ಎದ್ದು ಬಾರಯ್ಯ ರಂಗ
ಎದ್ದು ಬಾರಯ್ಯ ಕೃಷ್ಣ
ಎದ್ದು ಬಂದು ನಿನ್ನ ಮುದ್ದು
ಮೊಗವ ತೋರೋ |

ಹಾಲ ಕಡಲ ಮಥಿಸಿ
ಮಜ್ಜನ ಮಾಡಿಸಿ ನಿನ್ನ
ಗಂಧವ ತೇದು ಪೂಸಿ
ತುಳಸಿಮಾಲೆ ಕೊರಳೊಲು
ಶೃಂಗಾರ ಮಾಡುವರೋ ರಂಗ ||

ಮುದ್ದು ಮೊಗಕೆ ನಿನ್ನ
ಮುತ್ತನ್ನು ಕೊಟ್ಟು ದೃಷ್ಟಿಯಾಗಿತ್ತೆಂದು
ಕಾಡಿಗೆ ಇಟ್ಟು ಗಲ್ಲಕೆ
ಒಂದಿಷ್ಟು ಇಷ್ಟು ಬೆಣ್ಣೆಯ
ಕೊಡವಳೋ ಯಶೋದಾ ||

ಕೊಳಲನೂದಲು ನೀನು
ಬರುವರು ಗೋಪಿಕೆಯರು
ಲೋಕವ ಮರೆತು ಕುಣಿಕುಣಿದು
ನಲಿಯುವರೋ ಗೋಪಾಲ ||

ಅಕ್ಕರೆಯ ತೋರಿ ಸಕ್ಕರೆ ನೀಡಿ
ಗೋಪಮ್ಮ ಕರೆದಾಳೊ ಹೋಗದಿರು
ಮತ್ತೆ ಕಾಡದಿರು ಅಂಗನೆಯರ
ಗುಮ್ಮ ಬರುವನೋ ಕಂದ ||
*****