
ನನ್ನ ಮಿದುಳು ದಳವೇರಿ ದಳ್ಳಿಸಿತು ಸ್ವರ್‍ಣದೀಪ್ತಿ ಇಳಿಯೆ. ಮನದ ಕರಿನೆರೆಯ ಹುಳುಗಳೆಲ್ಲ ಹೊತ್ತೇರಿ ನಿದ್ದೆ ತಿಳಿಯೆ. ಜ್ಞಾನಮಯದ ಉದ್ದೀಪನಕ್ಕೆ ಪ್ರಜ್ವಲಿತವಾದ ಮೇಲೆ. ಶಾಂತ ಕಾರ್‍ತಿಕದ ನಟ್ಟನಡುವೆ ಉರಿವಂತೆ ಪ್ರೇಮಜ್ವಾಲೆ. ಕೊರಳಿಗಿಳಿದು ಬಂದಿ...
ಮನದ ರಿಂಗಣದ ರಂಗಭೂಮಿಯನು ಅಗೆದು ಬಗೆದು ನಾನು ಆತ್ಮಮೌನಿ ಮುನಿಯಾದೆ ಬಾನಿನಲಿ ನಿಂತ ಹಾಗೆ ಭಾನು. ಪ್ರಾಣ ಅಲ್ಲ; ಹೊತ್ತರಿಯೆ ನಾನು; ಕ್ಷಯರಹಿತ ಚಂದ್ರನಾಗಿ ಸನಾತನದ ಆ ಬ್ರಹ್ಮಗೋಲದಲಿ ನಾನೆ ಕೇಂದ್ರವಾಗಿ. ಮುಕ್ತನಾದೆ ನಾ, ತೀರಿ ಹೋಯ್ತು, ಆ ಅಲ್ಪ...
ನನ್ನ ಜೀವಾಲಿಂಗನಾಂಗದಲ್ಲಿ ಪೂರ್‍ಣ ಪ್ರಪಂಚ ಕೃತ್ತಿಕೆಯ ಕಿಚ್ಚಗಸ್ತ್ಯನ ತಪಃಸುಖವು. ಜೀವಜೀವದ ರೂಪರೂಪದಲಿ ನಾ ಕಾಂಬೆ ನನ್ನದೇ ಮೈಯ ಮತ್ತೊಂದು ಮುಖವು. ನನ್ನ ನೋಡುವ ನೋಟ ನನ್ನದೇ ಕಣ್ಣಾಟ ಎಲ್ಲೆದೆಯ ಮಿಡಿತ ನನ್ನೆದೆಯ ಠಾವು. ನನ್ನ ನರದಲಿ ಹರಿಯುತ...
ಸುಸಮರ್‍ಥನಾದ ವಿದ್ಯುತ್ ಪುತ್ರನೊಬ್ಬ ತಾನೀ ಭೂಮಿಗಿಳಿದು ಬಂದ ಅಪ್ರತಿಮ ತ್ವರಿತಗತಿ ಅಗ್ನಿ-ಪಾದಗಳಿಂದ. ಮಾನವನ ಮೈ ಕಟ್ಟು ಘನಗರ್‍ಜನೆಯ ತೊಟ್ಟು, ನರಗರ್‍ಭದಲ್ಲಿ ಹುಟ್ಟಿತ್ತು ಬೆಳಕು. ಸ್ವರ್‍ಗದತಿ ಶಾಂತಗತಿ, ಮಹಿಮೆಯಾ ಮಾಧುರ್‍ಯ, ಪರಿಶುದ್ಧರಾ...
ಅಂದೆ ನೆಲವು ಪಡೆದೀತು ಅಮರ ಜೀವಂತ ಶಾಂತಿಯನ್ನು ಎಂದು ನಾಡ-ನಡೆವಳಿಕೆಯಲ್ಲಿ ನೆಲೆಗೊಂಬುದೊಂದೆ ನಿಜವು. ಆ ಪೂರ್‍ಣ ನಿಜದ ನೆಲೆ ಮೊಲೆಯ ಬಯಸಿ ಭಕ್ತಿಯಲಪೇಕ್ಷಿಸುವೆವು. ನೀ ಪೂರ್‍ಣ ಮಾಡು ಹೇ ದೊರೆಯೆ! ಎಲ್ಲಿಯೂ ಬಯ್ತ ಬಯಕೆಯನ್ನು. *****...








