ಸೌಂದರ್ಯಕ್ಕೆ

ನೆರಳನರಸುವ ಕೂಸು ತನ್ನ ಎಳೆ ಕೈಗಳಲಿ ಅದ ಹಿಡಿದು ತನ್ನೊಡನೆ ಆಟಕುಪಯೋಗಿಸುವ ಎಳೆ ಚಪಲಕೀಡಾಗಿ-ಹಿಗ್ಗಿನಲಿ ಓಡುತಲಿ ಅದರೆಡೆಗೆ ನಡೆದಾಗ, ನೆರಳು ಕೈಗಳ ಹಿಡಿತ ತಪ್ಪಿಸುತ ಜಾರಿರಲು, ಕಣ್ಣೀರ ಕರೆಯುತ್ತ ತಾಯ ಮಡಿಲಲಿ ತನ್ನ ದುಗುಡ...