
ಹೊಗೆ ಮೋಡ ಹಿಂಜಿ, ಕಣ್ಮರೆಯಾಗುವಂತೆ, ನೆನೆ- ಸಿದ ರೂಪ ಹುಡಿಯಾಗತಿದೆ; ಮಬ್ಬು ಕವಿದು ಬರು- ತಿದೆ; ಸ್ವಪ್ನಲೋಕದೊಳು ಆಕಾರ ಪ್ರಳಯವಿರು- ವಂತೆ, ತುಂಬಿದೆ ನಿರಾಕಾರ ತಮ. ಚಿತ್ತಘನ ನಿಬಿಡ ವನ; ಹೊತ್ತು ಗೊತ್ತಿಲ್ಲ; ಮಿಸುಗುಡದೆ ಮನ ತನ್ನ ನುಂಗಿದೆ ...
ಅಷ್ಟಷಟ್ಟದಿಯಲ್ಲಿ ಉಯ್ಯಾಲೆಯಾಡುತಿದೆ ಕೌತುಕದ ಬಗೆ; ಹಾಗೆ ಇದು, ಹೀಗೆ ಇದು, ಎನುತ ಜೀಕುಜೀಕಿನ ವಿಲಾಸದಲಿ ತನ್ಮಯವಾಗಿ, ಸಂಶಯವೆ ಸಿಂಗಾರವಡೆದು ಸ್ವಚ್ಛಂದದಲಿ ಬೀರಿದುದೆ ನೋಟ, ಹಾರಿದುದೆ ಹುಬ್ಬೆನುವಂತೆ ಕುಣಿಸುತಿದೆ ಅಂಗಾಂಗ; ಹೃದ್ಯ ಚಿತ್ತತರಂಗ...
(ಸಾವಿತ್ರಿ) ಕೊನೆಗಲ್ಲಿ ಬಂತು ಬರಿದೆನುವ ಬಯಲು ಆ ಉದಾಸೀನ ಬಾನು. ಕೋಟಿ ಪ್ರಶ್ನೆ ಏನೇನು ? ಇರಲಿ ಉತ್ತರವು ಬ್ರಹ್ಮ ನಾನು. ವಿಶ್ವ ಹೇಳುತಿದೆ ಮೌನ ಕೇಳುತಿದೆ ಮನನ ಏಕತಾನು. ಜೀವ ಜಿಜ್ಞಾಸೆಗಿಲ್ಲ ಕೊನೆಯು ಪ್ರತಿ ಮೌನ ಕಾಮಧೇನು. ಲವಲವಿಕೆಯೆಲ್ಲ ಎ...








