Home / ಇಂಗ್ಲಿಷ್ ಗೀತಗಳು

Browsing Tag: ಇಂಗ್ಲಿಷ್ ಗೀತಗಳು

ಇಂಗ್ಲೆಂಡ ನಾವಿಕರಿರಾ – ಕಾಯುವಿರಿ ನೀವೆಮ್ಮ ಕಡಲುಗಳನು; ನಿಮ್ಮ ಬಾವುಟ ತಡೆಯಿತೊಂದು ಸಾವಿರ ವರುಷ ಗಾಳಿಯನು ಕಾಳಗವನು. ನಿನ್ನೊಮ್ಮೆ ನಿಮ್ಮ ವಿಜಯಧ್ವಜವ ತೂಗಿಬಿಡಿ ಇನ್ನೊಬ್ಬ ಹಗೆಯ ತಾಗಿ ಕಡಲಲ್ಲಿ ನಡೆಗೊಳ್ಳಿ- ಬಿರುಗಾಳಿ ತೀಡುತಿರಲು ಹಿ...

ಅಳಿದರೇ ಹಾ ಧೀರರು! ಕಳೆದುಹೋದರೆ ಧೀರರು! ತಮ್ಮ ನಾಡಿನ ಕರೆಯೊಳೆಲ್ಲರು ಮುಳುಗಿ ಹೋದರು ತೆರೆಯೊಳು. ಎಂಟುನೂರ್ವರು ಧೀರರು, ಕಂಡ ಕೆಚ್ಚಿನ ಧೀರರು, ಒಂದು ಮಗ್ಗುಲಿಗೆಳೆದು ಬಗ್ಗಿಸಿ ಒರಗಿಸಿದ್ದರು ಹಡಗನು. ನೇಣುಗಳ ನೆಲಗಾಳಿ ಕುಲುಕಿತು. ಹಡಗು ತಲೆಕ...

ಹರಿದಾರಿ, ಹರಿದಾರಿ, ಹರಿದಾರಿ ಮುಂದೆ, ಮೃತ್ಯುವಿನ ಪಂಜರಕೆ ನುಗ್ಗಿದರು ಮುಂದೆ. “ನುಗ್ಗಿ ಮುಂದಕೆ, ಕುದುರೆ! ಕೊಚ್ಚಿ ಗುಂಡನು!” ಎಂದ ಆರ್ನೂರು ರಾವುತರು ಮೃತ್ಯುವಿನ ಪಂಜರಕೆ ನುಗ್ಗಿದರು ಮುಂದೆ. “ನುಗ್ಗಿ ಮುಂದಕೆ, ಕುದುರೆ!” ಕುಗ್ಗಿದವನೊಬ್ಬು...

ತಂಬಟೆಹೊಯಿಲಿಲ್ಲ, ವಾದ್ಯದ ಹಲುಬಿಲ್ಲ, ಹೆಣವ ಕೋಟೆಗೆ ನಾವು ತ್ವರೆಯಲೊಯ್ದಾಗ; ಒಬ್ಬ ಸಿಪಾಯಿಯ ಕಳುಹುವ ಸುರುಟಿಯಿಲ್ಲ, ನಮ್ಮ ನಾಯಕನನು ಹೂಳುತಿದ್ದಾಗ. ಹೂಳಿದೆವವನನು ಸರಿಹೊತ್ತಿನಿರುಳಲಿ, ಮಣ್ಣ ಬಂದೂಕದ ಮೊನೆಯಿಂದ ತಿರುವಿ; ನುಸುಳಿ ಬರುವ ಬೆಳದಿ...

ಕಾಡಿನೊಳು ನೀನಿಲ್ಲ , ಬೀಡಿನೊಳಗಿಲ್ಲ, ಬಯಸುವೊಡೆ ಬೇಸಗೆಯ ತೊರೆಯಾದೆಯಲ್ಲ! ಮತ್ತೆ ಮಳೆ ಕೊಳ್ಳುತಲೆ ಏನದರ ಮೊಳಗು! ಇನ್ನು ಜಯ ನಮಗೆಲ್ಲಿ? ನಿನಗೆಲ್ಲಿ ಬೆಳಗು? ಕಣದ ಬಳಿ ಕೊಯ್ಯುವುದು ಜೋಲುತಲೆ ಹೊಡೆಯೆ, ರಣದೊಳಗೊ ಹೊಯ್ಯುವುದು ನೆರೆದಾಳ ತೊಡೆಯೆ....

ಕಾಳೆ, ಹರೆ, ಕೊಂಬುಗಳ ಏಳಿ, ಮೊಳಗಿ, ಏಳಿ, ನಾಡುಗಳ ಕುಳಗಳನು ಕೂಡಿಕೊಳ ಹೇಳಿ. ಬನ್ನಿರಣ್ಣ, ಬನ್ನಿರಣ್ಣ, ಅದೊ ಕೂಗು, ಕೇಳಿ. ಮನ್ನೆಯರ, ಬಂಟರಿರ, ಒದಗಿ, ಏಳಿ, ಏಳಿ. ಕಣಿವೆಗಳ, ಬೆಟ್ಟಗಳ ಗಡಿಯಿಂದ ಬನ್ನಿ. ಕಣೆ, ಬಿಲ್ಲು, ಕುಡುಗೋಲು, ಕೊಡಲಿಗಳ ತ...

ಆರು ನೀನೆಲೆ ಹರುಷಮೂರುತಿ? ಹಕ್ಕಿಯೆಂಬರೆ ನಿನ್ನನು! ತೋರಿ ದಿವಿಜರು ಸುಳಿವ ಬಳಿ, ಸುಖ ವುಕ್ಕಿಬಹ ನಿನ್ನೆದೆಯನು ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ! ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ; ಒಲೆದು ದಳ್ಳುರಿ ನೆಗೆದು...

ಹಿಡಿದು ಮಂಜು ಬೀಳುತಿತ್ತು, ಚುಕ್ಕಿ ಕಣ್ಣು ಮಿಟುಕುತಿತ್ತು; “ಕುಡಿಯೊ, ಕಂದ, ಕುಡಿಯೊ” ಎಂದು ನುಡಿವ ಮಾತು ಕಿವಿಗೆ ಬಿತ್ತು; ತಿರುಗಿ ನೋಡಲೊಬ್ಬೆಯಾಚೆ, ಒಬ್ಬಳಲ್ಲಿ ಹೆಣ್ಣು ಮಗಳು ನೊರೆಯ ಬಿಳುಪು ಕುರಿಯ ಮರಿಯ ತಲೆಯ ತಡವುತಿದ್ದಳು. ಕುರಿಗಳಿಲ್ಲ...

ಮುಗಿಲಿನಲಿ ಮಳೆಬಿಲ್ಲ ಕಾಣುತಲೆ ನಾನು ನೆಗೆದು ಕುಣಿದಾಡುವುದು ಹೃದಯ ತಾನು! ಅಂತೆ ಇದ್ದುದು ಮೊದಲು ಚಿಕ್ಕಂದಿನಂದು; ಅಂತೆ ಇಹುದೀ ಮೆರೆವ ಯೌವನದಲಿಂದು, ಅಂತೆ ಇರಲೆನಗಿನ್ನು ಮುಪ್ಪಿನಲೆ ಮುಂದೆ- ಅಂತಿರದೆ, ಸಾವು ಬರಲಂದೆ! ಮನುಜನಿಗೆ ಮಗು ತಂದೆ &...

ಹೊಳೆ ಬೆಳಗಿ ಜಾರುವುದು, ಗಿಳಿ ನೆಗೆದು ಹಾರುವುದು. ಬೆಳೆದ ಹೊಲ ಬಿಸಿಲಲ್ಲಿ ಮಲಗಿರುವುದು; ತಿಳಿಯಾದ ಬಾನಿನಲಿ ಬಿಳಿಮುಗಿಲು ತೇಲುವುದು, ಮಳೆಸೋತ ದಳದಂತೆ ಕದ್ದಡಗಿತು! ಕರೆಯ ಹೊಂಗೆಯ ಮರದ ನೆರಳ ಸೋಂಪಿನೊಳೊರಗಿ ಕುರುಬಹಯ್ದನು ಕೊಳಲನೂದುತಿರಲು, ಕೊ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...