
ಕಾರಚುಮ್ಮರ್‍ಯಾಕ ಮಿರ್‍ಚೀಯ ಭಜಿಯಾಕ ನೋಡೀಕಿ ಸಣ್ಣಾಕಿ ನಕ್ಕಾಳಾ ಗಿಡತುಂಬ ಗಿಳಿಯಾಕ ನೆಲತುಂಬ ಹೊಳಿಯಾಕ ಚನ್ನಂಗಿ ಹೂವಾಗಿ ಹೊಕ್ಕಾಳಾ ||೧|| ಸುರ್ರೆಂದು ಕಡದಾಂಗ ಕೆನಿಮೊಸರು ನಕ್ಕಾಂಗ ಈ ಹುಡಿಗಿ ಬೆಣ್ಯಾಗಿ ಜಿಗದಾಳಾ ಕೊಕ್ಹೊಕ್ಕ ಕ್ಯಾಕೀಯ ಯಕ್ಕೀ...
ಹಸಿರು ಬಳೆಯ ಹೊಗರು ಕಳೆಯ ಚಂದ್ರ ಚಲುವ ಮೋಹಿನಿ ಹೂವು ಮುಡಿಯ ಹಾವು ಜಡೆಯ ಕೂಹು ಕೂಹು ಕಾಮಿನಿ ||೧|| ನೀನೆ ವೀಣೆ ನೀನೆ ಮೇಣೆ ನೀನೆ ನೀನೆ ಕೋಮಲೆ ತನನ ತನನ ಮನನ ಮನನ ಕಾವ್ಯ ಮಾಲೆ ಊರ್ಮಿಳೆ ||೨|| ಯಾವ ಕನಸು ಯಾವ ಮನಸು ತುಂಬಿ ತುಂಬಿ ತುಳುಕಿದೆ ...
ಭಜನಿ ಕೇಳಿದಿಯೇನ ನನಸಜನಿ ರಜನಿ ಹೂಳಿದಿಯೇನ ||ಪಲ್ಲ|| ಗುರುರಾಯ ಬಂದಾನ ಗಂದ್ಹೆಣ್ಣಿ ಎರದಾನ ಜಡಿತುಂಬ ಕ್ಯಾದಿಗಿ ಹೆಣೆದಾನ ರುದ್ರಾಕ್ಷಿ ಹೂವಿಲ್ಲ ವಿಭೂತಿ ಪತ್ರಿಲ್ಲ ಹೊಸ ಸೀರಿ ನಡಮುಟ್ಟಿ ಉಡಿಸ್ಯಾನ ||೧|| ಎಂಥ ಚಂದನ ಭಜನಿ ಸಂಗಮ ಶಿವಭಜನಿ ಬಾಲ...
ಆಡು ಬಾಬಾ ಕೂಡು ಬಾಬಾ ಬೆಳಗಿನಂಗಳ ಹೊಳೆಯಲಿ ಹಾಡು ಬಾಬಾ ನೀಡು ಬಾಬಾ ನಿಜದ ನಿರ್‍ಮಲ ಕೊಳದಲಿ ||೧|| ಎತ್ತ ನೋಡಲಿ ಸುತ್ತ ಓಡಲಿ ಒಲವಿನಮೃತ ಮಿಲನಜಂ ಸತ್ಯ ಸೋಂಸೋಂ ತೋಂತೋಂ ತನನ ತಂತನ ತನನ ಓಂ ||೨|| ಗಾಳಿ ಬಿಂಗರಿ ಮುಗಿಲ ಸಿಂಗರಿ ತುಂಬಿ ತಿರುಗಿದ...
ಸಾಮೇರ ಮಠದಾಗ ಚಪ್ಪಲ್ಲು ಮಠಮಾಯಾ ಅಯವತ್ತು ರೂಪಾಯಿ ಗಪ್ಪಗಾರಾ ||ಪಲ್ಲ|| ಬ್ಹಾಳ್ಬಾಳ ಭಕ್ತೀಲಿ ಕೈ ಮುಗುದು ಹೋಗಿದ್ದೆ ಜೋರ್‍ಜೋರು ಚಪ್ಪಲ್ಲು ಮಂಗಮಾಯಾ ಹುಳ್ಳುಳ್ಳ ಹುಣಿಸೆಣ್ಣು ಹಲ್ಲೆಲ್ಲ ಚಳ್ಳಣ್ಣು ಚಂದುಳ್ಳ ನನಭಕುತಿ ಚೂರುಚಾರಾ ||೧|| ಸಾಮೇರ...
ರತುನ ದಿಂದ ರತುನ ಕಂಡೆ ಕುತನಿ ಗಾದಿ ಕಂಡೆನೆ ತಂಪು ತನನ ಸಂಪು ಪವನ ನಿವುಳ ಹವುಳವಾದೆನೆ ||೧|| ಮುಗಿಲ ಗಾನ ನಗೆಯ ಯಾನ ಹಗೆಯ ಹೊಗೆಯ ನಂದಿಸಿ ನೆಲದ ತಾಳ ಪಕ್ಷಿ ಮೇಳ ವೃಕ್ಷ ವೃಕ್ಷ ತುಂಬಿಸಿ ||೨|| ನೋಡು ತೆಂಗು ನೋಡಿ ನಂಬು ಇಹಕೆ ಮಹಕೆ ಹೊಂದಿದೆ ...
ಏನ್ಚಂದ ಏನ್ಚಂದ ನಮ್ಮೂರ ಕಾಲೇಜು ಹನುಮಂತ ದೇವ್ರಾಂಗ ಮುದ್ದು ಯವ್ವಾ ಹುಡುಗೋರು ಮುದುಮುದ್ದ ಹುಡಿಗೇರು ಸುದಸುದ್ದ ಕಲಸೋರು ಕಲಸಕ್ರಿ ಕಣ್ಣಿಯವ್ವಾ ||೧|| ಲೈಬ್ರೀಯ ಪುಸ್ತೋಕು ಲೈಬ್ರ್ಯಾಗ ಕುಂತಾವ ಕುಂತಾರ ಹುಡುಗೋರು ಗೇಟಿನ್ಯಾಗ ಥೇಟ್ ಥೇಟ ಕಾಮಣ್...
ಹಗುರ ಹಗುರ ಹೂವ ಮೇಲೆ ಹೂವು ಗಲ್ಲ ಹೂವಿಸು ತನನ ತನನ ಹನಿಯ ಮೇಲೆ ಜೇನ ಹನಿಯ ಗಾನಿಸು ||೧|| ಮೆಲ್ಲ ಮೆಲ್ಲ ಮಧುರ ಪಾದ ಚಿಗುರ ಮೇಲೆ ತುಂಬಿಸು ದಲದ ದಲದ ಎಲೆಯ ಮೇಲೆ ಹಸಿರ ಪ್ರೀತಿ ರೂಪಿಸು ||೨|| ಮಂದ ಮಂದ ಪುಂಗಿ ಪವನ ಮುಗಿಲ ಮೇಲೆ ತೇಲಿಸು ಚಂದ ಚ...
ಹಾಸಿಗಿ ಹಾಸಾಕ ಬಂದೇನ ನಾ ಗೆಣತಿ ಹಾಸಿಗಿ ಹಾಸಾಕ ನಿಂತೇನ ||ಪಲ್ಲ|| ಗೆಣಿಯಾನು ಬರತಾನ ಗೆಣತೀಯ ಬೇಡ್ತಾನ ಮಖಮಲ್ಲು ಹಾಸೀಗಿ ಮಾಡ್ತೇನ ಬೀಸಣಿಕಿ ಇಡತೇನ ಹೂಹಣ್ಣು ಕೊಡತೇನ ಬೆಚ್ಚಂಗ ಕುತನೀಯ ಹಾಕ್ತೇನ ||೧|| ದೇವರಾ ಹೆಸರಾಗ ದೇವಕಿ ಬಸರಾದ್ರ ಬಾಣೆಯ...
ನಿನ್ನ ಒಂದು ನೋಟ ಸಾಕು ಕೋಟಿ ಜನ್ಮ ಸಾರ್ಥಕಾ ನಿನ್ನ ಒಂದು ನಗೆಯು ಸಾಕು ಕಷ್ಟ ಕೋಟಿ ಚೂರ್ಣಕಾ ||೧|| ನೀನೆ ನೀನು ಕಾಮಧೇನು ಪುಂಗಿ ನಾದ ಪವನಪಂ ನೀನೆ ಕಂಪು ತಂಪು ಇಂಪು ಸೊಂಪು ಸುಮನ ಸೋಮಪಂ ||೨|| ಲಲನೆ ಲಲನೆ ಚಲನೆ ಚಲನೆ ಹಲಲ ಹಲಲ ಹಲ್ಲಣ್ಣ ನೀನ...







