ಉಸಿರಿನ ಹಡಗು
Latest posts by ನರಸಿಂಹಸ್ವಾಮಿ ಕೆ ಎಸ್ (see all)
- ಶ್ರೀ ಕೃಷ್ಣನಂತೊಂದು ಮುಗಿಲು - January 7, 2017
- ಸಣ್ಣ ಸಂಗತಿ - September 18, 2015
- ಪಂಪನಿಗೆ - September 11, 2015
ಕಾಲದ ಕಡಲಲಿ ಉಸಿರಿನ ಹಡಗು ತೇಲುತ ನಡೆದಿದೆ ಹಗಲೂ ಇರುಳೂ; ನೀರಲಿ ತೆರೆದಿವೆ ನಿಲ್ಲದ ದಾರಿ.- ಎಲ್ಲಿಂದೆಲ್ಲಿಗೆ ಇದರ ಸವಾರಿ! ಕಾಮನ ಕೋರುವ ಕಣ್ಣು ಇದಕ್ಕೆ, ಬಯಕೆಯ ಬೀರುವ ಬಾವುಟ-ರೆಕ್ಕೆ, ಕ್ಷುಧಾಗ್ನಿ ಹೊರಳುವ ತುಂಬದ ಹೊಟ್ಟೆ, ಹಾಹಾಕಾರದ ಹೆಬ್ದುಲಿ-ರಟ್ಟೆ. ಮುಡಿಯಲಿ ಗರ್ವದ ಹೊಗೆಯ ಕಿರೀಟ, ಮುಖದಲಿ ತಂಗಿದೆ ಮಕ್ಕಳ ನೋಟ, ಸುತ್ತಾ ಉತ್ತೆಸೆದಲೆಗಳ ಕಾಟ; ಮರುಭೂಮಿಯಲಿದು […]