ಉಪ್ಪವ್ವಾ ಉಪ್ಪು

ಏ ಯವ್ವ ಬುಡ್ಡವ್ವ ಗಿಡ್ಡವ್ವ ಮುದುಕವ್ವ ಉಪ್ಪವ್ವ ಉಪ್ಪೂ ತಾರೆಯವ್ವ ಪಿಚ್ಚೀನ ಗೊರಕೆವ್ವ ತೂಕಡಿಕಿ ತಕಡೆವ್ವ ಉಪ್ಪವ್ವ ಉಪ್ಪೂ ನೀಡೆಯವ್ವ ನೀನೊಂದು ಗುಳ್ಳವ್ವ ಗುಳಕವ್ವ ಉಳಕವ್ವ ಚಿಬ್ಲುಪ್ಪು ಚಳ್ಳಣ್ಣು ತಾರೇಯವ್ವ ಗೊಂಗ್ಡ್ಯಾಗ ಗೋಣ್ಹಾಕಿ ಮುಂಗ್ಲ್ಯಾಗಿ...

ಪ್ರಥಮ ಪಾಠ

ಮನಸ್ಸಿನಾಳಕ್ಕೆ ಗಾಳ ಇಳಿಸಿ ಕಾಯುತ್ತ ಕೂತೆ ಬಂದೀತು ಎಂದು ಕಥೆ, ಕಡೆಗೊಂದು ಮಿಡಿಗವಿತೆ. ನಾ ಪಟ್ಟಕಷ್ಟ ಒಂದೊಂದನೇ ಕೆಳಕೆಡವಿ ಮೆಟ್ಟಲಾಗಿಸಿ ಮೇಲೆ ಹತ್ತಿ ಕತ್ತಲ ಕಾಡು ಕತ್ತಿಯಲಿ ಸವರಿ ಹೊರಬಂದ ಸಾಹಸ ನೆನೆದು ರೋಮಾಂಚಗೊಂಡೆ....