನೀಡಿ, ನನ್ನ ತೀಡಿ ಮುನ್ನಡೆಸು ಇನ್ನು ಓ ತಾಯೆ ನೀ ದಾಯೆ ಕಾಯೆ ಎನ್ನನು ನಿನ್ನ ಹೃದಯ ಗಂಗೆ ಹರಿದು ಹರಿಸಲಿನ್ನು ನಿನ್ನ ನಾರಿ ಹೃದಯವಹುದು ಕಮಲ ನನ್ನ ಮನವು ಇಹುದು ತುಮುಲ ತಾಕಲಾಟ ಚನ್ನ ಚಲುವ ಚಿನ್ನ ...

ವಿಚಾರವನ್ನು ಕೇವಲ ಪ್ರಚಾರದ ಘಟ್ಟದಲ್ಲಿ ನೆಲೆ ನಿಲ್ಲಗೊಡದೇ, ಆಚಾರದ ಅಂಕಣದಲ್ಲಿ ಕ್ರಿಯಾಶೀಲ ಗೊಳಿಸಿದವರು ಶರಣರು ಶರಣೆ ರೆಮ್ಮವ್ವೆ… ‘ ಆಚಾರವೇ ಪ್ರಾಣ ಲಿಂಗವಾದ ರಾಮೇಶ್ವರಲಿಂಗ” ವೆಂದು ಸಾರಿದ್ದಾಳೆ. ಅಂತರಂಗದ ಚಿಂತನೆಗಳನ್ನು ಪ್...

ಎಣ್ಣೆ ದೀವಿಗೆ ಹಿಡಿದು ಪಥವನರಸುವ ವೀರ ತಿಳಿಯಲಾರೆಯಾ ತಿಂಗಳನ ಬೆಳಕು ? ಸವಿಯ ತಂಗಿರಣ ಛಾಯೆಗಂಜಿಹುದು ತಿಮಿರ ! ಬಾ ಇಲ್ಲಿ ಕಂಡಿಹುದು ದಿವ್ಯ ಬೆಳಕು! ಭಕ್ತಿ ಬಾನಿನ ತಿಲಕ ಚಂದಿರನು ಬಸವಣ್ಣ ಆ ಶರಣ ಸಾತ್ವಿಕತೆಯ ಸವಿಯ ಬಾ ಲಾಸ್ಯ ಲಾವಣ್ಯದ ಲೀಲಾ ...