ಮಾತೃಛಾಯಾ
ತೊನೆಯದಿದ್ದರು ಹಣ್ಣು ಕಾಯಿ ಹೂಗಳನ್ನು ಬಿದಿರು ತೊಟ್ಟಿಲಾಗಿ ತೂಗುವುದು ಮಕ್ಕಳನ್ನು ಬುಟ್ಟಿಯಾಗಿ ಹೊರುವುದು ಹಣ್ಣು ಕಾಯಿ ಹೂಗಳನ್ನು *****
ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು, ಪಕ್ಕದಲ್ಲೇ ಮೌಲವಿ ಸಾಹೇಬರು ಕುಳಿತಿದ್ದರು. ಗಂಡು, ಹೂವಿನ ಲಡಿಗಳಿಂದ ಆವೃತವಾದ ‘ಸೆಹರ’ ವನ್ನು ಹಾಕದೆ, ಸಾಧಾರಣವಾಗಿ ಗುಲಾಬಿ ಹಾರವನ್ನು ಹಾಕಿ ಸಲ್ವಾರ್, ಅಚ್ಕನ್, ಟೋಪಿಯಲ್ಲಿ ಚಂದವಾಗಿ ಕಾಣುತ್ತಿದ್ದ. […]