ನಡು ಬಡವಾದೊಡಲ್ಲಿಪ್ಪ ಸಿರಿತನಕೆಣೆಯುಂಟೇ?

ದುಡಿಮೆಯೊಳನ್ನದೊಡಗೂಡಿ ಜ್ಞಾನವಿರುತಿರಲು ಗಾಡಿ ಪುಸ್ತಕಗಳದ್ಯಾಕೋ ಮಾಡಿ ಕಲಿಯದ ಮೇಲೆ ಕುಡಿದುಣದೆ ಬರಿದು ಟಾನಿಕ್ಕುಗಳಿಂದೇನಹುದು? ಬಡತನದೊಳತಿ ಬಡತನವಜೀರ್ಣದೊಡಲು ಮೌಢ್ಯದೊಳತಿ ಮೌಢ್ಯ ದುಡಿಯದುಂಬೊಲವು - ವಿಜ್ಞಾನೇಶ್ವರಾ *****

ದುಡಿಮೆಗೊಲಿಯದ ಜ್ಞಾನ ನಿಧಿಯುಂಟೇ?

ದೇಹ ಶಕ್ತಿಗೂಟದೊಳು ಹಿತಮಿತವೆ ಮೊದಲು ದೋಷವದು ಟಾನಿಕ್ಕು ಅದಕೆ ಬದಲು ಧರಣಿಯೊಲವಿಗೆ ದೇಹ ದುಡಿತವೆ ಮೊದಲು ದುಡಿದನುಭವಕೆ ಪುಸ್ತಕವಲ್ಲ ಬದಲು ದುಡಿತದೊಳನ್ನ ಜ್ಞಾನಗಳೊಂದಾಗಲೆಲ್ಲ ಚೆಲುವು - ವಿಜ್ಞಾನೇಶ್ವರಾ *****

ಸಾ ಎಂದೊಡದು ಸ್ವರ್ಗಕ್ಕೆ ಸರಣಿ ಮೆಟ್ಟಿಲಾಗದೇ?

ಸಾವಯವವೆಂದೊಡದು ಸಂಗೀತದಂತೆ ಸತ್ತ್ವದೊಳೊಂದೆ. ಮೊದಲಕ್ಷರವು ಸಾಕಾರವಾದಂತೆ ಸೌಂದರ್‍ಯಕ್ಕುಂ, ಸ್ವರ್ಗಕ್ಕುಂ ಸಾವಯವ ಸಂಯಮವು ಸಾನುರಾಗದ ಸೊಪಾನಗಳದರೊಳೇರಿದೊಡೆ ಸ್ವಾವಲಂಬೀ, ಮತ್ತಿಳಿದೊಡದು ಸ್ವದೇಶೀ - ವಿಜ್ಞಾನೇಶ್ವರಾ *****

ಸಿದ್ಧನು ರಾಜನಾಗಬೇಕಲ್ಲದೆ, ಸಮಾನರೆಲ್ಲರೆಂದರೆಂತು?

ಉದ್ಯೋಗಗಳಿರಬಹುದು ನೂರೊಂದು ಅದರೊಳೆಲ್ಲದಕು ಮೇಲಿದ್ದು ರಾಜನಪ್ಪೊಡದು ಬದುಕಿದೊಡೆ ಬದುಕಿಸುವ ಕೃಷಿಯಹುದು ಮದದೊಳೆಮ್ಮುದ್ಯೋಗವಧಿಕವೆನುತೆಲ್ಲರಧಿಕಾರ ದಾಧಿಕ್ಯದೊಳು ಮಧು ಮದಿರೆಯಾಗಿಹುದಲಾ - ವಿಜ್ಞಾನೇಶ್ವರಾ *****

ಕಡು ಕೌತುಕವಲಾ? ಈ ಬಗೆಯ ಶರಣಾಗತಿ?

ಆಡುವುದು, ಪಾಡುವುದು, ಏನೆಲ್ಲ ಮಾಡುವುದು ಬಡವನಾದೊಡಂ ಬಿಡದೆ ತಾ ಜಾಣನೆನಿಸಿಕೊಳು ವೊಡೆಲ್ಲರಿಗು ನೂರೊಂದವಸರಗಳವಕಾಶಗಳಿ ರ್ದೊಡಂ ಕೈ ಕೆಸರುಣದ ಗುಂಪನೇ ಬಡ ಬಡಿಸಿ ತಜ್ಞರೆನುವಜ್ಞತೆ ಯಾಕೋ ರೈತಂಗೆ - ವಿಜ್ಞಾನೇಶ್ವರಾ *****

ಮೌನ ತಪವದಾರದೋ? ಸಿದ್ದಿ ಯಾರಿಗೋ?

ಏನ ಪೇಳಲಿಯಮ್ಮನ್ನದಾತನ ಸಿದ್ಧಿಯನು? ದಾನ ಸುದ್ದಿಯನು! ತಾನೇನ ಬೆಳೆದರು ಘನನು ತಾನೆಲ್ಲವನು ಬಗೆಬಗೆಯ ಕಂಪೆನಿಗಿಕ್ಕಿ ಕೊನೆಯೊಳೆತ್ತುವ ನೋಡಾ ರಿಕ್ತ ಹಸ್ತವನು ಶೂನ್ಯ ಸಂಪಾದನೆಯಾಧ್ಯಾತ್ಮ ಪ್ರತಿನಿಧಿ ಇವನು - ವಿಜ್ಞಾನೇಶ್ವರಾ *****

ಬಲ್ಲಿರಾ ನೀವ್ ತಿಪ್ಪೇಶನ ಮಹಿಮೆಯನು?

ಕಾಲವೊಂದಿತ್ತಂದು ತಿಪ್ಪೇಶನೆಂಬೊಬ್ಬ ದೇವನಿರುತಿ ರಲು ಉತ್ತು ಬಿತ್ತಿ ಬೆಳೆವನ್ನದುದ್ಯೋಗದೊಳು ಎಲ್ಲರಿಗೂ ವಿಹಿತದಾಸಕ್ತಿ ಆದಾಯವಿರುತ್ತಿತ್ತು ಬಲ್ಲಿದರವರಿಗವರೇ ಮಾಲಿ, ಹಮಾಲಿ, ಜಾಡಮಾಲಿ ಮಾಲಿಕರಾಗಿರಲನ್ನದೊಳು ಅನುರಾಗವಡಗಿತ್ತು - ವಿಜ್ಞಾನೇಶ್ವರಾ *****

ಅರರೇ! ಲಾಭವೆಂದೊಡದೇನು?

ಆರೊ ಕೇಳಿದರೆನ್ನವದೆಲ್ಲ ಸರಿಯಾದೊಡಂ ಬರಿ ಸಾವಯವದೊಳಿಹುದೇ ಲಾಭವೆಂದೆನುತ ಬರವಿರದೆ ತಿನ್ನಲುಡಲು ದುಡಿದಲ್ಲಿ ದಣಿ ದಿರಲು, ದಿಂಬಿರದೆ ಸುಖ ನಿದ್ರೆ ಬರುತಿರಲು ಕ್ರೂರತನದೊಳೇನು ಸೂರೆಯೋ, ಧರೆಸೊರಗೆ - ವಿಜ್ಞಾನೇಶ್ವರಾ *****

ಯುದ್ಧದುಳಿಕೆ ಗೊಬ್ಬರವನಿಟ್ಟವರು ಜಾಣರೇ?

ಪೆದ್ದನಾರಂಭ ಗೊಬ್ಬರದೊಳೆಂದೆಂಬ ಪ್ರ ಸಿದ್ಧ ಹಳ್ಳಿ ಮಾತುಂಟಾದೊಡಂ ಜಾಣರೆಲ್ಲರು ಪ್ರ ಬುದ್ಧವೆಂದೆನುತಾ ಪೇಟೆ ಸೇರುತಲಾ ಗೊಬ್ಬರಕೆ ಕೃದ್ಧ ರೂಪವ ಕೊಟ್ಟು ಪೇಳ್ವರಲಾ ಗದ್ದೆ ಗಿದನೆಸೆಯ ಪೆದ್ದ ತಾ ಬುದ್ಧನಪ್ಪನೆಂದೆನುತಾ - ವಿಜ್ಞಾನೇಶ್ವರಾ *****

ಶಾಲೆಯಕ್ಷರಕ್ಕೂ ಕೃತಕಗೊಬ್ಬರಕ್ಕೂ ಏನಾದರೂ ವ್ಯತ್ಯಾಸವುಂಟಾ?

ಕಾಲವೊಂದಿತ್ತಂದೆಲ್ಲರಲು ಕೃಷಿಯೊಡಗೂಡಿ ಕಲಿಕೆ ನಲಿಕೆ ಬಯಕೆಗಳೆಲ್ಲವುಂ ಸಾವಯವವಾಗಿರಲದನು ಬ ದಲಿಸಲೆಷ್ಟು ತಜ್ಞರು ಶ್ರಮಿಸಿದರೋ ಬಲ್ಲವರು ಇಲ್ಲ ಕಾಲ ಬದಲಿಹುದಿಂದೆಲ್ಲ ಕೃತಕ ಶಾಲೆಯೊಳು ವಿಷಕೃಷಿ ಜ್ವಾಲೆಯೊಳು ಬಿದ್ದಿಹರವರ ಬಿಡಿಸುವ ಬಲ್ಲಿದರೆ ಇಲ್ಲ - ವಿಜ್ಞಾನೇಶ್ವರಾ *****
cheap jordans|wholesale air max|wholesale jordans|wholesale jewelry|wholesale jerseys