
ವನ, ಮನ, ಮನೆ, ಮಡದಿಯೊಂದಾದಂದು ಘನ ಕೃಷಿಗಿರದಾವ ಮನ್ನಣೆಯ ಕುಂದು ಧನದ ಮಿತಿಯನರಿತು ಅನ್ನದ ಗತಿಯ ನನುಸರಿಸಿ, ತನು ಮನದ ಬಯಕೆ ಯನು ಅವರಿಗವರೇ ಭರಿಸಿದರದು ಸಾವಯವ – ವಿಜ್ಞಾನೇಶ್ವರಾ *****...
ಅಂದಂದಿನನ್ನವಲ್ಲಲ್ಲೇ ಸಿಗುವಂತೆ ಅಲ್ಲಲ್ಲೇ ನೂರ್‌ಜಾತಿ ಬೆಳೆವಂತೆ ಆತುರವು ಅವಸರವು ಅಳಿವಂತೆ ಅನ್ಯದೇಶದವಲಂಬನೆಯು ಕಡಿವಂತೆ ಆನಂದವಿರಲದುವೆ ಸಾವಯವ – ವಿಜ್ಞಾನೇಶ್ವರಾ *****...
ನಿಮಿಷಕದಿನಾರು ಉಸಿರು. ಬಾಯಾರಿ ಹತ್ತಾರು ನೀರು ಕಮ್ಮಿಯೊಳನ್ನ ಮೂರು ದೊರೆಕೊಂಡೊಡೆಲ್ಲ ಕಾರುಬಾರು ಹಮ್ಮಿನಾ ಮೊದಲೊಮ್ಮೆ ಸುಮ್ಮನಾಲೋಚಿಸುತ ಆಮಿಷದ ಬಾರು ಕಾರನು ಮಿತಿಯೊಳಿರಿಸುತ ಲೆಮ್ಮ ಭುವನದಾರೋಗ್ಯ ಉಳಿಸಿದರದುವೆ ಸಾವಯವ – ವಿಜ್ಞಾನೇಶ್ವ...
ಹಸುರ ಕೆಲಸಗಳೆಲ್ಲ ಜೀವಕು, ಬದುಕಿನುದ್ದಕು ಹಸಿದು ತಿನ್ನುತ, ಬೀಜ ಚೆಲ್ಲುತ, ಹೊಸತು ಬೆ ಳೆಸುತ, ತಂಪು ಕಾಯುವ ಲೇಸು ಜೀವನವೆಲ್ಲ ಜೀವಕು ಏಸು ಜೀವರ ಶ್ರಮದ ಹಸುರನು ಘಾಸಿಗೊಳಿಸದ ಕಸದ ಕೃಷಿಯನು, ಹಸದಿ ಸಾವಯವವೆನಲಕ್ಕು – ವಿಜ್ಞಾನೇಶ್ವರಾ *...
ನಾರು, ಬೇರು, ಪತ್ರೆ, ಫಲ, ಹಸುರುಹ ಸುರಿಗು ತರತರದ ಬರತರದವಯವವು ನೀರ ಕುಡಿಯಲಿಕೆ, ಮಣ್ಣ ತಿನ್ನಲಿಕೆ ಬರಿಯೆಲೆಯೆ ಮಡಕೆ, ಸೌರ ಶಾಖದೊಳಡುಗೆ ಸೂರ್‍ಯನೊಲವಿನ ಕೊಡುಗೆ, ಹಸುರುಡುಗೆ ಸಾವಯವ – ವಿಜ್ಞಾನೇಶ್ವರಾ *****...
ತಿನ್ನಲಿಕೆ ಬಾಯಿ ಕೊಟ್ಟಂದು ದೇವ ತಾ ಸು ಮ್ಮನಿರಲಿಲ್ಲ ಕೊಟ್ಟಿಹನು ಕಣ್ಣು, ಕಿವಿ, ಮೂಗು ಅನ್ನದಿರವನು ಅರಸಿಯುಣ್ಣಲಿಕೆಲ್ಲವಯವವು ಚೆನ್ನತನದೊಳೆಮ್ಮ ಕೈಕಾಲು ಬಳಲಿದೊಡಾ ಅನ್ನವನು ಸಾನುರಾಗದಿ ಸಾವಯವವೆನಲಕ್ಕು – ವಿಜ್ಞಾನೇಶ್ವರಾ *****...
ನೂರೊಂದು ಹೆಸರಿನೊಳೊಂದು ಸಾವಯವ ಸಾರಿ ಪೇಳ್ವುದದುವೆ ಅವಯವಗಳುನ್ನತಿಯ ಪರಿ ಪರಿಯ ಜೀವಕೆಲ್ಲಕು ನೂರೊಂದವಯವ ದಾರಿ ನೋಡಲಿಕೆ, ಭಾರಿ ಮಾಡಲಿಕೆ ಭೂರಿ ಅನ್ನವನರಸಿಯುಣ್ಣಲಿಕೆ – ವಿಜ್ಞಾನೇಶ್ವರಾ *****...
ಕೃಷಿಯೆಂದರೊಂದೇ ಹೆಸರಿತ್ತಂದು ರಾಶಿ ಹೇಳುವರಿಂದು ಹೆಸರ ನೂರೊಂದು ಹುಸಿ ಹೆಸರುಗಳಲ್ಲಲ್ಲೇ ಹಿಂದು ಮುಂದು ಕಾಸಿನವಸರವೆಂದು, ಅಧಿಕ ಇಳುವರಿಗೆಂದು ಹೊಸ ಘಾಸಿ ತಂತ್ರದೊಳೆಲ್ಲ ಜಗ ಬರಿದಿಂದು – ವಿಜ್ಞಾನೇಶ್ವರಾ *****...
ಏರಲಾರದದು ಆಕಾಶದೆತ್ತರಕಾದೊಡಂ ಹೋರಿ ಬಾಳ್ವುದದು ಮಣ್ಣಿರುವ ತನಕ ತರತರದ ಹೂ ಹಣ್ಣು ಕೊಡದಾದೊಡಂ ನೊರೆ ಹಾಲ್ ಬೆಣ್ಣೆಯಪ್ಪುದಾ ಹಸುತಿನುವ ಗರಿಕೆಯಂತೆನ್ನ ಕವನ ಸಂಗ್ರಹವು – ವಿಜ್ಞಾನೇಶ್ವರಾ *****...
ಬುದ್ಧಿಯನ್ನು ತಿದ್ದಲಿಕೆಂದು ಲೋಕವನೆ ತಾ ಬಯ್ದು ಭರದೊಳಂತೆ ತಿರುಗಿ ಬಯ್ದವರೆನ್ನ ಬಂಧುಗಳೆಂದು ಬರೆದೊರದೊದೆಸಿಕೊಂಡವರೆಷ್ಟೋ ಜನರಾಗಿಹರು ಹಿಂದು ಬಲಕಪ್ಪ ಅನ್ನದೊಳು ಜೊತೆಗೂಡಿ ನಾರಿರ್ಪಂತೆನ್ನ ಬರಹಗಳಿವ್ ಹಿಂದಾದವರ ಜೊತೆಗೊಂದು ಬಿಂದು – ...








