
ಬಂಡವಾಳವಾಗುತಿದೆ ಕನ್ನಡ ಭಾಷೆ-ನಮ್ಮ ಕನ್ನಡ ಭಾಷೆ ಬಂಡವಾಳವಾಗುತಲಿ ಅಳಿದು ಹೋಗುತ್ತಲಿದೆ ಕನ್ನಡ ಭಾಷೆ-ನನ್ನ ಕನ್ನಡ ಭಾಷೆ || ಓಟಿಗಾಗಿ ಸೀಟಿಗಾಗಿ ಜನರ ಕುಣಿಸೊ ನೋಟಿಗಾಗಿ ಕನ್ನಡವನೆ ನಂಬಿಹರು ಸ್ವಾರ್ಥಭರಿತ ಧೂರ್ತರು ಎತ್ತ ಹೋದರತ್ತ ಇವರು ಜಯ್ ...
ನೋಡಲು ಕ್ರಿಕೇಟು ಮ್ಯಾಚು ಸಹಜವೆ ಉತ್ಸಾಹ ಭಾರತ ಪಾಕ್ ಎಂದರೆ ಯಾತಕೆ ರಣೋತ್ಸಾಹ ನಿನ್ನೆ ನಾವು ಅವರು ಒಂದೆ ತಾಯ ಮಕ್ಕಳು ಇಂದು ಬೇರೆ ದೇಶ ಅದಕೆ ಬೇಕೆ ದ್ವೇಷ ಆಟಕೆ ಬೇಕು ಸ್ನೇಹ ಬೇಕೆ ಮತೀಯ ವೈರ? ಉಳಿಸಿಕೊಂಡರೆ ಕಿಸಿರು ನಿನಗೋ ಕಪ್ಪು ಹೆಸರು! ಸೋ...
ನಾವೆಲ್ಲರೂ ಹಿಂದು ಅವರ ದೃಷ್ಟಿಗೆ ಒಳಗೆ ಅಲ್ಲ ಒಂದು ನಮ್ಮ ದೃಷ್ಟಿಗೆ || ಅವನು ಗುಡಿಯ ಒಳಗೆ ಅವನ ಹೆಸರು ಹಿಂದು ನಾನು ಗುಡಿಯ ಹೊರಗೆ ನನಗೂ ಹೆಸರು ಹಿಂದು ಅವನು ಊರ ಒಳಗೆ ನಾನು ಇರುವೆ ಹೊರಗೆ ಹೇಳಬೇಕು ಸುಳ್ಳು ತಾಯಿ ಒಂದೆ ಎಂದು ಊರಿಗೊಂದೆ ಬಾವಿ...
ನಾನೇ ಇರುವೆ ನನ್ನ ಪರವಾಗಿ ಪಾರ್ಲಿಮೆಂಟಿನಲ್ಲಿ ವಿ- ಧಾನ ಸೌಧದಲ್ಲಿ ನಾನೆ ಆಗಿಹೆ ನನ್ನ ವಿರೋಧಿ ಇರುವುದ ಬಾಚುವಲಿ ದೇಶವ ತೊಳೆಯುವಲಿ ಗಾಂಧಿ ಇಷ್ಟ ತತ್ವವೂ ಇಷ್ಟ ಎಲ್ಲ ಕಂಠಪಾಠ ಮೈಕು ಹಿಡಿದರೆ ಬರಿ ಚಪ್ಪಾಳೆ ಇದೇ ನಿತ್ಯದಾಟ ಅಲ್ಲವೇ ಹೇಳಿ ನಾನೆ ...
ನನ್ನ ಶಾರದ ಮಾತೆ ಪ್ಯೂರ್ ವೆಜಿಟೇರಿಯನ್ ಭಾನುವಾರ ಮಾತ್ರ ನಾನ್ ವೆಜಿಟೇರಿಯನ್! ಅವಳ ಕೈಯಲ್ಲಿ ವೀಣೆ| ಈಚೆಗೆ ಕಲಿತಿಹಳು ಸಹ ತಮಟೆ ಭರತ ನಾಟ್ಯದ ಜೊತೆಗೆ ಹುಲಿವ್ಯಾಸದ ಕುಣಿತ ನನ್ನ ಶಾರದೆಗೆ ಪ್ರೀತಿ ಕರ್ನಾಟಕ ಸಂಗೀತ ಇಂದು ಅವಳಿಗೆ ಪ್ರೀತಿ ಕನ್ನಡ...
ನನಗೂ ಆಸೆ ಕವಿತೆ ಬರೆಯಲು ಭಾರತಾಂಬೆಯ ಮೇಲೆ ಸತ್ಯವ ಮುಚ್ಚಿ ಸುಳ್ಳು ಹೇಳುವುದು ಥರವೆ? ಗೆಳತಿ ಹೇಳೆ ಭಾರತಾಂಬೆಯ ಒಬ್ಬ ಮಗ ಇರುವನು ಊರ ಒಳಗೆ ಇವನಿಗೆ ಸಹಜ ಭಾರತ ಮಹಾನ್ ನಾನು ಯಾರ ಧ್ವನಿಗೆ? ಮೈಲಿಗೆ ತೊಳೆದ ಗಂಗೆ ತುಂಗೆ ಕಾವೇರಿಗೆ ಒಂದೆ ನಮನ ಮನ...
ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ ಚರಿತೆ ಕಟ್ಟುವ ...
ತಳದಲ್ಲಿದ್ದವರು; ನಾವು ಬೂದಿಯಲೆದ್ದವರು ಕತ್ತಲೆ ಚರಿತೆಯ ಬೆತ್ತಲೆ ಮಾಡುವ ಕನಸನು ಹೊತ್ತವರು | ನಾವು ಕನಸನು ಹೊತ್ತವರು || ನೋವನು ಉಂಡವರು; ಉಂಡು ಮೌನವ ಹೊದ್ದವರು ಅಕ್ಷರ ದೂರದ ಕತ್ತಲೆ ಗವಿಯಲಿ ಬದುಕನು ಕಳೆದವರು | ಬೆಳಕ ಕಾಣದೆ ಹೋದವರು ಬದುಕನ...
ತಡೆಯುವ ಬನ್ನಿ ಸೋದರರೆ ಕನ್ನಡ ತಾಯಿಯ ಕಣ್ಣೀರ ಬಾಡಿದ ಆ ಕಣ್ಣುಗಳಲ್ಲಿ ಹರಿಸಲು ಇಂದೇ ಪನ್ನೀರ ಬೆಳಗಾವಿಯನು ಉಳಿಸುತಲಿ ಸ್ವಾಭಿಮಾನವ ಮೆರೆಸೋಣ ಪರಭಾಷಾ ಕಳೆ ಕೀಳುತಲಿ ನಮ್ಮತನವನು ಬೆಳೆಸೋಣ ಕನ್ನಡ ನಾಡನು ಕಾಯುತಲಿ ಕನ್ನಡ ತಾಯಿಯ ಉಳಿಸೋಣ ನಲುಗಿದ ...
ಜನ್ಮವ ನೀಡಿಹೆ ಏಕಮ್ಮ? ನಿನ್ನೀ ಕರುಳಿನ ಕುಡಿಗಳಿಗೆ ಮೊಲೆಯನು ಉಂಡು ಮೊಲೆಯನೆ ಕಚ್ಚಿ ವಿಷವನು ಉಗುಳುವ ದುರುಳರಿಗೆ ಅರೆ ಬೆತ್ತಲೆ ನೀನಾಗಿ ಕಂಡರೂ ಪರ ಹೆಣ್ಣಿನ ಮೈ ಮುಚ್ಚುತಿಹ ಹಸಿವಿಂದಲಿ ನೀ ರೋಧಿಸುತಿದ್ದರೂ ಅನ್ಯರ ಬಾಯಿಗೆ ಉಣಿಸುತಿಹ ಹೀನರನೇಕ...








