ನಮ್ಮ ದೇಹದ ಬಗೆಗೆ ಒಂದಿಷ್ಟು ಮಾಹಿತಿ ಸಂಶೋಧನೆಗಳು

ನಮ್ಮ ದೇಹದ ಬಗೆಗೆ ಒಂದಿಷ್ಟು ಮಾಹಿತಿ ಸಂಶೋಧನೆಗಳು

ಮಾನವ ಜನ್ಮ ದೊಡ್ಡದು ತಿಳಿಯಿರೋ ಹುಚ್ಚಪ್ಪಗಳಿರಾ, ಎಂದು ದಾಸರು ಹೇಳಿದರು. ಈ ದೊಡ್ಡ ಜನ್ಮದಲ್ಲಿ ಹುಟ್ಟಿದ ಮಾನವ ಶರೀರದ ಶೋಧವು ಕೂಡ ಅಷ್ಟು ದೊಡ್ಡದು ಮತ್ತು ಕೌತುಕ ಮಯವಾದದ್ದು ಇದನ್ನು ಶೋಧಿಸಿದ ವಿಜ್ಞಾನಿಗಳು ದೇಹದೊಳಗಿನ ರಹಸ್ಯವನ್ನು ಬಿಡಿಸಿಡುತ್ತಾರೆ. ಮಾನವ ಶರೀರ ವಿಸ್ಮಯಗಳ ಆಗರ. ಮಾನವನ ಒಂದು ಚದುರ ಅಂಗಲ ಚರ್ಮದಲ್ಲಿ ೧೯ ದಶಲಕ್ಷ ಜೀವ ಕೋಶಗಳು, ೯೦ ತೈಲಗ್ರಂಥಿಗಳು, ೬೨೫ ಬೆವರು ಗ್ರಂಥಿಗಳು, ಮತ್ತು ೧೯ ಅಡಿಯಷ್ಟು ಉದ್ದದ ರಕ್ತನಾಳವೂ ಇದೆ. ವಯಸ್ಕ ಮನುಷ್ಯನ ದೇಹದಲ್ಲಿ ಸು. ೬೩೯ ಸ್ನಾಯುಗಳು ೧೦೦ ಜೋಡಣೆಗಳು, ೧,೦೦,೦೦೦ಕೀ.ಮಿ. (೬೦,೦೦೦ಮೈಲುಗಳು) ರಕ್ತನಾಳಗಳು ಮತ್ತು ೧೩,೦೦೦ ಮಿಲಿಯನ್ ನರಗಳನ್ನು ಹೊಂದಿದೆ. ಮಾನವನ ಕಣ್ಣು ಸು. ೧೭,೦೦೦ ಬಗೆಯ ಬಣ್ಣಗಳನ್ನು ಗುರುತಿಸಬಲ್ಲದು. ಕಣ್ಣುಗಳಲ್ಲಿಯ ರೆಟಿನಾವು ೧೩೭ ಮಿಲಿಯನ್‌ಗಳಷ್ಟು ಬೆಳಕು ಸಂವೇದನಾ ಶೀಲ ಜೀವಕೋಶಗಳನ್ನು ಹೊಂದಿದೆ. ಅವುಗಳಲ್ಲಿ ೧೩೦ ಮಿಲಿಯನ್ ರಾಡ್‌ಜೀವಕೋಶಗಳು (ಕಪ್ಪು ಬಿಳುಪು ದೃಷ್ಟಿಗಾಗಿ) ಮತ್ತು ೭ ಮಿಲಿಯನ್ ಕೋನ್ ಜೀವಕೋಶಗಳು ಇವೆ. (ಬಣ್ಣಗಳ ದೃಷ್ಟಿ ಗಾಗಿ ) ನಾವು ಪ್ರತಿ ೬ ಸೆಕೆಂಡಿಗೊಮ್ಮೆ ಕಣ್ಣು ಮಿಟುಕಿಸುತ್ತೇವೆ. ದಿನಕ್ಕೆ ಸರಾಸರಿ ೨೫೦೦ ಬಾರಿ ಜೀವನ ಪರ್ಯಂತರ ೨೫೦ ಮಿಲಿಯನ್ ಬಾರಿ ಕಣ್ಣು ಮಿಟುಕಿಸುತ್ತೇವೆ. ಮಾನವನ ಮೂಗು ೫ ಮಿಲಿಯನ್ ಸೂಕ್ಷ್ಮವಾದ ವಾಸನಾ ಗ್ರಂಥಿಗಳನ್ನೊಳಗೊಂಡಿದೆ. ಮಾನವನ ಮೆದುಳಿನ ತೂಕವು ದೊಡ್ಡವರಿಗೆ ಸು. ೧,೨೮೦ ಗ್ರಾಂನಿಂದ ೧,೩೮೦ ಗ್ರಾಂ ಆದರೆ ೩೭೦-೪೦೦ ಗ್ರಾಂ – ಉಳ್ಳದ್ದಾಗಿರುತ್ತದೆ. ಇದು ೧೦ ಮಿಲಿಯನ್‌ಗಿಂತಲೂ ಹೆಚ್ಚಿನ ನರಗಳನ್ನು ಹೊಂದಿದೆ. ಮತ್ತು ಇದು ೯,೦೦೦,೦೦೦,೦೦೦ ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಮೆದುಳಿನಲ್ಲಿ ಸೆ.೮೦ ಭಾಗ ನೀರಿದ್ದರೆ, ಚಪ್ಪಟೆಯಾಕಾರದ ಬೂದು ಬಣ್ಣವನ್ನು ಇದು ದೊಂದಿದೆ. (ಹೊದಿಕೆ) ಈ ಹೊದಿಕೆಯು ೯,೦೦೦,೦೦೦,೦೦೦ ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಈ ಮೆದುಳು ನರಗಳ ಮೂಲಕ ತನ್ನ ಸಂದೇಶಗಳನ್ನು ಸೆಕೆಂಡಿಗೆ ೩೦೦ ಅಡಿ ವೇಗದಲ್ಲಿ ಕಳಿಸುತ್ತದೆ. ಮೆದುಳು ಪ್ರತಿದಿನ ೮೬ ಮಿಲಿಯನ್ ಸುದ್ದಿಯ ತುಣುಕುಗಳನ್ನು ನೆನಪಿಡುವ ಸಾಮರ್ಥ್ಯಹೊಂದಿದೆ. ಮೆದುಳಿನಷ್ಟು ಸುವ್ಯಸ್ಥವಾದ ವಸ್ತು ಜಗತ್ತಿನಲ್ಲಿ ಬೇರೊಂದಿಲ್ಲ. ಈ ಮೆದುಳಿನಷ್ಟೇ ಸಾಮರ್ಥ್ಯವನ್ನು ಹೊಂದಿರುವ ಒಂದು ಕಂಪ್ಯೂಟರ್ ತಯಾರಿಸಬೇಕಾದರೆ ೧೨೫೦ ಅಡಿಗಳಷ್ಟು ಉದ್ದವಾಗಿರಬೇಕಾಗುತ್ತದೆ ಮತ್ತು ಇದಕ್ಕೆ ೧,೦೦೦,೦೦೦,೦೦೦ ಲ್ಯಾಟ್ ವಿದ್ಯುತ್ ಶಕ್ತಿ ಪೂರೈಕೆಬೇಯಾಗಬೇಕಾಗುತ್ತದೆ. ಪ್ರತಿಯೊಬ್ಬ ಮಾನವನ ಹೃದಯದ ತೂಕವು ಕೇವಲ ೨೨೦-೨೫೦ ಗ್ರಾಂ ನಷ್ಟು ಮಾತ್ರ. ಅದು ನಿಮಿಷಕ್ಕೆ ೭೨ ಬಾರಿ ಬಡಿದುಕೊಳ್ಳುತ್ತದೆ. ಪ್ರತಿಯೊಂದು ಬಡಿತವೂ ೭೦ ಗ್ರಾಂ ನಷ್ಟು ರಕ್ತವನ್ನು ಹೃದಯದಿಂದ ಹೊರಕಳಿಸುತ್ತದೆ. ಒಂದು ವರ್ಷಕ್ಕೆ ೨೨೫೫ ಟನ್ ತೂಕದ ರಕ್ತವನ್ನು ಅದು ಪಂಪ್ ಮಾಡುತ್ತದೆ. ೬೦,೦೦೦ ಮೈಲುಗಳಷ್ಟು ಉದ್ದದ ರಕ್ತನಾಳಗಳಲ್ಲಿ ರಕ್ತವನ್ನು ಪಂಪ್ ಮಾಡುತ್ತದೆ. ಈ ರಕ್ತನಾಳಗಳನ್ನು ಒಂದರ ಮುಂದೆ ಒಂದನ್ನು ಜೋಡಿಸುತ್ತ ಬಂದರೆ ೧೦೦,೦೦೦ ಮೈಲುಗಳಷ್ಟು ಉದ್ದವಾಗುತ್ತದೆ. ಮೂತ್ರ ಪಿಂಡವು ಒಂದೊಂದು ೧೦ ಲಕ್ಷ ನೆಫ್ರಾನ್‌ಗಳನ್ನು ಹೊಂದಿದೆ. ಈ ನೆಫ್ರಾನ್‌ಗಳನ್ನು ಉದ್ದಮಾಡಿ ಜೋಡಿಸಿದರೆ ೧೦೫ ಕಿ.ಮೀ. ಉದ್ದವಾಗುತ್ತದೆ. ಒಂದೊಂದು ಮೂತ್ರ ಪಿಂಡವು ೨ ಮಿಲಿಯನ್ ರಕ್ತಶೋಧಿಸುವ ನಾಳಗಳನ್ನು ಹೊಂದಿದೆ. ಅಸ್ಥಿಮಜ್ಜೆ (ಭೊನೆ ಂಅರ್ರೊವ್) ಪ್ರತಿ ಸೆಕೆಂಡಿಗೆ ೧೦,೦೦೦,೦೦೦ ಕೆಂಪು ರಕ್ತಕಣಗಳನ್ನು ತಯಾರಿಸುತ್ತದೆ. ಒಂದು ಚ.ಮಿ.ಮೀ ರಕ್ತವು ೫,೦೦೦,೦೦೦ ಕೆಂಪುರಕ್ತಗಳು ಮತ್ತು ೫೧೦ ಸಾವಿರ ಬಿಳಿ ರಕ್ತಕಣಗಳನ್ನು ದಿನವೊಂದಕ್ಕೆ ದೇಹದ ಸುತ್ತ ೧೪೦೦ ಸುತ್ತುಸುತ್ತುತ್ತದೆ. ಶ್ವಾಸಕೋಶವು ೩,೦೦೦,೦೦೦ ಮಿಲಿಯನ್ ಲೋಮನಾಳಗಳೆಂಬ ಸಣ್ಣ ರಕ್ತ ನಾಳಗಳನ್ನು ಹೊಂದಿದೆ. ಅದನ್ನು ಉದ್ದಮಾಡಿ ಒಂದರ ಮುಂದೆ ಒಂದನ್ನು ಜೋಡಿಸಿಗರೆ ೨,೪೦೦ ಕಿ ಮೀ ಉದ್ದವಾಗುತ್ತದೆ. ಜಠರದಲ್ಲಿಯ ಪಾಚಕ್ಲಾಮಪು ಸತುವಿನಂತಹ ಲೋಹವನ್ನು ಕರಗಿಸುವ ಸಾಮರ್ಥ್ಯ ಹೊಂದಿದೆ. ಅವುಗಳಿಂದ ಜಠರದ ಪದರವು ಕರಗಿದಿರಲೆಂದು ಪ್ರತಿನಿಮಿಷಕ್ಕೆ ೫,೦೦೦,೦೦೦ ಹೊಸ ಜೀವಕೋಶಗಳು ಹುಟ್ಟುತ್ತವೆ. ಮತ್ತು ಪ್ರತಿ ಮೂರು ದಿನಗಳಿಗೊಮ್ಮೆ ಹೊಸಪದರುಗಳು ಬದಲಾವಣೆ ಹೊಂದುತ್ತವೆ. ಮನುಷ್ಯನ ಮೂಳೆಯು ಗ್ರಾನೈಟ್‌ನಷ್ಟು ಗಟ್ಟಿಯಾಗಿದೆ. ಮಾನವನ ದೇಹವು ೭೨,೦೦೦ ನರಗಳನ್ನು ಹೊಂದಿದೆ. ನರಗಳು ಪಂಚೇಂದ್ರಿಯಗಳನ್ನು ಮೆದುಳಿನ ಜತೆ ಸಂಪರ್ಕ ಮಾಡುತ್ತವೆ. ಒಂದೊಂದು ಇಂದ್ರಿಯ ಕೊಡುವ ಸಂದೇಶವನ್ನು ಮೆದುಳಿಗೆ ಒಯ್ದುಮುಟ್ಟಿಸುತ್ತದೆ. ಈ ಸಂದೇಶಗಳನ್ನು ಗಂಟೆಗೆ ೪೨೭ ಕಿ. ಮೀ. ವೇಗದಲಿ ಒಯ್ಯಲ್ಪಡುತ್ತವೆ. ಮಾನವನ ಯಕೃತ್ತಿನ ಶೇ. ೮೦ ರಷ್ಟು ತುಂಡರಿಸಿ ಬೇರ್ಪಪಡಿಸಿದರೂ ಉಳಿದ ಸೆ. ೨೦ ರಷ್ಟು ಭಾಗ ತನ್ನ ಎಲ್ಲ ಕಾರ್ಯಗಳನ್ನು ಮಾಡಿಮುಗಿಸುತ್ತದೆ. ಮತ್ತು ತುಂಡರಿಸಿದ ಭಾಗವು ಮತ್ತೆ ಬೆಳೆಯುತ್ತದೆ. ಮನುಷ್ಯ ಮಾತ್ರ ಅಂಗಾತ ಮಲಗುವ ಏಕೈಕ ಪ್ರಾಣಿ ಇದು ಪ್ರಾಣಿ ಲೋಕದ ವೈಚಿತ್ರ್ಯ. ದಿನಂ ಪ್ರತಿ ನಾವು ೬,೦೦೦ ರಿಂದ ೮,೦೦೦ ಹೆಜ್ಜೆಹಾಕುತ್ತೇವೆ. ವರ್ಷಕ್ಕೆ ೨.೫ ದಶಲಕ್ಷ (ಜೀವನ ಪರ್ಯಂತ) ಹೆಜ್ಜೆಗಳನ್ನು ಹಾಕಿ ಚಂದ್ರನನ್ನು ತಲುಪಬಹುದು. ನಡೆಯುವಾಗ ಸರಾಸರಿ ೧೦೦೦ ಟನ್‌ಗಳಷ್ಟು ಭಾರವನ್ನು ಪಾದಗಳ ಮೇಲೆ ಹಾಕಿದಂತಾಗುತ್ತದೆ. ನಾವು ಜೀವನ ಪರ್ಯಂತ ೫೦ ಟನ್ ಆಹಾರ ಸೇವಿಸುತ್ತೇವೆ. ೧೬,೦೦೦ ಸಾವಿರ ಗ್ಯಾಲನ್ ನೀರು ಕುಡಿಯುತ್ತೇವೆ. ನಮ್ಮ ದೇಹದ ತೂಕದಲ್ಲಿ ಸುಮಾರು ಶೇ. ೯೬ ರಷ್ಟು ಭಾಗ ನೀರು ಪ್ರೋಟಿನ್, ಕಾರ್ಬೋಹೈಡ್ರೆಟ್, ಮತ್ತು ಕೊಬ್ಬಿನ ವಸ್ತುಗಳಿಂದ ತುಂಬಿಕೊಂಡಿದೆ. ಉಳಿದ ಭಾಗ ಖನಿಜ ವಸ್ತುಗಳು ಕ್ಯಾಲ್ಸಿಯಂ, ಮತು ರಂಜಕ ಹೆಚ್ಚಿನ ಪ್ರಮಾಣದಲ್ಲಿದ್ದು ಅಸ್ತಿಪಂಜರ ಮತ್ತು ಹಲ್ಲುಗಳಲ್ಲಿ ಸಂಗ್ರಹಿಸಿರುತ್ತದೆ. ೧ ಕಿ ಗ್ರಾಂ ನಷ್ಟು ಕ್ಯಾಲ್ಸಿಯಂ, ೭ ಬಾರಿ ಸೋಪು ತಯಾರಿಸುವಷ್ಟಾಗುತ್ತದೆ. ೧ ಕೆ. ಜಿ. ಕೊಬ್ಬು ೧ ಕಿಲೋನಷ್ಟು ರಂಜಕಗಳು ಶೇಖರಿಸಲ್ಪಟ್ಟಿರುತ್ತವೆ. ಉಳಿದ ಮುಖ್ಯ ಖನಿಜಗಳೆಂದರೆ ಗಂಧಕ, ಪೊಟ್ಯಾಶೀಯಂ, ಸೋಡಿಯಂ, ಕಬ್ಬಿಣ, ಕಾರ್ಬನ್, ಕ್ಲೋರಿಯಂ, ಮ್ಯಾಗ್ನಿನೀಸ್, ತಾಮ್ರ, ಐಯೋಡಿನ್, ಸತು ಮತ್ತು ಫ್ಲೋರಿನ್ (ಸ್ವಲ್ಪ ಮಟ್ಟಿಗೆ) ಇರುತ್ತವೆ. ಇದು ಮನುಷ್ಯನ ದೇಹಾಂತರಂಗದ ವಿರಾಟ ಸ್ವರೂಪವಾಗಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅರಿಷಿಣ ಹಚ್ಚೂ ಹಾಡು – ೧
Next post ಎಷ್ಟು ಯತ್ನಿಸಿದರು

ಸಣ್ಣ ಕತೆ

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

cheap jordans|wholesale air max|wholesale jordans|wholesale jewelry|wholesale jerseys