ಎಲ್ಲಿ ಕಾಣುತ್ತಿಲ್ಲವಲ್ಲ!
ನಿನ್ನಲ್ಲಿಗೆ ಬಂದು
ವಾಸ್ತವ್ಯ ಹೂಡಿ
ಬೆಳಕು ಕಂಡ
ಕಿನ್ನರ ಲೋಕದವರಂತಿದ್ದ ಹಕ್ಕಿ ನೆಂಟರು.

ಬಹಳ ಹಾಲು ಬಣ್ಣದವರು
ಸಂಜೆ, ಮುಂಜಾವುಗಳಲಿ ಕೂಟ ನಡೆಸಿ
ಕಲರವ ಗಾನ ತರಂಗಗಳ ಚಿಮ್ಮಿಸಿ
ರಸಚಿತ್ತದಾಟಗಳಲಿ ಮುಳುಗಿ
ಕಣ್ಮನವ ತುಂಬಿ
ಪರಿಸರದಿ ಹೊಸ ಸಂಚಲನವ ತಂದವರು.

ನಿನ್ನೊಡಲಲಿ
ತೂಗುವ ಪುಟ್ಟ ಪುಟ್ಟ ಪ್ರೇಮ ಮಹಲುಗಳಲಿ
ಮೊರೆಯುವ ಪಿಸು ಪಿಸು, ದುಸುಮುಸು,
ಜೀವವರಳಿಕೆ ಕಾಲದ ಕಾವು ನೋವು
ಹೊಸ ರಕ್ತದಾಗಮನ, ಆರೈಕೆ ಹೀಗೆ!
ಬದುಕಿನ ಸಕಲ ವ್ಯವಹಾರಕ್ಕೆ ಸಾಕ್ಷಿಯಾಗಿದ್ದೆ;
ನಿನ್ನದೂ ಬೆರೆಸಿದ್ದೆ.

ಮುಂದೆ ಬಾರರೋ… ಬರುವರೋ
ಹೇಗನಿಸುತಿದೆ?
ನನ್ನ ದಾರಿ ನನಗಿದೆ.
*****

ವೆಂಕಟಪ್ಪ ಜಿ
Latest posts by ವೆಂಕಟಪ್ಪ ಜಿ (see all)