ಬಾಲಹುಸೇನ ಸತ್ಯಕ ಶರಣ || ಪ ||

ಪ್ರಭುವಿನ ಕರುಣ ಗೆಲಿದಾರೋ ಗಾದಿನ
ಛಲದಿಂದ ಬಲವಾಗಿ ಹೊಕ್ಕಾರೋ ಮದೀನ || ೧ ||

ಕಬ೯ಲಹಾದಿಯ ಹಿಡಿದಾರೋ ಮಾರ್ಗವ
ಛಲದಿಂದ ಬಲವಾಗಿ ಬಿಟ್ಟಾರೋ ಮದೀನ || ೨ ||

ಯಜೀದ ಮಾರ್ಗವ ಮಾಡೋದು ಸಂದಣ
ಮೋಸದಿಂದ ವಿಷವ ಕುಡಿದು ಬಿಟ್ಟಾರೋ ಮದೀನ || ೩ ||

ಹಿರಿಯರ ನೇಮವ ಮಾಡುದು ನೇಮಜ
ವಸುಧಿಯೊಳು ಶಿಶುನಾಳಧೀಶನ ಕವನ || ೪ ||
*****