ಹಸುರೊಂದು ಹೊಲದಲ್ಲಿ
ಮುದದೊಂದು ಸುಧೆಯಲ್ಲಿ
ಹಕ್ಕಿಯೊಂದು ಹಾಡಿತು
ಧ್ವನಿಯೊಂದು ಕೂಗಿತು.
ಕಂಗೊಳಿವ ಕಣಿವೆಯಲಿ
ಸುಂದರದ ವನದಲ್ಲಿ
ಮುಗುಳೊಂದು ಬೀರಿತು
ಚಲುವೊಂದು ಕೋರಿತು.
ಮುಗಿಲಿನಾ ಮೇಘದಲಿ
ಗಗನದಾ ಗೀಟಿನಲಿ
ಚಿಕ್ಕಿಯೊಂದು ಮಿನಿಗಿತು
ಚಂದವನು ತಂದಿತು.
ಸರಸಿಯಾ ತೀರದಲಿ
ಘನತೆಯಾ ಸಂತಸದಿ
ಸೀರುಂಬೆ ಸೀರಿತು
ಸರಸಿಯನು ಮರೆಸಿತು.
ನಿಶ್ಯಬ್ದ ವನದಲ್ಲಿ
ನಿಸರ್ಗ ಭವನದಲಿ
ನೆಮ್ಮದಿಯು ನೆಲೆಸಿತು
ಶಾಂತತೆಯ ತಂದಿತು.
*****









