ವಿರುಪಾಕ್ಷಲಿಂಗವಿದ್ದ ಹಂಪಿ
ನೋಡೋಣ ಬಾರಾ ಇಬ್ಬರು ಕೂಡಿ ||ಪ||

ಅಂಗಲಿಂಗ ಸುಖ ಎರಡು ಕೂಡಿ
ಒಂದೆ ಶಿವ ಶಬ್ಬದೊಳಗೆ ||೧||

ಗಂಗಿ ಸರಸ್ವತಿ ಯಮುನಾ ತೀರ
ಮಧ್ಯದಿ ಹುಡುಕೋಣ ಬಾರೆ ||೨||

ಶ್ರೀಶಂಕರನ ಪಾದದಡಿಯಲ್ಲಿ ನೋಡಿದ
ಕೊನೆಯೊಳು ನೋಡೋಣು ಬಾರೆ ||೩||

ನಾಡ ಜನರು ಕೂಡಿ ನೋಡಲಿಕ್ಕೆ ಬಂದರೆ
ಬೇಡಿದ ವರವ ಕೊಡುತಿಹನು ||೪||

ಬೇಡಿದ ಇಷ್ಟಾರ್ತ ಕೊಡುವಂಥ ಶಿಶುನಾಳ-
ಧೀಶನ ಪಾದಕೆ ಎರಗೋಣ ಬಾರೆ ||೫||

****