ಚೇಳಿನ ಮೈ ತಾಮ್ರದ ಕಿಲುಬಿನ ಹಾಗೆ ಕಡುಪಚ್ಚೆ. ಏಡಿಯ ಮೈ ಶ್ರೀಮಂತೆಯ ಉಗುರಿನ ಹಾಗೆ ನಸುಗೆಂಪು. ಚೇಳು ಒಂದೇ ಶಿಲೆಯಿಂದ ಕೆತ್ತಿ ಕಡೆದು ತೆಗೆದಂತಿದೆ. ಏಡಿಯ ಕೈಕಾಲುಗಳು ಹೊಲಿದು ಸೇರಿಸಿದಂತಿವೆ. ಚೇಳು ಭಯೋತ್ಪಾದಕನಂತೆ ನಿಶ್ಚಿಂತೆಯಿಂದಿದೆ....
ಪಾಪ ಸೂರ್ಯ ಅನ್ನೋ ಪ್ರಾಣಿ ಎಲ್ಲರಂತೆ ನಿದ್ದೆ ಮಾಡ್ಲಿಕ್ಕೆ ಕತ್ತಲೆ ಹುಡುಕಿಕೊಂಡು ಒಂದೇ ಸಮನೆ ತಿರುಗುತ್ಲೇ ಇದೆ ಅವನು ಕಾಲಿಟ್ಟಲ್ಲೆಲ್ಲಾ ಕೈಗೆ ಸಿಗದಂತೆ ಕಣ್ ತಪ್ಪಿಸಿ ಕತ್ತಲೇನೂ ಸುಖಾಸುಮ್ನೆ ಹೆದರ್‍ಕೊಂಡು ಓಡುತ್ಲೇ ಹೋಗ್ತಿದೆ. *****