ಭಾಷ್ಯ ಬರೆಯುವುದೆಂತು

ಭೂರಮೆಯ ಭೌಮದನಿಕೇತನಕೆ ಭಾಷ್ಯ ಬರೆಯುವುದೆಂತು ಬರಿ ಮಾತು || ಮೌನ ತವಸಿಯ ತಪದಾ ನೆಲೆಯಲಿ ಮಾತಿಗೆಲ್ಲಿಯ ಕಾಲ ಸಂದಲಹುದು || ಎತ್ತರೆತ್ತರ ಶೃಂಗಾರನಂಗವು ಮೌನ ಹಿಮದ ಪಾದಾದಿಯಲು ಮತ್ತೆ ಮೌನ || ಕಂದರಂದ್ಹರದಾಳದಳದಲೂ ನಿಃಶಬ್ದ...

ಹೊಂಬೆಳಕು

ಬಾಽ....... ಬಾಽ....... ಬೆಳಕೆ....... ಬಾಽ ಮನೆಯ ಬೆಳಗು ಬಾ, ಮನವ ತೊಳೆಯು ಬಾ ಜ್ಞಾನದ ಹೊಂಬೆಳಕೆ, ಧ್ಯಾನದ ಸಿರಿಬೆಳಕೆ ಬಾಽ..... ಬಾಽ || ಮೂಡಲ ಸಂಸ್ಕೃತಿ ಹಿಮಗಿರಿ ಸಾಲಲಿ, ಸಾಮಗಾನವನು ನುಡಿಸುತ ಬಾ ಪಡುವಲದುತ್ಕೃತಿ...

ಕಕ್ಷೆ

ಹಕ್ಕಿ ಬಳಗ ಮೇಲೇರುತ ಸಾಗಿದೆ ಹರುಷ-ಹರುಷ ಹೊತ್ತು ಮಣ್ಣಿನಣುಗ ತಾ ಸೋತು ಸೊರಗುತಿಹ ಬದುಕಲು ಪಡೆಯಲೊಂದು ತತ್ತು || ಜ್ಞಾನ ವಿಜ್ಞಾನದಾಗಸದೆತ್ತರ ಮಿಂಚು ಹುಳದ ಮಿಣುಕು ಬಾಳ ಬಾಂದಳಕೆ ತಿಂಗಳ ಬೆಳಕನು ಕೊಡ ಬಲದೆ,...

ಸ್ವರ್ಣಪಂಜರ

ನಾನು ಹಕ್ಕಿ ಆದರೂಽನು ಹಾರಲಾರೆ ಇನ್ನುಽ ನಾಽನು || ಪುಕ್ಕ ಬಿಗಿದ ಕ್ರೂರಗಣ್ಣು ಯಾವ ಯುಗದ ಮಾಯೆಯೋ ಅತಂತ್ರ ತಂತ್ರ ಪಾರತಂತ್ರ್‍ಯದಲ್ಲಿ ಸ್ವತಂತ್ರ ಬರೀ ಛಾಯೆಯೋ || ಮೇಘ ಮುಗಿಲ ಮೇಲ್ಮೆ ಬಲ್ಮೆ ಸಾಲಲಿ...

ಕಾವ್ಯವೆಂದರೆ

ಏನೆನ್ನಲಿ ಏನೆನ್ನಲಿ ಎನ್ನ ಮನದಮನ್ವಂತರದ ಧಾರೆಗಿನ್ನು ನಾನು ಬರಿದೆ ಬರೆವರ ಪದದಿ ಕಟ್ಟುವುದೆಂತೀ ಬುದುಕಿನಕ್ಕರವ ನಾನು-ನೀನು || ಬರೆದುದೆ ಬದುಕಲ್ಲ ಬದುಕಿದ್ದು ತಾ ನಿಲುಕಲ್ಲ. ಕಾವ್ಯವೆಂದರೆ ಅದುವೆ ಜನನಮರಣದಾಚೆ ಈಚೆ ಬಾಳು || ಹೇಳುವರು-ಹೇಳಿದ್ದು,...

ಚಂದನ ಗೀತ

ಇಳಾ ನಿನ್ನ ಮಹಾ ಕಾವ್ಯಕೆ ಇದುವೆ ನನ್ನಯ ಪಲ್ಲವಿ ಬಾನುವಿನ ಪ್ರಣಯ ಪರಿಧಿ ಕಾಣಬಲ್ಲವನೇ ಭವಿ?|| ನಿನ್ನ ಅವನ ಆಂತರ್ಯದ ಅರಿವಿನರಿವು ದುಸ್ತರ ಅಂತರಂಗದಂತರಾಳದಾಳ ಎನಿಎನಿತೊ ಬಿತ್ತರ|| ಅವನ-ನಿನ್ನ ಮೌನ `ವಿಶ್ವ' ಜಗದ ಜಗಕೆ...

ವಿಸ್ಮಯ

ಕಾಣದ ಕೈಗಳ ಲೀಲ ಹಾದಿಯಲಿ ಸಾಗಿದೆ ವಿಶ್ವದ ತೇರು, ಮಾಣದ ಶಕುತಿಯ ಮಾಯಾದೋಳಲಿ ನಡೆದಿದೆ ಸೃಷ್ಟಿಯ ಉಸಿರು. ನಿನ್ನಯ-ನನ್ನಯ, ನಿನ್ನೆಯ ಇಂದಿನ ನಾಳೆಗಳಾ ಕತ್ತಲೆ ಬೆಳಕು ಬೀಳುತಲೇಳುತ ಸಾಗೆ ನಿರಂತರ ಶೂನ್ಯ ಥಳುಕು ಬಳುಕು....

ಸ್ಥಾವರ! ಜಂಗಮ?

ಅಂತರಂಗದ ಕದವ ತೆರೆಯಿಸೊ ಅಂತರಾತ್ಮ ವಾಣಿಯನಾಲಿಸು ಅಂತಕಾಂತನ ಕೃಪೆಯ ನೆಳಲಲಿ ಚಿಂತಾತ್ಮನ ಕೊನೆಗಾಣಿಸು || ಚಿತ್ತ ಚಿತ್ತಾರ ಬಿತ್ತರ ಬಣ್ಣ ಬದುಕಿನ ಕೆಡುಕಿಗೆ ನೀನು ನಾನು ಎಲ್ಲರಿಲ್ಲಿ ಮೃತ್ಯುಗೈಯಮಣ್ಣ ಬಿಂದಿಗೆ || ಬಿಸಿಲಗುದುರೆಯ ಸವಾರಿಯಲ್ಲಿ...

ಹಾಡು-ಪಾಡು

ಕುಸುಮವೊಂದು ಉಲ್ಲಾಸದಿಂದ ಅರಳಿನಿಂತು ನಕ್ಕಿತು | ನಭದ ನೀಲಿ ಬಣ್ಣ ಕಂಡು ನಾನೇ ಚೆಲುವೆ ಎಂದಿತು | ಇಳೆಯ ಮೇಲಣ ಕೊಳೆಯ ಕಂಡು ಹಮ್ಮಿನಿಂದ ಅಣಕಿತು | ಸುಳಿದು ಸೂಸೋ ತಂಗಾಳಿಗೆ ಒನಪಿನಿಂದ ಬಳುಕಿತು...

ಮಾನಸ ವೀಣ

ಮಾನಸ ಲೋಕದ ಪ್ರಭುವೆ ಮನ ಮಾನಸದ ಹೊನಲಿನ ವಿಭುವೆ  ||ಪ|| ಮುಗಿಲಿಗೂ ಮಿಗಿಲು ನಿನ್ನಯ ಹರವು ಕಡಲಿಗೂ ಹಿರಿದು ತಿಳಿವಿನ ಅಳವು ಸಮೀರನ ಹಿಂದಿಕ್ಕೂ ವೇಗದ ಲೀಲೆ ಅನಲನ ದಾಟಿಸೋ ಅಪುವಿನ ಓಲೆ ಮಾಯಾ...