ಕಡಲು ಬೆಟ್ಟಕ್ಕೆ ಹೇಳಿತು

ಕಡಲು ಬೆಟ್ಟಕ್ಕೆ ಹೇಳಿತು: "ನನ್ನ ತಳ ಮಂದರ, ನಿನ್ನ ಮುಡಿ ತಾರ, ನಡುವಿನ ಸ್ವರಸಹಿತ ನಾನೂ ನೀನೂ ಕೂಡಿ ಭೂಮಿ ಏನು ಗಾನಮನೋಹರ!" ಬೆಟ್ಟ ಕಡಲಿಗೆ ಹೇಳಿತು : "ಅದಕ್ಕೆಂದೇ ಆಗಸ ಪ್ರತಿ ರಾತ್ರಿ...

ನೆರೆಯವರು ನಕ್ಕರು

ನೆರೆಯವರು ನಕ್ಕರು: "ಇವನಿಗೆ ಹುಚ್ಚು ಕಚ್ಚಿದೆ ಮುಖದಲ್ಲಿ ದಿಗಿಲು ಬಿಚ್ಚಿದೆ ಹುಲಿಕಣ್ಣೆಲ್ಲೋ ದಿಟ್ಟಿಸಿ ನೋಡಿದೆ ಮೊಸರನ್ನದ ಬಲಿಕೊಟ್ಟರೆ ಹೊಸದನಿ ಮಾಯುತ್ತದೆ. ಇವನು ಹೊಸಿಲು ದಾಟದಂತೆ ಕಾಯುತ್ತದೆ." ಅವರಿಗೇನು ಗೊತ್ತು ಪ್ರತಿ ರಾತ್ರಿ ಅಧೋಲೋಕಗಳ ಕದ...

ಅಚ್ಚರಿ ಕಚ್ಚಿದ ಬದುಕು

ಅಚ್ಚರಿ ಕಚ್ಚಿದ ಬದುಕಿನ ಆಸೆ ಮುಗಿಯದು. ನುಡಿಯಲು ಭಾಷೆ ಸಾಲದು. ಬೆದೆ ಕುದಿವ ಗೂಳಿಯ ಕುರುಡು ಆವೇಶಕ್ಕೂ ಬರಡು ಹಸು ಬಸಿರು ತಾಳದು ಪಹರೆ ದನಿಗಳೆಲ್ಲ ಮುಜುರೆಮಾಡಿ ಸರಿದವು. ಈಗ ನನ್ನದೆ ಕೊರಳು, ತಪ್ಪಿ...

ಈ ಕೊರಗು

ಈ ಕೊರಗು ಹಣ್ಣೆಲೆ ಮಣ್ಣಿಗೆ ಉರುಳಲು ಹೆದರಿದ ದನಿಯಲ್ಲ, ಗೇಯದ ಪ್ರಾಯದ ಮಾಯುವ ಹುಸಿ ಕಂಗಾಲಲ್ಲ, ಗಾಯಕರೆದ ಮದ್ದಲ್ಲ ಡೊಳ್ಳಿನ ಸದ್ದೇ ಅಲ್ಲ. ಹಸಿದ ಕರಣ ಭರ್ತಿ ಉಂಡು ಮರಣದೊಳಿದ್ದಾಗ ನನ್ನ ಹರಣ ಕಂಡ...

ನೀನೊಲಿದ ಗಳಿಗೆ

ಹೊಕ್ಕುಳಲ್ಲಿ ಹೂಗುಟ್ಟಿ ಬಾಯಿಗೆ ಬರದವನೆ, ಮಕ್ಕಳ ಕಣ್ಣುಗಳಲ್ಲಿ ಬಾಗಿಲು ತೆರೆದವನೆ. ಬುದ್ಧಿ ಸೋತು ಬಿಕ್ಕುವಾಗ, ಹಮ್ಮು ಹಠಾತ್ತನೆ ಕರಗಿ ಬದುಕು ಕಾದು ಉಕ್ಕುವಾಗ ಜಲನಭಗಳ ತೆಕ್ಕೆಯಲ್ಲಿ ದೂರ ಹೊಳೆವ ಚಿಕ್ಕೆಯಲ್ಲಿ ನಕ್ಕು ಸುಳಿಯುವೆ. ಆಗ...

ನಿನ್ನ ಧಿಕ್ಕರಿಸಿದ ತರ್ಕ

ನಿನ್ನ ಧಿಕ್ಕರಿಸಿದ ತರ್ಕಕ್ಕೆ ಮೊನ್ನೆ ಕಾಲು ಮುರಿಯಿತು ಬಗ್ಗಿ ಕೈ ಮುಗಿದು ಹೇಳಿತು "ನಾ ತುಳಿಯದ ನೆಲವಿದೆ, ಕುಡಿಯದ ಗಾಳಿ ನೀರು, ಅರಿಯದ ನೆಲೆ ಇವೆ. ಅವಕ್ಕೆ ಬಗೆ ಬಗೆ ಬೆಲೆ, ಬೇರು. ಅಲ್ಲೆಲ್ಲ...