Home / ಲೇಖನ / ಇತರೆ / ವರ್ತಮಾನಪತ್ರಗಳ ಸುದ್ದಿಗಾರರು

ವರ್ತಮಾನಪತ್ರಗಳ ಸುದ್ದಿಗಾರರು

ವರ್ತಮಾನಪತ್ರಗಳ ಸುದ್ದಿಗಾರರ ಕರ್ತವ್ಯವು ಸುದ್ದಿ ಕೂಡಿಸುವದು; ಸುದ್ದಿ ಸಿಗದಿದ್ದರೆ ಸುದ್ದಿ ಹುಟ್ಟಿಸುವದು. ಸುಳ್ಳು ಸುದ್ದಿಯನ್ನು ಸತ್ಯವಿದ್ದಂತೆ ಮಾಡಿ ತೋರಿಸುವವನು ಚತುರನಾದ ಸುದ್ದಿಗಾರನು!
  * * * *
೧೯೩೧ನೇ ಇಸ್ವಿಯಲ್ಲಿ ಮುಂಬೈಯಲ್ಲಿ ಅ. ಭಾ. ಕಾಂಗ್ರೆಸ್ ಕಮಿಟಿಯು ಕೂಡಿತ್ತು. ಕಮೀಟಿಯ ಕಾರ್ಯಕ್ರಮದಲ್ಲಿ ಬಹಳ ಮಹತ್ವದ ವಿಷಯಗಳು ಚರ್ಚೆಗೆ ಬರಲಿದ್ದವು. ಆದ್ದರಿಂದ ಎಲ್ಲ ಸದಸ್ಯರು ಚರ್ಚೆಯ ವಿಷಯವನ್ನು ಗೌಪ್ಯವಾಗಿ ಇಡುವದಾಗಿಯೂ ಏನನ್ನೂ ಹೊರಗೆ ಹಾಕದಂತೆ ದಕ್ಷತೆ ವಹಿಸುವದಾಗಿಯೂ ಪ್ರಮಾಣ ಮಾಡಿದ್ದರು. ಎರಡು ದಿವಸಗಳವರೆಗೆ ಹೊರಗೆ ಕುಳಿತ ಸುದ್ದಿಗಾರರಿಗೆ ಯಾವ ಸುದ್ದಿಯೂ ಸಿಗಲಿಲ್ಲ. ಆಗ ಎಲ್ಲ ಸುದ್ದಿಗಾರರು ಕೂಡಿ ಕುಳಿತು ತಾವೇ ಸುದ್ದಿಗಳನ್ನು ಹುಟ್ಟಿಸಿದರು. ಮರು ದಿವಸ ಎಲ್ಲ ಪತ್ರಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಕೆಳಗಿನ ಸುದ್ದಿಗಳು ಪ್ರಸಿದ್ದ ವಾದವು:
೧. ಮ. ಗಾಂಧಿಯವರು ದುಂಡುಮೇಜಿನ ಪರಿಷತ್ತಿಗೆ ಹೋಗುವದಿಲ್ಲ.
೨. ಕಾಯಿದೆಭಂಗ ಚಳವಳಿಯು ಪುನಃ ಪ್ರಾರಂಭ
೩. ಮ. ಗಾಂಧಿಯವರನ್ನು ಪುನಃ ಕೈದು ಮಾಡುವರೋ ?
೪. ಹಿಂದು-ಮುಸ್ಲಿಮ್ ಐಕ್ಯದ ಪ್ರಯತ್ನಗಳು ಸಫಲವಾಗಲಿಲ್ಲ.
ಜಗತ್ತೇ ದಿಗ್ಭ್ರಾಂತವಾಯಿತು !
ಮರುದಿವಸ ಪುನಃ ಕಮಿಟಿಯು ಪ್ರಾರಂಭವಾದ ಕೂಡಲೆ ಎಲ್ಲ ಸುದ್ದಿಗಾರರು ಮ. ಗಾಂಧಿಯವರಿಗೆ ಅರ್ಜಿಯನ್ನು ಕಳಿಸಿ ಆ ದಿವಸ ಮುಂಜಾನೆ ಪ್ರಸಿದ್ಧವಾದ ಸುದ್ದಿಗಳು ನಿಜವೊ ಎಂದು ಕೇಳಿದರು. ಆ ಅರ್ಜಿಯ ಮೇಲೆ ಮ. ಗಾಂಧಿಯವರು ಕಳಗಿನ ಒಂದೇ ವಾಕ್ಯವನ್ನು ಬರೆದು ತಿರುಗಿ ಕಳಿಸಿದರು:
“ಸರತಿಗೆ ಒಂದೊಂದೇ ಸುದ್ದಿಯನ್ನು ಹುಟ್ಟಿಸಿರಿ. ಮೊ. ಕ. ಗಾ, ”
“One sensation at a time, please! M. K. G.”
****
ಯಾರಾದರೂ ಭಾಷಣ ಮಾಡಿದರೆ ಸುದ್ದಿಗಾರರು ಶಾರ‍್ಟ್ ಹ್ಯಾಂಡಿನಲ್ಲಿ ಭಾಷಣವನ್ನು ಬರೆದುಕೊಳ್ಳುತ್ತಾರೆ. ಅದೇ ಯಾರಾದರೂ ಸಿದ್ದ ಲಿಖಿತ ಕಾಗದವನ್ನು ಓದಿದರೆ ಸುದ್ದಿಗಾರರು ಅದನ್ನು ಬರೆದುಕೊಳ್ಳುವದಿಲ್ಲ. ಓದುವದಾದ ಮೇಲೆ ಆ ಕಾಗದವನ್ನು ಇಸಗೊಂಡು ಅದರ ಅವತರಣೆ ಮಾಡಿಕೊಳ್ಳುತ್ತಾರೆ. ಒಮ್ಮೆ ಒಬ್ಬನು ತಾನು ಬರೆದುತಂದ ಕಾಗದವನ್ನು ಓದಿದನು. ಸುದ್ದಿಗಾರರು ಆ ಕಾಗದ ಕೇಳುವರೆಂದು ಅವನಿಗೆ ಗೊತ್ತಿತ್ತು. ಆದ್ದರಿಂದ ತನ್ನ ಕಾಗದದಲ್ಲಿ ಬರೆದ ಭಾಷಣದಲ್ಲಿ ನಡುನಡುವೆ “ಚಪ್ಪಾಳೆ” “ನಗೆ” ಎಂದು ಬರೆದಿದ್ದನು. ಸುದ್ದಿಗಾರರು ಭಾಷಣವನ್ನು ನಕಲು ಮಾಡುವಾಗ ಹೌಹಾರಿ ಕುಳಿತರು !
****
೧೯೧೧ನೇ ಇಸ್ವಿಯಲ್ಲಿ `ಲಂಡನ್ ಟಾಯಮ್ಸ್’ದ ನೌಕರಿಯಲ್ಲಿ ಒಬ್ಬ ಸುದ್ದಿಗಾರನಿದ್ದನು. ಮಹಾ ಆಲಸಿ, ಆದರೆ ವರ‍್ಣನೆ ಮಾಡುವುದರಲ್ಲಿ ಅತಿ ಪ್ರವೀಣನು. ಪರಲೋಕವಾಸಿ ಪಂಚಮ ಜಾರ‍್ಜ ಬಾದಶಹರ ರಾಜ್ಯಾರೋಹಣ ಸಮಾರಂಭದ ಮೆರವಣಿಗೆಯ ವರ್ಣನೆಯನ್ನು ಬರೆಯಲು ಸಂಪಾದಕರು ಆ ಸುದ್ದಿಗಾರನಿಗೆ ಆಜ್ಞಾಪಿಸಿದರು. ಮೊದಲೇ ಆಲಸಿ. ಮೆರವಣಿಗೆಯ ವೇಳೆ ಮುಗಿದ ಮೇಲೆ ಹಾಸಿಗೆಯಿಂದ ಎದ್ದನು. ಕಣ್ಣು ತಿಕ್ಕುತ್ತ ವೇಳೆ ನೋಡಿದನು, ಮೆರವಣಿಗೆಯ ವೇಳೆ ಮುಗಿದಿತ್ತು. ಆದರೆ ಆತ ಎದೆಗುಂದದೆ ಒಂದು ಕಾಲ್ಪನಿಕ ವರ್ಣನೆಯನ್ನು ಬರೆದನು. ವೆಸ್ಟ್ ಮಿನ್ಸಸ್ಟರ್ ಚರ್ಚಿನ ಎದುರಿಗೆ ರಚಿಸಿದ ಭವ್ಯವಾದ ಕಮಾನಿನಲ್ಲಿ ಮೆರವಣಿಗೆ ಹಾಯ್ದು ಹೋಗುವಾಗೆ ಸರ್ವೋತ್ಕೃಷ್ಟ ದೃಶ್ಯವು ಕಂಡುಬಂತೆಂದು ಬರೆದು ಬಿಟ್ಟಿದ್ದನು. ಆದರೆ ದುರ್ದೈವದಿಂದ ಮೆರವಣಿಗೆಯು ಸುರುವಾಗುವದಕ್ಕಿಂತ ಸ್ವಲ್ಪ ಮೊದಲೇ ಅಕಸ್ಮಾತ್ತಾಗಿ ಬೆಂಕಿ ಹತ್ತಿ ಆ ಕಮಾನು ಸುಟ್ಟು ಹೋಗಿತ್ತು. ಆದ್ದರಿಂದ ಆ ಸ್ಥಳದಲ್ಲಿ ದೃಶ್ಯವು ರಮಣೀಯವಾಗಿರದೆ ತದ್ವಿರುದ್ಧವಾಗಿತ್ತು. ಸಂಪಾದಕರು ಸುದ್ದಿಗಾರನ ಕಾಲ್ಪನಿಕ ವರ್ಣನೆ =ಯನ್ನು ಓದಿದ ಕೂಡಲೆ ಅವನನ್ನು ನೌಕರಿಯಿಂದ ತೆಗೆದರು.
ಸುದ್ದಿಗಾರನು ಸುಮ್ಮನೇ ಕೂಡ್ರಲಿಲ್ಲ. ಒಂದು ಅನಾಥಾಶ್ರಮಕ್ಕೆ ಹೋಗಿ ತನ್ನ ಮುಖವನ್ನು ಹೋಲುವ ಬೇರೆ ಬೇರೆ ವಯಸ್ಸಿನ ನಾಲ್ಕು ಚಿಕ್ಕ ಹುಡುಗರನ್ನು ಕೂಡಿಸಿದನು. ಅವರಿಗೆ ಬಿಸ್ಕೀಟು-ಕೇಕುಗಳನ್ನು ತಿನ್ನಿಸಿ, ಚಹಾ ಕುಡಿಸಿ, ಅವರೊಡನೆ ಸಂಪಾದಕರ ಹತ್ತಿರ ಹೋದನು. ಸಂಪಾದಕರಿಗೆ ಹೇಳಿದನು-“ನೀವು ನನಗೆ ಬೇಕಾದ ಶಿಕ್ಷೆಯನ್ನು ವಿಧಿಸಿರಿ. ಆದರೆ ಈ ನನ್ನ ಮಕ್ಕಳ ಉಪಜೀವನದ ಮಾರ್ಗವನ್ನು ನಿಲ್ಲಿಸಬೇಡಿರಿ” ಹೀಗೆ ಅಂದು ಅಳುವಂತೆ ನಟಿಸಿ ಕಣ್ಣು ತುಂಬ ನೀರು ತಂದನು. ತಮಗೆ ಉಣಿಸಿ ತಿನಿಸಿದ ಹಿತೈಷಿಯು ಅಳುವದನ್ನು ಕಂಡು ಚಿಕ್ಕ ಹುಡುಗರೂ ಅಳಹತ್ತಿದರು. ಸುದ್ದಿ ಗಾರನಿಗೆ ಪುನಃ ನೌಕರಿಯು ದೊರೆಯಿತು.
*****
Tagged:

Leave a Reply

Your email address will not be published. Required fields are marked *

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...