ಬೇಗನೆ ಬಾ ಚೈತ್ರನೇ

ಬೇಗನೆ ಬಾ ಚೈತ್ರನೇ ಕಾದಿರುವೆವು ನಿನಗೆ ತೋರೋ ಶ್ರೀಮುಖವ ಮಾಗಿ ಕೊರೆದ ಇಳೆಗೆ ಮರಮರವೂ ಬರೆಸಿದೆ ಸನ್ಮಾನದ ಪತ್ರ, ಹೂ ತುಂಬಿದ ಕೊಂಬೆಗಳೋ ಹಕ್ಕಿಗಳಿಗೆ ಛತ್ರ; ಕೂಗುತ್ತಿವೆ ಕೋಗಿಲೆ ಓಲಗದನಿಯಾಗಿ, ಕಾಯುತ್ತಿದೆ ಬರವನು ಜಗವೇ...

ಎಲ್ಲಿ ಮಾನವ ಮತಿಗೆ

ಎಲ್ಲಿ ಮಾನವ ಮತಿಗೆ ಭಯದ ಬಂಧನವಿರದೊ ತಲೆಯೆತ್ತಿ ಸ್ಥೈರ್ಯದಲಿ ನಿಲ್ಲಬಹುದೋ ಎಲ್ಲಿ ತಿಳಿವಿಗೆ ಯಾವ ಹಂಗುಗಳ ತಡೆಯಿರದೊ ಭೇದದಲಿ ನೆಲ ನೂರು ಪಾಲಾಗದೋ, ಎಲ್ಲಿ ಸತ್ಯದ ಒಡಲಿನಿಂದ ನುಡಿ ಚಿಮ್ಮುವುದೊ ಸತತ ಸಾಧನೆ ಸಿದ್ದಿಯೆಡೆ...

ತಾಯೆ ನಿನ್ನ ಮಡಿಲಲಿ

ತಾಯೆ ನಿನ್ನ ಮಡಿಲಲಿ ಕಣ್ಣ ತೆರೆವ ಕ್ಷಣದಲಿ ಸೂತ್ರವೊಂದು ಬಿಗಿಯಿತಮ್ಮ ಸಂಬಂಧದ ನೆಪದಲಿ ಆಕಸ್ಮಿಕವೇನೋ ತಿಳಿಯೆ ನಿನ್ನ ಕಂದನಾದುದು, ಆಕಸ್ಮಿಕ ಹೇಗೆ ನಿನ್ನ ಪ್ರೀತಿ ನನ್ನ ಗೆದ್ದುದು? ಗುಣಿಕೆ ಮಣಿದು ನಾನು ನಿನ್ನ ಚರಣತಳಕೆ...

ಯಾವ ಸೌಭಾಗ್ಯ ಸಮ ಈ ಚೆಲುವಿಗೆ?

ಯಾವ ಸೌಭಾಗ್ಯ ಸಮ ಈ ಚಲುವಿಗೆ ಪ್ರೀತಿ ಚಿಮ್ಮುವ ತಾಯ ಮೊಗದ ಸಿರಿಗೆ? ಸಾಲು ಹಿಮಗಿರಿ ಇವಳ ಹೆಮ್ಮೆಯ ಮುಡಿ ಸಾಗರವೆ ಬಿದ್ದಿಹುದು ಕಾಲಿನ ಅಡಿ, ಹಣೆಯಲ್ಲಿ ಮುಗಿಲ ಮುಂಗುರುಳ ದಾಳಿ ಉಸಿರಾಡುವಳು ಮರುಗ...