ಜನವರಿ ೨೬
೨೬ ಜನವರಿ ತಾರೀಖಿನ ಮಹತ್ವ ಏನೆಂದು? ಒಬ್ಬ ಯುವಕನನ್ನು ಓರ್‍ವ ಹಿರಿಯರು ಕೇಳಿದರು. ದೇಶಕ್ಕೆ ಯೇನಾಯಿತೆಂದು ನನಗೆ ಖಂಡಿತ ಗೊತ್ತಿಲ್ಲ. ಆದರೆ ನನ್ನ ವೈಯಕ್ತಿಕ ಜೀವನದಲ್ಲಿ ಅಂದು ನನ್ನ ಗರ್ಲ್ ಫ್ರೆಂಡ್ ಜೊತೆ ಮೊದಲು ಡೇಟಿಂಗ್ ಮಾಡಿದ್ದೆ. ಅದು ನನಗೆ ಬಹಳ ಮಹತ್ವವಾದುದು” ಎಂದ. *****
ನಮ್ಮ ದೇಶದಲ್ಲಿ ರಾಷ್ಟ್ರಧ್ವಜವೂ ಚಿಲ್ಲರೆ ರಾಜಕೀಯ ಪ್ರವೃತ್ತಿಗೆ ಬಲಿಪಶುವಾಗುತ್ತಿರುವುದು ಒಂದು ದುರಂತವೇ ಸರಿ. ಈ ದೇಶದಲ್ಲಿ ಬಡತನಕ್ಕೆ ಬರವಿಲ್ಲ; ಜನಸಂಖ್ಯೆಗೆ ಬರವಿಲ್ಲ; ಇಲ್ಲಿ ಮಹಲುಗಳು ಮಲೆತಿರುವಾಗ ಗುಡಿಸಲುಗಳಿಗೆ ಗರಬಡಿದಿರುತ್ತದೆ. ಗುಡಿಗೋಪುರಗಳೇ ಗುಟುರು ಹಾಕುವ ವಿಚಿತ್ರದಲ್ಲಿ ನಿಜಭಕ್ತರಿಗೆ ಬೆವರೊಡೆದು ದಿಗ್ಭ್ರಾಂತರಾಗುವ ಸನ್ನಿವೇಶ ಆವರಿಸುತ್ತಿದೆ. ಪರಸ್ಪರ ಕೈಕುಲುಕಬೇಕಾದ ಮಂದಿರ-ಮಸೀದಿಗಳು ಹಲ್ಲು ಮಸೆಯುತ್ತಾ ಅಸಹನೆಯ ಹುತ್ತ ಹುಟ್ಟಿದ್ದಾಗಿದೆ. ಈ ದೇಶಕ್ಕೆ […]
ರೊಟ್ಟಿಗೆ ಗೊತ್ತಿರುವುದು ರೂಪಕವಾಗುವ ನಿಜವೊಂದೇ. ಆದರೆ ಹಸಿವೇ ಸುಳ್ಳಿದ್ದರೆ ಆಕಾರಗೊಂಡ ರೊಟ್ಟಿಯೂ ಆಯ್ಕೆಗೆ ಅನರ್ಹ. *****