ಬಾಳಿಕೆ
ಹತ್ತಾರು ವರುಷ ನೆರಳಾಗಿ ನಿಂತ ಮರ ತೊಲೆಯಾಗಿ ಉಳಿಯಿತು ನೂರಾರು ವರುಷ ನೂರು ವರುಷ ಆಳಿದ ಅರಸ ಹೆಣವಾಗಿ ಉಳಿಯಲಿಲ್ಲ ಮೂರು ದಿವಸ *****
ಸಂಜೆ ನಾನು ಮನೆಗೆ ಬರುವಾಗ ನನ್ನ ಆರಾಮ ಕುರ್‍ಚಿಯ (ರೋಕ್ ಚೈರ್) ಕಾಲು ಮೂರಿದಿತ್ತು. ಅದನ್ನು ಗೋಡೆಗೆ ಒರಗಿಸಿ ಇಟ್ಟಿದ್ದಳು ನನ್ನ ಸೊಸೆ. ಬೆಳಿಗ್ಗೆ ಅದನ್ನು ನಮ್ಮ – ಪೋರ – ಅವಳ ಮಗ, ಆಚೀಚೆ ದೂಡುತ್ತ ಮುರಿದಿದ್ದನಂತೆ ಅವನಿಗೆ ಸ್ವಲ್ಪ ಪೋಕರಿ ಹೆಚ್ಚು. ಒಬ್ಬನೇ ಮಗನೆಂದು ತಾಯಿ ತಂದೆಯ ಮುದ್ದಿಗೆ ಅಪಾರವಾಗಿ ಒಳಗಾಗಿದ್ದ. ನನಗೂ […]