Home / ಲೇಖನ / ಇತರೆ / ಅನೇಕ ಪತ್ನೀವ್ರತ – ಅತ್ತೆ ಸೊಸೆಯರ ಹೊಡೆದಾಟ

ಅನೇಕ ಪತ್ನೀವ್ರತ – ಅತ್ತೆ ಸೊಸೆಯರ ಹೊಡೆದಾಟ

ಶ್ರೀಕೃಷ್ಣನ ಹದಿನಾರು ಸಾವಿರ ಹೆಂಡಂದಿರ ಮತ್ತು ಸಾಲೊಮನನ ಮೂರು ನೂರು ಹೆಂಡಂದಿರ ಕಥೆಗಳನ್ನು ಕೇಳಿದ ನಮಗೆ ವಾರಸಾ ಪಟ್ಟಣದಲ್ಲಿಯ ಲೆವಿನಿಸ್ಕಿ ಎಂಬವನು ೩೬ ಸಾರೆ ಲಗ್ನವಾದದ್ದನ್ನು ಕೇಳಿ ಆಶ್ಚರ್ಯ ವೆನಿಸಲಾರದು. ಆದರೆ ಲೆವಿನಿಸ್ಕಿಯ ಮದುವೆಗಳ ವಿಶೇಷ ಪರಿಚಯವು ಚಮತ್ಕಾರದ್ದಾಗಿದೆ. ಇವನು ೨೬ ವರ್ಷದವನಿದ್ದಾಗ ಇವನ ಪ್ರಥಮ ಲಗ್ನವಾಯಿತು. ಈಗ ಇವನ ವಯಸ್ಸು ೩೩ ವರ್ಷ ಅಂದರೆ ೭ ವರ್ಷಗಳಲ್ಲಿ ೩೬ ಹೆಂಡಂದಿರನ್ನು ಮದುವೆಯಾದನು. ಅಂದರೆ ಪ್ರತಿ ವರ್ಷ ಸರಾಸರಿ ೫.೧೪೨೮೫೭ ಸ್ತ್ರೀಯರನ್ನು ಲಗ್ನನಾದನು. ಇಷ್ಟೇ ಅಲ್ಲ; ೩೬ನೆಯ ಲಗ್ನದ ತಯಾರಿ ಮಾಡಿದ್ದನು. ವಧುವಿನೊಡನೆ ಮಂಗಲಕಾರ್ಯಕ್ಕಾಗಿ ಚರ್ಚಿಗೆ ಹೋದನು. ಅಷ್ಟರಲ್ಲಿ ಅವನ ೩೬ನೆಯ ಹೆಂಡತಿಯು ಪೊಲೀಸರೊಡನೆ ಬಂದು ಆ ಶುಭಕಾರ್ಯವನ್ನು ತಡೆದಳು. ಹೀಗಾಗಿ ಕೈಗೆ ಬಂದ ೩೭ನೆಯ ತುತ್ತು ಬಾಯಿಗೆ ಬರಲಿಲ್ಲ. ಮುಷ್ಟಿ ಯುದ್ಧ (Boxing) ವು ಇವನ ಉದ್ಯೋಗವು. ಪೋಲೀಸರೊಡನೆ ಮುಷ್ಟಿಯುದ್ಧ ಹೂಡಿ ತನ್ನ ಸಂಕಲ್ಪವನ್ನು ಪೂರ್ಣ ಮಾಡಲು ಇಚ್ಚಿಸಿದ್ದರೆ ಇವನಿಗೆ ತಾತ್ಪೂರ್ತಿಕ ಯಶವು ದೊರೆಯುವ ಸಂಭವವಿತ್ತು, ಆದರೆ….

“ಹೊತ್ತು ಬಂದಂತೆ ಕೊಡೆ ಹಿಡಿಯುವವನು ಕಡುಜಾಣ?” ಎಂದು ಕವಿಯು ಹೇಳಿದಂತೆ ಸಿಂಗಾರಾಗಿ ಬಂದ ವಧುವಿಗೆ ಶರಣು ಚರ್ಚಿನಿಂದ ಪೋಲಿಸ ಚೌಕಿಗೆ ಹೋದನು ?

ಕ್ರಿಶ್ಚಿಯನ್ ಧರ್ಮದ ಪ್ರಕಾರ ಒಬ್ಬನಿಗೆ ಒಂದೇ ಕಾಲಕ್ಕೆ ಇಬ್ಬರು ಹೆಂಡಂದಿರು ಇರಕೂಡದು. ಇಬ್ಬರು ಅತ್ತೆಯರ ಕಾಟದಿಂದ ಅಳಿಯನನ್ನು ಉಳಿಸಲು ಬಹಳ ಮಾಡಿ ಈ ನಿಯಮವಿರಬೇಕು!

ಕ್ರಿಶ್ಚಿಯನ್ರಲ್ಲಿ ವಧುವು ಲಗ್ನದ ಕಾಲಕ್ಕೆ ಬಿಳಿಯ ಪೋಷಾಕು ಧರಿಸುವ ರೂಢಿಯುಂಟು. ಬಿಳಿಯ ಬಣ್ಣ ಸುಖಸಂತೋಷದ ಚಿನ್ಹವಂತೆ. ಹಾಗಾದರೆ ವರನು ಲಗ್ನದ ಕಾಲಕ್ಕೆ ಕರಿಯ ಬಣ್ಣದ ಪೋಷಾಕವನ್ನೇ ಧರಿಸುತ್ತಾನಲ್ಲ ! ಆದರೆ ಕಾರಣವೇನು ?
* * * *

ಆತ್ತೆ-ಸೊಸೆಯರ ಹೊಡೆದಾಟದಲ್ಲಿ, ಪಾಪ, ಗಂಡ (ಸೊಸೆಯ ಗಂಡ ಅಥವಾ ಅತ್ತೆಯ ಮಗ) ನ ಜೀವವು ಹೇಗೆ ಸಣ್ಣದಾಗುತ್ತದೆಂಬದನ್ನು ಶ್ರೀ, ಟಿ ಪಿ ಕೈಲಾಸಮ್ ಇವರು ತಮ್ಮ ಹೋಮ್‌ರೂಲ್ ನಾಟಕದಲ್ಲಿ ಚನ್ನಾಗಿ ಚಿತ್ರಿಸಿರುವರು. “ಹೆಂಡತಿಯನ್ನು ಮೈಹುಳೆ ಹೊಡೆದು ಹೊರಗೆ ಹಾಕುವೆನು” ಎಂದು ತಾಯಿಯ ಎದುರಿಗೆ ಹೇಳುವದು. “ಅವ್ವ ಮುದುಕೆ ಯಾಗಿದ್ದಾಳೆ. ಕಾಶಿಯ ಯಾತ್ರೆಗೆ ಕಳಿಸುವೆನು. ದಾರಿಯಲ್ಲಿಯೇ ಸಾಯುವಳು” ಎಂದು ಹೆಂಡತಿಗೆ ಸಮಾಧಾನ ಹೇಳುವದು. ಕನ್ನಡವಾಣಿಯ ಜೇಷ್ಠ ಪುತ್ರರೆಂದು ಕರೆಯಲ್ಪಡುವ ಶ್ರೀ, ಮುದವೀಡು ಕೃಷ್ಣರಾಯರು Horns of the Dilemma ಇದರ ಅರ್ಥವನ್ನು “ಒಂದು ಕಡೆಗೆ ಭಾವಿ ಮತ್ತೊಂದು ಕಡೆಗೆ ಕೆರೆ?” ಎಂದು ಮಾಡುತ್ತಾರೆ. ಇಂಥ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವವನ ಒಂದು ಉದಾಹರಣೆ ಕೊಡಲು ನನಗೆ ಹೇಳಿದರೆ, ಮೇಲೆ ವಿವರಿಸಿದ ಗಂಡ (ಸೊಸೆಯ ಗಂಡ, ಅತ್ತೆಯ ಮಗ) ನ ಕಡೆಗೆ ಬೆರಳು ಮಾಡಿ ತೋರಿಸುವೆನು.
* * * *

ಅತ್ತೆಗೊಂದು ಕಾಲವಾದರೆ ಸೊಸೆಗೊಂದು ಕಾಲವಂತೆ, ಸೊಸೆಗೆ ಇದೊಂದು ದೊಡ್ಡ ಆಸೆ. ಆದರೆ ಸೊಸೆಯ ದಿವಸ ಬರುವದರೊಳಗೆ ಸೊಸೆಯು ಸ್ವತಃ ಅತ್ತೆಯಾದರೆ (ಅಂದರೆ ಸೊಸೆಯ ಸೊಸೆ ಬಂದರೆ) ಮಾತ್ರ ಫಜೀತಿ ! ಅಂದರೆ “ಒಂದು ಕಡೆಗೆ ಭಾವಿ ಮತ್ತೊಂದು ಕಡೆಗೆ ಕೆರೆ?” ಅಥವಾ Horns of Dilemmaದ ಮತ್ತೊಂದು ದೃಷ್ಟಾಂತವೆಂದೇ ಹೇಳಬಹುದು.
*****

Tagged:

Leave a Reply

Your email address will not be published. Required fields are marked *

ಕೋರ್‍ಟಿನಿಂದ ಬಂದ ಮೀರಾ ಬಳಲಿದವಳಂತೆ ಕುಸಿದು ಕುಳಿತಳು. ದೇಹ ಬಳಲಿದ್ದರೂ ಸಂತಾಪದಿಂದ ಎದೆ ಕುದಿಯುತ್ತಿತ್ತು. ಎದೆಯಲ್ಲಿ ಕುದಿತ, ಮುಖ ಕಣ್ಣುಗಳನ್ನು ಕೆಂಪು ಮಾಡಿ, ಇಡೀ ದೇಹ ಕೋಪದಿಂದ ಕಂಪಿಸುವಂತೆ ಮಾಡಿತ್ತು. ಕಾಲಲ್ಲಿದ್ದ ಚಪ್ಪಲಿಗಳನ್ನು ಕೂಡಾ ಕಳಚದೇ, ಕೈಯಲ್ಲಿದ್ದ ಪರ್ಸ್, ಪುಸ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...