ನೀನೆಲ್ಲೋ ನಾನೆಲ್ಲೋ ದೂರದೂರ

ನೀನೆಲ್ಲೋ ನಾನೆಲ್ಲೋ ದೂರದೂರವಾಗಿ ಕಾಯುವೆವು ಕೂಡಲೆಂದು ಹೃದಯ ಭಾರವಾಗಿ ಜೊತೆಯಾಗಿರಲು ಇರುತಿತ್ತೇ ಇಂಥ ತೀವ್ರಧ್ಯಾನ? ನೆಲದ ಮಿತಿಯ ಮೀರಿದಂಥ ಸೂರ್ಯಚಂದ್ರ ಕಾಣದಂಥ ಕಲ್ಪನೆಗಳ ಯಾನ? ಇಂಥ ಪ್ರೀತಿಯೊ೦ದಕೇ ತಾಳಬಲ್ಲ ಕೆಚ್ಚು, ಬೇಡಿದೊಡನೆ ಬಾರದೆ ಹಾಗೆಂದೇ...

ಹೇಳದಿದ್ದರು ನೀನು

ಹೇಳದಿದ್ದರು ನೀನು ಎಲ್ಲ ಬಲ್ಲೆನು ನಾನು ಏನಿದೆ ಎಂದು ಎದೆಯಾಳದಲ್ಲಿ; ನಿನ್ನ ಕಣ್ಣಿನೊಳೇನೊ ನೋವು ತೇಲುತ್ತಿಹುದು ಕರಿಮೋಡ ಸುಳಿದಂತೆ ಬಾನಿನಲ್ಲಿ ನೂರು ಹಳೆ ನೆನಪುಗಳು ಚೀರಿ ಹೊಮ್ಮುತ್ತಲಿವೆ ಮರವೆಯಲಿ ಹುಗಿದರೂ ಮೇಲಕೆದ್ದು; ನಮ್ಮ ಮೇಲೇ...

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು

ನಿನ್ನ ಕನಸುಗಳಲ್ಲಿ ಮುಳುಗಿಹೋದೆನು ನಾನು ಎತ್ತಿ ಕಾಪಾಡುವರು ಯಾರು? ಸವೆನೆನಪಿನಾಳದಲಿ ಹುಗಿಮ ಹೋಗಿರುವೆನು ಅಗೆದು ತೆಗೆಯುವರಿಲ್ಲವೇನು? ನಿನ್ನ ಬಯಕೆಯ ಗಾಳಿ ಹಾರಿಸಿತು ನನ್ನ ಹಿಡಿದು ನಿಲ್ಲಿಸುವವರು ಯಾರು? ಕ್ರೂರ ವಿರಹಾಗ್ನಿಯಲಿ ಬೇಯುತಲೆ ಇರುವೆ ನೀರೆರದು...

ಪ್ರೀತಿಯ ಕನಸೆಲ್ಲ ಕರಗಿಹೋಯಿತೆ ಕೊನೆಗೂ?

ಪ್ರೀತಿಯ ಕನಸೆಲ್ಲ ಕರಗಿ ಹೋಯಿತೆ ಕೊನೆಗೂ ಸೋತುಹೋಯಿತೆ ಜೀವ ಮೂಕವಾಯಿತೆ ಭಾವ ತೂಕ ತಪ್ಪಿತೆ ಬದುಕಿಗೆ? ಗಾಳಿಯ ಅಲೆಯಲ್ಲಿ ನೀ ನಕ್ಕ ದನಿಯಿದೆ ನೀರಿನ ತೆರೆಯಲ್ಲಿ ಸರಿದಂಥ ನೆನಪಿದೆ ಮನಸೆಲ್ಲ ಹೊಯ್ದಾಡಿದೆ ಜೊತೆಯಾಗಿ ಬಾಳಿದ...