ಬಾರೋ ಬಾರೋ ಮಳೆರಾಯ – ಮಳೆರಾಯ
ಬಾಳೇ ತೋಟಕೆ ನೀರಿಲ್ಲಾ – ನೀರಿಲ್ಲಾ

ಹುಯ್ಯೋ ಹುಯ್ಯೋ ಮಳೆರಾಯಾ – ಮಳೆರಾಯಾ
ಹೂವಿನ ತೋಟಕೆ ನೀರಿಲ್ಲಾ – ನೀರಿಲ್ಲಾ

ತೋರೋ ತೋರೋ ಮಳೆರಾಯಾ – ಮಳೆರಾಯಾ
ತೆಂಗು ಅಡಿಕೆ ತಣಿದಿಲ್ಲಾ – ತಣಿದಿಲ್ಲಾ

ಕರೆಯೋ ಕರೆಯೋ ಮಳೆರಾಯಾ – ಮಳೆರಾಯಾ
ಕಬ್ಬಿನ ಗದ್ದೆ ನೆನೆದಿಲ್ಲಾ – ನೆನೆದಿಲ್ಲಾ

ಸುರಿಯೋ ಸುರಿಯೋ ಮಳೆರಾಯಾ – ಮಳೆರಾಯಾ
ಸೂರ್ಯನ ಸ್ನಾನನೇ ಆಗಿಲ್ಲಾ – ಆಗಿಲ್ಲಾ

ಸೂರ್‍ಯನ ಸ್ನಾನ ಆಗ್ಬೇಕು
ಆಗಿ ಉಕ್ಕ ಕುಡಿಬೇಕು
ಉಕ್ಕ ಕುಡಿದು ಆಟ ಆಡಿ
ಪುಟ್ಟು ತಾಚೀ ಮಾಡ್ಬೇಕು
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)