ಸತ್ಯ ಸೀಮೆಗೆ ತಾಯೆ ನಡಿಸೆನ್ನ
Latest posts by ಪಂಜೆ ಮಂಗೇಶರಾಯ (see all)
- ಶೋಕಗೀತೆ - January 7, 2021
- ಲಕ್ಷ್ಮೀಶ ಕವಿ - December 31, 2020
- ಚಂದ್ರೋದಯ - December 24, 2020
ಮಳೆ ಹನಿಯ ಬಿಡು ಹೂಗಳಲಿ, ಮರ ಗಳ ಹಸುರು ಹಚ್ಚೆಯಲಿ, ಕಡಲಿನ ಬಿಳಿ ನೊರೆಗಳಂಚಿನಲಿ ಮಿರುಗುವ ಸೀರೆಯನು ತಳೆದ, ಹೊಳೆವ ಹೊಳೆಗಳ ಗಳದ ಸರದಲಿ ಝಳದ ಹಿಮಗಿರಿಮಕುಟದಲ್ಲಿ ಥಳ ಥಳೆವ ರಮಣಿಯೆ! ಜನ್ಮಧರಣಿಯೆ! ಭರತಭೂಮಣಿಯೇ! ಹೊತ್ತಿಸಿದೆನೌ ಮುಂಚಿನಾಳಕೆ ವೆತ್ತ ಬೀರರ ಪೂರ್ವದರಸರ ಹೊತ್ತ ನಿನ್ನುದರವನು; ಧರ್ಮಾಮೃತದ ಬೋಧಕರ ಹೆತ್ತ ನಿನ್ನೀಬಸುರು, ನನ್ನನು ಹೆತ್ತು ಹಡೆಯಿತು ವಿಷವ; […]