
ಕವಿ:- ನನ್ನ ಹಾಡುಗಳನ್ನೆ ನೀನು ಕೇಳುತ ಕುಳಿತೆ, ನಿನ್ನ ಹಾಡನು ನಾನು ಕೇಳಲೆಂದು ಕುಳಿತೆ, ನನ್ನೀ ಹಿಗ್ಗು ಮರುದನಿಯ ಕೊಡುವಂತೆ ನಿನ್ನ ಕಣ್ಣಲಿ ಕಂಡೆ ಕುಣಿವುದೊಂದು. ರಸಿಕ:- ನನ್ನ ಕಂಗಳ ಕುಣಿತಗಳ ತಾಳಲಯದಲ್ಲಿ ಕಟ್ಟಿರುವೆ ನಿನ್ನ ನವ ಕಾವ್ಯವನ್ನ...
ಇರವಿಗೂ ಅರಿದೇನು? ಇರವೆ ಅರಿದರಿದು; ಮೇ- ಣಿದುವೆ ಅದ್ಭುತರಮ್ಯ ಶ್ರೀವಿಭೂತಿ! ಕಂಡುದನೆ ಕೊನೆಯೆಂದು ಕಣ್ಣು ಬಣ್ಣಿಸುತಿತ್ತು. ಅರಿವು ಒಡನುಡಿಯಿತ್ತು ‘ನೇತಿ ನೇತಿ’. ಒಂದು ಕಿಡಿಕಣದಲ್ಲು ಮಿಡಿದು ಮಿಳ್ಳಿಸುತಿರುವ ಇರವಿನಾಲದ ಬೀಜವದಕು ಕಿರಿದು. ಹ...













