ಪರಿಸರ ಮತ್ತು ಸಸ್ಯಗಳು-ಪರಿಸರ ಮಾಲಿನ್ಯ ತಡೆಗಟ್ಟುವ ಸಸ್ಯಗಳು

ಮರಗಿಡಗಳು ವಾತಾವರಣದಿಂದ ಇಂಗಾಲದ ಡೈ ಆಕ್ಸೈಡ್ ಹೀರಿಕೊಂಡು ಬದಲಿಗೆ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಆರೋಗ್ಯದಾಯಕ ವಾತಾವರಣವನ್ನುಂಟುಮಾಡುತ್ತದೆ. ೫೦ ಟನ್ ತೂಕದ ಒಂದು ಮರ ವರ್ಷಕ್ಕೆ ೧ ಟನ್ ಆಮ್ಲಜನಕ ಬಿಡುಗಡೆಮಾಡುತ್ತದೆ. ಸಸ್ಯಗಳು ಆಮ್ಲಜನಕ ಉತ್ಪಾದಿಸುವ ಏಕೈಕ ಕಾರ್ಖಾನೆಗಳೆಂದು ಹೇಳಿದರೆ ತಪ್ಪಾಗಲಾರದು.

ಮರಗಳು ವಾತಾವರಣದಿಂದ ಹಾನಿಕಾರಕ ಅನಿಲಗಳನ್ನು, ಧೂಳಿನ ಕಣಗಳನ್ನು ಹಾಗೂ ಕಾರ್ಖಾನೆ ಬಾರಲೋಹ ಸಂಯುಕ್ತಗಳನ್ನೊಳಗೊಂಡ ತ್ಯಾಜ್ಯ ವಸ್ತುಗಳನ್ನು ಹೀರಿಕೊಳ್ಳುತ್ತವೆ.

ಕಾರ್ಖಾನೆಗಳು, ವಾಹನಗಳು ಮತ್ತಿತರ ಮೂಲಗಳಿಂದ ಉಂಟಾಗುವ ಶಬ್ದಮಾಲಿನ್ಯವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವದರ ಮೂಲಕ ಪರಿಸರ ಗುಣಮಟ್ಟವನ್ನು ಕಾಪಾಡುತ್ತವೆ. ಸಣ್ಣ ಮತ್ತು ಮಧ್ಯಮ ಗಾತ್ರದ ಪೊದರುಗಳನ್ನು ಒಳಗೊಂಡ ಕಾಡು ೨೦ ರಿಂದ ೩೦ ಡೆಸಿಬಲ್-ನಷ್ಟು ಶಬ್ದಮಾಲಿನ್ಯ ಕಡಿಮೆ ಮಾಡುವ ಸಾಮರ್ಥ್ಯ ಹೊಂದಿದೆ. ಲಕ್ನೊ, ನಾಗಪುರಗಳ ಸಂಶೋಧನಾ ಕೇಂದ್ರಗಳಲ್ಲಿ ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮುಂತಾದ ಕಡೆಗಳಲ್ಲಿ ಪರಿಸರ ಮಾಲಿನ್ಯ ತಡೆಗಟ್ಟುವ ಮರಗಳ ಕುರಿತು ಅಧ್ಯಯನ ನಡೆಯುತ್ತಿದೆ. ಈಗಾಗಲೇ ಕೆಲವು ಸತ್ಯಾಂಶಗಳು ಹೊರಬಿದ್ದಿವೆ. ಅಂತಹ ಮರಗಳ ಕುರಿತು ಇಲ್ಲಿ ಚರ್ಚಿಸೋಣ.

ವಾಯುಮಾಲಿನ್ಯ

ಹೆಚ್ಚು ಕೊಂಬೆಗಳನ್ನು ಹೊಂದಿರುವ, ದಟ್ಟವಾಗಿ ಅಗಲವಾಗಿ ಹರಡಿಕೊಳ್ಳುವ ಎಲೆಗಳ ಗಿಡಗಳು ವಾಯುಮಾಲಿನ್ಯ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಸಿರಸ್ವ, ಹೆಬ್ಬೇವು, ಜಂತಾಲಮರ, ಬೇವು, ಅರಳೆ, ಹೊಳೆದಾಸವಾಳ, ಪಗಡೆಮರ, ಅಶೋಕ, ಅರ್ಜುನ, ಮಾಪಲ್ ಜಾತಿಯ ಮರ, ಓಕ್ ಜಾತಿಯ ಮರಗಳು ಸಲ್ಫರ್ ಡೈ ಆಕ್ಸೈಡ್ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿವೆ.

ಸೀಮೆತಂಗಡಿ, ಬೋರೆಹಣ್ಣಿನ ಮರಗಳು – ಸೀಸ ತಾಳಿಕೊಳ್ಳುವ ಮತ್ತು ರೋಬೆನಿಯ, ಸಂಬುಕಸ್, ಉಲ್ನಸ್ ಫಾಗಸ್, ಓಕ್ ಜಾತಿಯ ಮರಗಳು ಸಾರಜನಕದ ಆಕ್ಸೈಡ್ ತಾಳಿಕೊಳ್ಳುವ ಶಕ್ತಿ ಪಡೆದಿವೆ. ಮಾಪಲ್ ಮತ್ತು ಓಕ್ ಜಾತಿಯ ಮರಗಳು ಓಜ಼ೋನ್ ಮತು ಪೆರಾಕ್ಸಿ ಅಸಿಟಾಟ್ ನೈಟ್ರೇಟ್ ತಡೆಗಟ್ಟಿದರೆ, ಹೆಬ್ಬೇವು ಮತ್ತು ಬೋರೆಹಣ್ಣಿನ ಮರ ಹೈಡ್ರೋಜನ್ ಫ್ಲೊರೈಡ್ ತಾಳಿಕೊಳ್ಳಬಲ್ಲವು.

ಜಂತಾಲ ಜಾತಿಯ ಮರ, ಸೀಮೆತಂಗಡಿ, ದಲಬರ್ಜಿಯ, ಆಲ, ಬಸರಿ, ಮಾವಿನ ಮರ, ಹಳದ ಗುಲ್ಮೋರ, ಬೇವು, ಅಶ್ವಕರ್ಣ, ನೇರಳೆ, ಸಾಗುವಾನಿ, ರಾಯಿ, ಅಶೋಕಾ ಅಲ್ನಸ್, ಸಾಲಿಕ್ಸ್, ಬ್ರಯಾ ಮರಗಳು ಧೂಳನ್ನು ದೊರೀಕರಿಸುವ ಸಾಮರ್ಥ್ಯ ಹೊಂದಿವೆ.

ಶಬ್ದ ಮಾಲಿನ್ಯ

ದಪ್ಪನಾದ ಕಾಂಡ ಮತ್ತು ಕವಲುಗಳನ್ನು ಹೊಂದಿರುವ ಮರಗಳು ಶಬ್ದದ ಕಂಪನಗಳನ್ನು ವಕ್ರೀಕರಿಸುತವೆ. ದಪ್ಪ ಮತ್ತು ಮಾಂಸ ಎಲೆಗಳ ಎಲೆತೊಟ್ಟು ನಮ್ಯವಾಗಿದ್ದು ಕಂಪನಗಳನ್ನು ತಡೆದುಕೊಳ್ಳಬಲ್ಲವು. ಜಂತಾಲ ಜಾತಿಯ ಮರ ಬೇವು ಮುತ್ತುಗ, ಮುಳ್ಳು ಮುತ್ತುಗ, ಸಿಲ್ವರ್ ಓಕ್, ಕನಕ ಚಂಪಾ, ಹುಣಸೆಮರ, ಅರ್ಜನ, ಮಾಪಲ್ ಜಾತಿಯ ಮರ, ಅಲ್ನ, ಬೆಟುಲಾ, ಜುನಿಪೆರಸ್, ಪೊಪಲಾರ, ವಿಬುರನಮ್ ಮರಗಳು ಶಬ್ದಮಾಲಿನ್ಯ ತಾಳಿಕೊಳ್ಳುವ ಸಾಮರ್ಥ್ಯ ಹೊಂದಿವೆ.

ನೆಡುವಿಕೆ

ಧೂಳುಮಾಲಿನ್ಯ ದೂರವಿರಿಸಲು ರಸ್ತೆ ಮತ್ತು ಕಟ್ಟಡಗಳ ನಡುವಿನ ಜಾಗದಲ್ಲಿ ಸುಮಾರು ೮ ಮೀ. ಉದ್ದದ ಹಸಿರುಪಟ್ಟಿಯ ೨ ರಿಂದ ೩ ಪಟ್ಟು ಧೂಳು ದೂರೀಕರಿಸುತ್ತವೆ. ಶಂಕುವೃಕ್ಷಗಳು ೪೨% ಧೂಳನ್ನು ನುಂಗಬಲ್ಲವು.

ಶಬ್ದಮಾಲಿನ್ಯ ದೂರಮಾಡಲು, ವಾಹನಗಳ ವೇಗಮಿತಿಯ ಆಧಾರದ ಮೇಲೆ ವಿವಿಧ ಮಾದರಿಯಲ್ಲಿ ಗಿಡಗಳನ್ನು ನೆಡಬೆಕು.

ಅತಿ ಹೆಚ್ಚು ವಾಹನಗಳ ಸಂದಣಿಯಲ್ಲಿ ಟ್ರಾಫಿಕ್ ನಿಂದ ೧೫ ರಿಂದ ೨೭ ಮೀ. ದೂರದಲ್ಲಿ, ೧೮ ರಿಂದ ೩೦ ಮೀ. ಎತ್ತರದ ಹಸಿರು ಪಟ್ಟಿಯನ್ನು ಹಾಗೂ ರಸ್ತೆಯ ನಡುವಿನ ಜಾಗದಲ್ಲಿ ೧೩.೫ ಮೀ ಎತ್ತರದ ಹಸಿರು ಪಟ್ಟಿಯು ಶಬ್ದಮಾಲಿನ್ಯವನ್ನು ನುಂಗಬಲ್ಲದು. ಸಾಮಾನ್ಯ ವೇಗಮಿತಿಯಲ್ಲಿ ಓಡಾಡುವ ವಾಹನಗಳ ಸ್ಥಳದಿಂದ ೬ ರಿಂದ ೧೫ ಮೀ. ದೂರದಲ್ಲಿ, ೬ ರಿಂದ ೧೫ ಮೀ. ಅಗಲದ ಹಸಿರುಪಟ್ಟಿ, ಟ್ರಾಫಿಕ್ ಪಕ್ಕದಲ್ಲಿ ೧.೮ ರಿಂದ ೪ ಮೀ. ಎತ್ತರ ಬೆಳೆಯಬಲ್ಲ ಪೊದೆಗಿಡಗಳನ್ನು ನೆಡಬೇಕು. ಅವುಗಳ ಹಿಂದೆ ೪.೫ ರಿಂದ ೯ ಮೀ. ಎತ್ತರದ ಗಿಡಗಳ ಸಾಲು ನೆಡಬೇಕು.

ಜಲಮಾಲಿನ್ಯ

ಕೆಲವು ಸಸ್ಯಗಳು ಕೈಗಾರಿಕಾ ಮತ್ತು ಗೄಹಬಳಕೆಯ ತ್ಯಾಜ್ಯವಸ್ತುಗಳಿಂದಾದ ಜಲಮಾಲಿನ್ಯವನ್ನು ನಿವಾರಿಸಬಲ್ಲವೆಂದು ತಿಳಿದುಬಂದಿದೆ. ಅಂತಹ ಸಸ್ಯಗಳಲ್ಲಿ ಒಂದಾದ ಅಂತರಗಂಗೆ ಸಸ್ಯವು ತಾಮ್ರ, ಕ್ಯಾಡ್ಮಿಯಂ, ನಿಕ್ಕಲ್, ಸೀಸ, ಪಾದರಸಗಳಂತಹ ಆರೋಗ್ಯಕ್ಕೆ ಮಾರಕವಾಗಿರುವ ಭಾರಲೋಹಗಳನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ.

ಐರಿಸ್ ಮತ್ತು ಬುಲ್ರಷ್ ಸಸ್ಯಗಳು ಕೀಟನಾಶಕಗಳಿಂದ ಜಲಮಾಲಿನ್ಯವನ್ನು ತಡೆಗಟ್ಟುವದಲ್ಲದೇ ಅಲ್ಲಿ ಬೆಳೆಯುವ ಕಳೆಗಳನ್ನು ತೊಡೆದುಹಾಕಬಲ್ಲವೆಂದು “ನ್ಯೂ ಸೈಂಟಿಸ್ಟ್” ವರದಿ ಮಾಡಿದೆ.
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಾಲ
Next post ಕೈ ಗಡಿಯಾರ

ಸಣ್ಣ ಕತೆ

 • ಇರುವುದೆಲ್ಲವ ಬಿಟ್ಟು

  ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

 • ಹೃದಯದ ತೀರ್ಪು

  ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

 • ಪತ್ರ ಪ್ರೇಮ

  ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

 • ಕತೆಗಾಗಿ ಜತೆ

  ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

 • ಕಲ್ಪನಾ

  ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

cheap jordans|wholesale air max|wholesale jordans|wholesale jewelry|wholesale jerseys