ಮೊಟ್ಟೆಯಾಗಿ ಮೊದಲಿನವಸ್ಥೆ ಆಗ ಪ್ರೇಮಗೀತೆಗಳಲ್ಲಿ ವೀರ ಗಾಥೆಗಳಲ್ಲಿ ಅವನ ಆಸ್ಥೆ ಒಡೆದು ಆಗುವನು ಹುಳ ಭಾರಿ ಕಳವಳಗೊಂಡು ತನ್ನದಾಗಿಸಿಕೊಂಡು ಜಗದ ದುಃಖಗಳ ಕ್ರಮೇಣ ಸುತ್ತ ಕೋಶ- ಬೆಳೆದು ಅಂತರ್ಮುಖಿ ಸ್ವಾಂತ ಸುಖಿ ನಿದ್ರಾವಸ್ಥೆಗೆ ವಶ ನಾಲ್ಕನೆಯದೇ...

ಕ್ಷುಲ್ಲಕ ತೊಂದರೆಯೊದಗಿದರೂ ಮೋರೆಗೆ ಸೆರಗುಹಾಕಿ ಅಳುವನೆಂದೋ ಏನೋ, ನನ್ನ ಪಾಲಿಗೆ ಪೇಚಾಟದ ಪ್ರಸಂಗಗಳೇ ಬಹಳ. ಒಂದನೆಯ ಪಿರಿಯಡ್ಡು ಇದ್ದು ಕಾಲೇಜಿಗೆ ಮುಟ್ಟುವಲ್ಲಿ ತಡವಾದಾಗ ವಾಹನದ ಅನುಕೂಲತೆ ಆಗದೆ ಹೋಗುವುದು; ಚಹದ ಅಂಗಡಿಗೆ ಹೋದಾಗ ಜೇಬಿನಲ್ಲಿ ...

ಸಂಗೀತ ಮತ್ತೆ ಬದುಕಿ ಬಂದಂತೆ… ಲೋಕದಾಚೆಯಿಂದ ಇಲ್ಲಿಗೆ ತಂದವರು, ಮನಸ್ಸಿನ ಒಳಕಿವಿಯ ಸುರುಳಿ ಮೆಟ್ಟಿಲಲ್ಲಿ ಕೈ ಹಿಡಿದು ನಡೆಸಿದವರು ಯಾರು? ವರ್ತಮಾನ ತನ್ನನ್ನಳಿಸಿಕೊಂಡು ತಾನೆ ಅದಾದಂತೆ ಮಾಯವಾದ ಒಂದು ಕ್ಷಣವೊಂದು ಮತ್ತೆ ಹಿಂದಿರುಗಿದಂತೆ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...