ಗಂಧದ ಕಡ್ಡಿಯ ಕಿಡಿ
ಉದ್ಘಾಟಿಸಿದೆ
ನವ್ಯಕಲಾಕೃತಿಯ
ಪ್ರದರ್ಶನ!
ತೇಲುತಿವೆ ಧೂಪದಲಿ
ರೂಪರೇಖಾಕಾರ
ಅನಾದಿ ಓಂಕಾರ!
*****