‘ಮುತ್ತು ಕೊಡುವವಳು
ಬಂದಾಗ
ತುತ್ತು ಕೊಡುವವಳನ್ನು
ಮರೆಯಬೇಡ’
ಹೀಗೊಂದು ಬರಹ
ಲಾರಿಯ ಹಿಂಭಾಗದಲ್ಲಿ;
ತುತ್ತು ಕೊಟ್ಟವಳು
ಮುತ್ತು ಕೊಟ್ಟಿಲ್ಲವೆ?
ಮುತ್ತು ಕೊಡುವವಳು
ತುತ್ತು ಕೊಡುವುದಿಲ್ಲವೆ?!
*****