ಇಂದಿನ ಕಾಲಮಾನದಲ್ಲಿ ಕಾರ್ಡ್‌ಲೆಸ್ ಫೋನ್‌ಗಳು ಸರ್ವೆಸಾಮಾನ್ಯವಾಗಿವೆ ಮತ್ತು ಅಷ್ಟೇನು ಜನಸಾಮಾನ್ಯರ ಸಂಪರ್ಕ ಸಾಧ್ಯವಾಗಿಲ್ಲ. ಇಂಥಹ ತಂತಿ ರಹಿತ ಫೋನ್‌ಗಳನ್ನು ಜಾಗತಿಕ ಮಟ್ಟದಲ್ಲಿ ಸಂಪರ್ಕ ಸಾಧನವನ್ನಾಗಿ ಮಾಡಲು ಅಸಂಖ್ಯಾತವಾಗಿ ನಿರ್‍ಮಾಣ ಮಾಡಲಾಗುತ್ತದೆ.

ಅಮೇರಿಕಾ ವ್ಯಾಂಡನ್‌ಬಗ್ ವಾಯುದಳದ ನೆಲೆಯಿಂದ ಡೆಲ್ಟಾ-೨ ಉಡಾವಣಾ ನೌಕೆಯಿಂದ ಹಾರಿಸಲಾದ ಐದು ಹೊಸ ಉಪಗ್ರಹಗಳಿಂದ ಇದು ಕೆಳಮಟ್ಟದ ಭೂಕಕ್ಷೆಯಲ್ಲಿ ಇರುವ ಇನ್ನಿತರ ಉಪಗ್ರಹದೊಂದಿಗೆ ಸೇರಿಕೊಂಡು ಇವು ‘ಐರಿಡಿಯಂ’ ಎಂಬ ಜಾಗತಿಕ ಸಂಪರ್ಕ ಜಾಲವನ್ನು ನಿರ್ಮಿಸುತ್ತವೆ. ಈ ವ್ಯವಸ್ಥೆಯಿಂದಾಗಿ ಯಾರಾದರೂ ಯಾವ ಸಮಯಕ್ಕಾದರೂ ಜಗತ್ತಿನ ಯಾವ ಮೂಲೆಯೇ ಇರಲಿ, ಟೆಲಿಫೋನ್ ಅಥವಾ ಪೇಜರ್‌ನೊಡನೆ ಸಂಪರ್ಕ ಸಾಧಿಸಬಹುದಾಗಿದೆ. ಇದು ೧೯೯೮ ರ ಸೆಪ್ಟೆಂಬರ್‍ನಿಂದ ಕಾರ್ಯರೂಪಕ್ಕೆ ಬಂದಿದೆ. ‘ಮೋಟೊರೋಲಾ’ ಮತ್ತು ಇತರ ಅನೇಕ ಖಾಸಗಿ ಕಂಪನಿಗಳ ಜಂಟಿ ಯೋಜನೆಯಿಂದ ಇದರ ನಿರ್ಮಾಣವಾಗುತ್ತದೆ. ‘ಐರಿಡಿಯಂ’ ವ್ಯವಸ್ಥೆಯಲ್ಲಿ ೬೬ ಗ್ರಹಗಳಿವೆ. ಅವು ವಿವಿಧ ಆರು ಕಕ್ಷಾಪಾತಗಳಲ್ಲಿ ಭೂಮಿಯನ್ನು ಸುತ್ತುತ್ತ ಪರಸ್ಪರ ಸಂಪರ್ಕ ಹೊಂದುತ್ತವೆ. ಈ ಜಾಲವು ಇನ್ನು ಕೆಲವೇ ವರ್ಷಗಳಲ್ಲಿ ಜಗತ್ತನ್ನು ಆವರಿಸುತ್ತವೆ.

ಆಗ ಜಗತ್ತು ಮುಷ್ಠಿಯೊಳಗೆ, ಎಂಬಂತಾಗಿ ಯಾವ ತಂತಿಯ ಸಂಪರ್ಕವಿಲ್ಲದೇ ಎಲ್ಲೆಂದರಲ್ಲಿಗೆ ಫೋನಾಯಿಸಿ ಜಗತ್ತಿನ ವಿದ್ಯಮಾನಗಳನ್ನು ತಿಳಿದುಕೊಳ್ಳಬಹುದು. ಸಂವಹನ ಮಾಧ್ಯಮದಲ್ಲಿ ಇದು ಉತ್ಕೃಷ್ಟ ಸಾಧನವೆಂದು ಹೇಳಲಾಗಿದೆ.
*****