ಪುಟ್ಟಹಕ್ಕಿ ರೆಕ್ಕೆ ಬಿಚ್ಚಿ ಹುಡುಕಾಡುತ್ತಿದೆ ಅಷ್ಟ ದಿಕ್ಕಿಗೂ ಸುದ್ದಿ ಕಳಿಸಿ ಹಸಿರ ರೆಂಬೆ ಕೊಂಬೆಗಾಗಿ ಕಾಯುತ್ತಿದೆ ಹಕ್ಕಿ ಮೇಲೆ ದಿಟ್ಟಿ ಕೆಳಗೆ ಹಾರುವ ಹಕ್ಕಿಗೂ ಕನಸು ಸ್ವಂತ ಸೂರಿನ ಬದುಕು ರೆಕ್ಕೆ ಬಿಚ್ಚಿದಂತೆ ಕನಸಬಿಚ್ಚಿದ ಹಕ್ಕಿಗೆ ಮಧು...

ಕಂದೀಲಿನ ಬೆಳಕಿನಲಿ ಬೊಚ್ಚು ಬಾಯಿ ಮುದುಕಿಯ ಕನವರಿಕೆ, ಕದಲಿಕೆ ಒಂದೊಂದು ನೆರಿಗೆಯಾಳದಲೂ ಒಂದೊಂದು ನೆನಪು ಒಂದಿಷ್ಟು ಪುಳಕ ಸಾಕಷ್ಟು ದುಗುಡ ಆಳ ಆಳಕ್ಕಿಳಿದಂತೆಲ್ಲ ನೆನಪು ಬೇರುಗಳಿಳಿಸಿದ ಕಿತ್ತೆಸೆಯಲಾರದ ಹುಳ ಕೊರೆದ ಕಾಂಡ ಮುಸ್ಸಂಜೆಯ ಇಳಿ ಹೊತ...

ಸರ್‍ರನೇ ಬರ್‍ರನೇ ಗಿರಗಿರ ಸುತ್ತುವ ಕೆಟ್ಟ ಬಿರುಗಾಳಿಗೆ ಸಿಕ್ಕ ಮನ ಟಪ್ಪೆಂದು ಗೋಣು ಮುರಿದಿದೆ ಸತ್ತ ಮನದ ಹೆಣಭಾರವ ಹೊತ್ತ ಜೀವ ನಲುಗಿದೆ ಸತ್ತ ಮನಕೆ ಸಂಸ್ಕಾರ ಬೇಡವೇ? ಕೊಳೆತು ನಾರೀತು ಜೋಕೇ! ಮಣ್ಣಿಗಿಡುವೆಯಾ ಅಗ್ನಿಗಿಡುವೆಯಾ ಸಾಗಲಿ ಕಾರ್ಯ ...

ಅಲ್ಲೆಲ್ಲೊ ಸುತ್ತಿ ಗಂಟುಕಟ್ಟಿ ಮೂಲೆಗೆಸೆದಿದ್ದೆ ಆಗಂಟಿನೊಳಗಿತ್ತು ಒಂದಿಷ್ಟು ನೆನ್ನೆಗಳೂ ಲಜ್ಜೆಬಿಟ್ಟು ಗಂಡ್ಹುಡುಗಿಯಾಗಿದ್ದ ಮಂಗನಾಗಿ ಮರಕೋತಿಯಾಡಿದ್ದ ಹೆತ್ತವರ ಕಣ್‌ಸನ್ನೆಗಂಜದ ಮೋರೆ ತಿರುವಿನಕ್ಕ, ನಾಳೆಗಳ ನೆನೆಯದ ಒಂದಿಷ್ಟು ತವಕಿಸದ ಸವಿ...

ಪಟ್ಟಣಕ್ಕೆ ಹೋಗುವೆನೆಂದು ಕುಣಿಯುತ್ತಿರುವ ತಮ್ಮ ಕುಮಾರ ಕಂಠೀರವ ತಂಗಿಯನ್ನು ನೋಡಿಯಾದರೂ ಬದಲಾಗಲಿ, ಅವಳ ಸಾಧನೆ ಅವನಿಗೆ ಸ್ಫೂರ್ತಿಯಾದೀತೆಂದು ನಿರೀಕ್ಷಿಸಿದ್ದರು ಸುಂದರೇಶ್. ಗಂಡು ಮಗನಾದ ತಮ್ಮ ಮಗನೇ ಕೃಷಿಯಲ್ಲಿ ಆಸಕ್ತಿ ತೋರುತ್ತಿಲ. ತೋಟವೆಂದ...

ಸ್ಫೂರ್ತಿಯ ಮದುವೆ ಮುಗಿಸಿಕೊಂಡು ಮನೆಗೆ ಬಂದ ಮೇಲೂ ಇಳಾ ಅದೇ ಗುಂಗಿನಲ್ಲಿದ್ದಳು. ಅವಳ ಮದುವೆಯದ್ದೆ ಮಾತು ಮನೆಯಲ್ಲಿ. ಅಜ್ಜಿಯ ಬಳಿ, ನೀಲಾಳ ಬಳಿ ಆ ಬಗ್ಗೆ ಹೇಳಿದ್ದ ಹೇಳಿದ್ದು. ನಿಜಕ್ಕೂ ಈ ಕಾಲದಲ್ಲಿ ಇಂತಹ ಮದುವೆಗಳ ಅವಶ್ಯಕತೆ ಇದೆ. ಸುಮ್ಮನೆ ...

ಸ್ಫೂರ್ತಿ ನಿವಾಸನ ಮನೆಯಿಂದ ಬಂದ ಮೇಲೆ ಕೊಂಚ ದಿನ ಎಲ್ಲದರಲ್ಲೂ ನಿರಾಸಕ್ತಳಾಗಿದ್ದಳು. ನಿವಾಸನ ಕುಟುಂಬದ ಕಥೆ ಕೇಳಿ, ಅವನ ಮೇಲಿದ್ದ ಗೌರವ ಆದರ ಮತ್ತಷ್ಟು ಹೆಚ್ಚಾಗಿತ್ತು. ಜೊತೆಗೆ ಅನುಕಂಪ ಕೂಡ ಸೇರಿಕೊಂಡಿತು. ಪಾಪ ನಿವಾಸ್ ಅದೆಷ್ಟು ಸಂಕಟ ಅನುಭ...

ಟೂರ್ ಮುಗಿಸಿ ಬಂದ ಇಳಾ ಮಂಕಾಗಿಯೇ ಇದ್ದಳು. ಪ್ರವಾಸದ ಆಯಾಸವೆಂದು ತಿಳಿದುಕೊಂಡ ಅಂಬುಜಮ್ಮ ‘ತೋಟಕ್ಕೆ ಒಂದೆರಡು ದಿನ ಹೋಗಲೇಬೇಡ. ಏನು ಮಾಡಬೇಕೊ, ಇಲ್ಲಿಂದಲೇ ಹೇಳು’ ಎಂದು ಕಟ್ಟುನಿಟ್ಟಾಗಿ ಹೇಳಿ ಅವಳನ್ನು ಯಾವ ಕೆಲಸ ಮಾಡೋಕೂ ಬಿಡಲಿಲ್ಲ. ಆಳುಗಳು ...

ತೋಟಕ್ಕೆ ಗಿಡಗಳ ಮಧ್ಯೆ ಬಾಳೆ ಹಾಕಬೇಕು ಅಂದುಕೊಂಡಿದ್ದ ಇಳಾ ಮೊದಲು ಮಣ್ಣು ಪರೀಕ್ಷೆ ಮಾಡಿಸಬೇಕು ಅಂತ ಗೊತ್ತಾದ ಮೇಲೆ ಅದನ್ನು ಮಾಡಿಸಿದಳು. ಮಣ್ಣು ಪರೀಕ್ಷೆ ಮಾಡಿಸಿ ಬಾಳೆ ಹಾಕಬಹುದು ಅಂತ ಗೊತ್ತಾದ ಮೇಲೆ ಅಂಗಾಂಶ ಕಸಿ ಪದ್ಧತಿಯಿಂದ ಬಾಳೆ ಬೆಳೆದರ...

ಸ್ಫೂರ್ತಿ ಊರಿಂದ ಬಂದ ಮೇಲೆ ಮತ್ತೆ ಊರಿಗೆ ಹೋಗಬಾರದೆಂದು ನಿರ್ಧರಿಸಿದ್ದಳು. ತನ್ನದಿನ್ನು ಓದು ಮುಗಿದಿಲ್ಲ-ಆಗಲೇ ಅಪ್ಪ ಮದುವೆ ಮಾಡುವ ಪ್ರಯತ್ನ ನಡೆಸಿದ್ದು ಅವಳಿಗೆ ತುಂಬಾ ನೋವಾಗಿತ್ತು. ಯಾಕಾಗಿ ಅಪ್ಪ ಇಷ್ಟು ಅವಸರಿಸಿದ್ದು ಎಂದೇ ತಿಳಿಯಲಿಲ್ಲ....

1...56789...11